ಕೋವರ್ ಕೊಲ್ಲಿ ಇಂದ್ರೇಶ್

ಬೆAಗಳೂರು, ಮಾ. ೨೯; ಕೊಡಗಿನಲ್ಲಿ ೨೦೧೮-೧೯ನೇ ಸಾಲಿನಲ್ಲಿ ಭೀಕರ ಪ್ರಮಾಣದ ವಿನಾಶಕಾರಿ ಭೂ ಕುಸಿತ ಸಂಭವಿಸಿ ಸಾವು ನೋವಿನ ಜತೆಗೇ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿ ಪಾಸ್ತಿಗೆ ಹಾನಿ ಆಗಿದ್ದರೂ ಸಹ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಒಮ್ಮೆಯೂ ಸಭೆ ಸೇರಿರಲಿಲ್ಲ ಎಂಬ ವಿಷಯವನ್ನು ಭಾರತದ ಲೆಕ್ಕಪತ್ರ ನಿಯಂತ್ರಕರು ಮತ್ತು ಮಹಾಲೇಖಪಾಲರು ಬಹಿರಂಗಗೊಳಿಸಿದ್ದಾರೆ. ಇದು ಬರೇ ಕೊಡಗಿನ ವಿಷಯವಲ್ಲ, ರಾಜ್ಯದ ಅನೇಕ ಜಿಲ್ಲೆಗಳಲ್ಲಿಯೂ ವಿಪತ್ತು ನಿರ್ವಹಣಾ ಪ್ರಾಧಿಕಾರ ಸಭೆಯನ್ನೇ ನಡೆಸಿಲ್ಲ ಎಂಬುದನ್ನು ಮಹಾಲೇಖಾಪಾಲರ ವರದಿ ಬಹಿರಂಗಪಡಿಸಿದೆ. ಕರ್ನಾಟಕದಲ್ಲಿ ವಿಪತ್ತು ನಿರ್ವಹಣೆಯ ಕಾರ್ಯನಿರ್ವಹಣೆ ಕುರಿತು ಆಮೂಲಾಗ್ರವಾಗಿ ವಿಶ್ಲೇಷಣೆ ನಡೆಸಿರುವ ಸಿಎಜಿಯು, ವಿಪತ್ತು ನಿರ್ವಹಣೆಯಲ್ಲಿ ರಾಜ್ಯ ಸರ್ಕಾರದ ತೀವ್ರ ನಿರ್ಲಕ್ಷ್ಯವನ್ನು ಪತ್ತೆ ಹಚ್ಚಿದೆ. ಈ ವರದಿ ಕುರಿತು ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ಅಧಿಕಾರಿಗಳೊಂದಿಗೆ ಸಭೆ ನಡೆಸಿಲ್ಲ ಎಂದು ತಿಳಿದು ಬಂದಿದೆ.

ವಿಪತ್ತು ನಿರ್ವಹಣಾ ಕಾಯ್ದೆ ೨೦೦೫ ರ ಪ್ರಕಾರ ಜಿಲ್ಲಾ, ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳನ್ನು ಒಳಗೊಂಡAತೆ ವಿಪತ್ತು ನಿರ್ವಹಣಾ ಪ್ರಾಧಿಕಾರ (ಆisಚಿsಣeಡಿ mಚಿಟಿಚಿgemeಟಿಣ ಚಿuಣhoಡಿiಣಥಿ) ವನ್ನು ರಚಿಸಲಾಗಿದೆ. ಜಿಲ್ಲಾ ಮಟ್ಟದ ಪ್ರಾಧಿಕಾರಕ್ಕೆ ಜಿಲ್ಲಾಧಿಕಾರಿಗಳು ಅಧ್ಯಕ್ಷರಾಗಿಯೂ, ಜಿಲ್ಲಾ ಪಂಚಾಯತ್ ಅದ್ಯಕ್ಷರು ಸಹ ಅಧ್ಯಕ್ಷರಾಗಿಯೂ, ಜಿಲ್ಲಾ ಪಂಚಾಯತ್, ಕಂದಾಯ, ಆರೋಗ್ಯ, ಪೊಲೀಸ್, ಅರಣ್ಯ, ಲೋಕೋಪಯೋಗಿ, ಹಾಗೂ ಕೃಷಿ ಇಲಾಖೆಗಳ ಜಿಲ್ಲಾ ಮುಖ್ಯಸ್ಥರು ಸದಸ್ಯರಾಗಿಯೂ ಇರುತ್ತಾರೆ. ದುರಂತ ಸಂಭವಿಸಿದಾಗ ಕೂಡಲೇ ಪ್ರಾಧಿಕಾರ ಸಭೆ ಸೇರಿ ಕೈಗೊಳ್ಳಬೇಕಾದ ಕ್ರಮ ಹಾಗೂ ಮುಂಜಾಗರೂಕತಾ ಕ್ರಮ ತೆಗೆದುಕೊಂಡು ಜಿಲ್ಲೆಯಲ್ಲಿ ಹೆಚ್ಚಿನ ಅಪಾಯ ಸಂಭವಿಸದAತೆ ಮುನ್ನೆಚ್ಚರಿಕೆ ವಹಿಸಬೇಕಾಗಿರುತ್ತದೆ. ಮತ್ತು ಹೆಚ್ಚಿನ ನೆರವು ಬೇಕಾದಲ್ಲಿ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಗಮನಕ್ಕೆ ತಂದು ನೆರವನ್ನು ಪಡೆಯಬಹುದಾಗಿದೆ. ಅಲ್ಲದೆ ಸಭೆ ನಡೆಸಿದ ನಡಾವಳಿಗಳನ್ನು ರಾಜ್ಯ ಪ್ರಾಧಿಕಾರದ ಗಮನಕ್ಕೆ ತರಬೇಕಾಗಿರುತ್ತದೆ. ಕೊಡಗಿನಲ್ಲಿ ೨೦೧೮ ರ ಆಗಸ್ಟ್ ಎರಡನೇ ವಾರದಲ್ಲಿ ಭೂ ಕುಸಿತ ಸಂಭವಿಸಿ ೧೮ ಜನರು ಮೃತರಾಗಿ , ನೂರಾರು ಜನರು ಮನೆಗಳನ್ನು ಕಳೆದುಕೊಂಡ ಸಂದರ್ಭದಲ್ಲೂ ವಿಪತ್ತು ನಿರ್ವಹಣಾ ಪ್ರಾಧಿಕಾರ ಒಮ್ಮೆಯೂ ಸಭೆಯನ್ನೇ ನಡೆಸದಿರುವುದು ಅಧಿಕಾರಿಗಳ ತೀವ್ರ ನಿರ್ಲಕ್ಷö್ಯಕ್ಕೆ ಜ್ವಲಂತ ನಿದರ್ಶನವಾಗಿದೆ. ೨೦೧೮-೧೯ನೇ ಸಾಲಿನಲ್ಲಿ ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಮುಖ್ಯವಾಗಿ ಕೊಡಗು, ಉತ್ತರ ಕನ್ನಡ ಮತ್ತು ಕೇರಳ ರಾಜ್ಯದಲ್ಲಿ ಸಂಭವಿಸಿದ ದುರಂತದಲ್ಲಿ ಅಧಿಕಾರಿಗಳು ಕರ್ತವ್ಯ ಲೋಪ ಎಸಗಿರುವುದನ್ನು ಮಹಾಲೇಖಪಾಲರು ವರದಿಯಲ್ಲಿ ದಾಖಲಿಸಿದ್ದಾರೆ. ಕೊಡಗು ಜಿಲ್ಲೆಯು ೨೦೧೮-೧೯ನೇ ಸಾಲಿನಲ್ಲಿ ತೀವ್ರ ಪ್ರವಾಹ ಮತ್ತು ಭೂ ಕುಸಿತಕ್ಕೆ ಒಳಗಾದರೂ ಸಹ ಡಿಡಿಎಂಎ ಒಮ್ಮೆಯೂ ಸಭೆ ಸೇರಿರಲಿಲ್ಲ ಎಂದು ಸಿಎಜಿ ವರದಿಯಲ್ಲಿ ವಿವರಿಸಿರುವುದು ಗೊತ್ತಾಗಿದೆ.

ಸಿದ್ದರಾಮಯ್ಯ ಅವರು ಮೊದಲ ಅವಧಿಯಿಂದ ಹಿಡಿದು ಬಿಜೆಪಿ ಸರ್ಕಾರದ ೪ಐದನೇ ಪುಟಕ್ಕೆ

(ಮೊದಲ ಪುಟದಿಂದ) ಅಧಿಕಾರಾವಧಿವರೆಗೆ (೨೦೧೭-೧೮ರಿಂದ ೨೦೨೨-೨೩) ರಾಜ್ಯದ ಬೆಳಗಾವಿ, ಚಿಕ್ಕಬಳ್ಳಾಪುರ, ದಕ್ಷಿಣ ಕನ್ನಡ, ದಾವಣಗೆರೆ, ಹಾವೇರಿ, ಕಲ್ಬುರ್ಗಿ, ಕೊಡಗು, ರಾಮನಗರ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿನ ಜಿಲ್ಲಾ ವಿಪತ್ತು ನಿರ್ವಹಣೆ ಪ್ರಾಧಿಕಾರಗಳು ನಿಯಮಿತವಾಗಿ ಸಭೆ ನಡೆಸಿರಲಿಲ್ಲ. ಕಳೆದ ೭ ವರ್ಷಗಳಲ್ಲಿ ಕೊಡಗಿನಲ್ಲಿ ಕೇವಲ ೫ ಬಾರಿ ಸಭೆ ನಡೆಸಲಾಗಿದ್ದರೆ ಬೆಳಗಾವಿ ಜಿಲ್ಲೆಯಲ್ಲಿ ೧೨ ಬಾರಿ ಸಭೆ ನಡೆಸಿತ್ತು. ಚಿಕ್ಕಬಳ್ಳಾಪುರದಲ್ಲಿ ೫ ಬಾರಿ, ದಕ್ಷಿಣ ಕನ್ನಡದಲ್ಲಿ ೨೮ ಬಾರಿ ಸಭೆ ನಡೆಸಿತ್ತು. ಆದರೆ ದಾವಣಗೆರೆ ಜಿಲ್ಲೆಯಲ್ಲಿ ಒಂದೇ ಒಂದು ಸಭೆಯನ್ನೂ ನಡೆಸಿರಲಿಲ್ಲ. ಹಾವೇರಿಯಲ್ಲಿ ೧೨ ಬಾರಿ, ರಾಮನಗರದಲ್ಲಿ ೧೨ ಬಾರಿ, ಶಿವಮೊಗ್ಗದಲ್ಲಿ ೧೧ ಬಾರಿ ಸಭೆ ನಡೆಸಲಾಗಿದೆ. ಕಲ್ಬುರ್ಗಿಯಲ್ಲಿ ಎಷ್ಟು ಬಾರಿ ಸಭೆ ನಡೆಸಲಾಗಿದೆ ಎಂದು ಸಿಎಜಿಗೆ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರವು ಯಾವುದೇ ಮಾಹಿತಿಯನ್ನು ಒದಗಿಸಿಲ್ಲ.

ದಕ್ಷಿಣ ಕನ್ನಡ ಮತ್ತು ರಾಮನಗರ ಜಿಲ್ಲೆಗಳು ಮಾತ್ರ ಎಲ್ಲಾ ವರ್ಷಗಳಲ್ಲಿ ನಿರಂತರವಾಗಿ ಡಿಡಿಎಂಎ ಸಭೆಗಳನ್ನು ನಡೆಸಿವೆ. ೨೦೧೮-೧೯ರಲ್ಲಿ ಬೆಳಗಾವಿಯ ಡಿಡಿಎಂಎ ಒಮ್ಮೆಯೂ ಸಭೆ ಸೇರಿರಲಿಲ್ಲ. ಮತ್ತು ಜಿಲ್ಲೆಯು ವರ್ಷದಿಂದ ವರ್ಷಕ್ಕೆ ವಿವಿಧ ವಿಪತ್ತುಗಳಿಗೆ ಒಳಗಾಗಿದ್ದರೂ ಸಹ ೨೦೧೭-೧೮, ೨೦೨೦-೨೧ ಮತ್ತು ೨೦೨೧-೨೨ರಲ್ಲಿ ಒಮ್ಮೆ ಮಾತ್ರ ಸಭೆ ಸೇರಿತ್ತು. ತೈಲ ಸೋರಿಕೆ ಮತ್ತು ತ್ವರಿತ ಪ್ರತಿಕ್ರಿಯೆಗಾಗಿ ಸಮಿತಿಗಳನ್ನು ಹೊಂದಿರುವ ದಕ್ಷಿಣ ಕನ್ನಡವನ್ನು ಹೊರತುಪಡಿಸಿ ಡಿಎಂ ಕಾಯ್ದೆಯ ಪರಿಚ್ಛೇಧ ೨೮(೧)ರ ಅಡಿಯಲ್ಲಿ ಅಗತ್ಯವಿದ್ದರೂ ಸಹ ಮಾದರಿ ಜಿಲ್ಲೆಗಳ ಡಿಡಿಎಂಎಗಳು ಯಾವುದೇ ಸಲಹಾ ಸಮಿತಿಗಳನ್ನೂ ರಚಿಸಿಲ್ಲ ಎಂಬುದನ್ನು ಲೆಕ್ಕ ಪರಿಶೋಧನೆಯು ಗಮನಿಸಿರುವುದು ತಿಳಿದು ಬಂದಿದೆ.ಕೆಲವು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರಗಳು ೨೦೧೭-೧೮ರಿಂದ ೨೦೨೨-೨೩ರ ಅವಧಿಯಲ್ಲಿ ಜಿಲ್ಲಾ ಯೋಜನೆಗಳನ್ನು ಸಿದ್ಧಪಡಿಸಿ ಅವುಗಳನ್ನು ರಾಜ್ಯ ಪ್ರಾಧಿಕಾರಕ್ಕೆ ರವಾನಿಸಿದ್ದವು. ಆದರೂ ಸಹ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ಈ ಯೋಜನೆಗಳ ಪರಿಶೀಲನೆಯನ್ನೇ ನಡೆಸಿರಲಿಲ್ಲ ಮತ್ತು ಯೋಜನೆಗಳನ್ನು ಅನುಮೋದಿಸಿಯೂ ಇರಲಿಲ್ಲ. ಜಿಲ್ಲೆಗಳಲ್ಲಿನ ಹಲವು ಇಲಾಖೆಗಳು ವಿಪತ್ತು ನಿರ್ವಹಣೆ ಯೋಜನೆಗಳನ್ನೇ ಸಿದ್ಧಪಡಿಸಿರಲಿಲ್ಲ. ಆದರೆ ಸಂಬAಧಪಟ್ಟ ಇಲಾಖೆಗಳೊಂದಿಗೆ ಸಮಾಲೋಚಿಸಿ ಜಿಲ್ಲಾ ಯೋಜನೆಗಳನ್ನು ಸಿದ್ಧಪಡಿಸಲಾಗಿದೆ ಎಂದು ಸರ್ಕಾರವು ಉತ್ತರಿಸಿತ್ತು. ಆದರೆ ಸಂಬAಧಪಟ್ಟ ಇಲಾಖೆಗಳೊಂದಿಗೆ ಸಮಾಲೋಚಿಸಿ ಜಿಲ್ಲಾ ಯೋಜನೆಗಳನ್ನು ಸಿದ್ದಪಡಿಸಲಾಗಿದೆ ಎಂಬುದನ್ನು ಸಮರ್ಥಿಸಲು ರಾಜ್ಯ ಸರ್ಕಾರದ ಬಳಿ ಯಾವುದೇ ಪುರಾವೆಗಳೇ ಇಲ್ಲ.

ರಾಜ್ಯದ ೬,೩೦೦ ಗ್ರಾಮ ಪಂಚಾಯ್ತಿಗಳ ಪೈಕಿ ೨,೨೫೦ ಗ್ರಾಮ ಪಂಚಾಯ್ತಿಗಳು ವಿಪತ್ತು ಯೋಜನೆಗಳನ್ನು ಸಿದ್ಧಪಡಿಸಿವೆ ಎಂದು ಕಂದಾಯ ಇಲಾಖೆಯು ಮಹಾಲೇಖಪಾಲರಿಗೆ ಉತ್ತರಿಸಿತ್ತು. ಆದರೆ ಪರಿಶೋಧನೆಗೆ ಹಾಜರುಪಡಿಸಲಾದ ಪರೀಕ್ಷಾ ತನಿಖೆ ನಡೆಸಿದ ಜಿಲ್ಲೆ ಮತ್ತು ತಾಲೂಕು ಕಚೇರಿಗಳಲ್ಲಿ ಯಾವುದೇ ಯೋಜನೆಗಳು ಭೌತಿಕ ದಾಖಲೆಗಳಲ್ಲಿ ಲಭ್ಯವಿರಲಿಲ್ಲ. ಹಾಗೆಯೇ ಬೆಂಗಳೂರು ನಗರ ಜಿಲ್ಲೆಯ ಕೆಲವು ಖಾಸಗಿ ಆಸ್ಪತ್ರೆಗಳನ್ನು ಹೊರತುಪಡಿಸಿ ರಾಜ್ಯದ ಯಾವುದೇ ಆಸ್ಪತ್ರೆಗಳು ಮತ್ತು ಶಿಕ್ಷಣ ಸಂಸ್ಥೆಗಳು, ಪರೀಕ್ಷಾ ತನಿಖೆಗೆ ಒಳಪಡುವ ಜಿಲ್ಲೆಗಳು ಅಗತ್ಯವಾದ ವಿಪತ್ತು ನಿರ್ವಹಣಾ ಯೋಜನೆಗಳನ್ನು ಸಿದ್ಧಪಡಿಸಿರಲಿಲ್ಲ ಎಂದು ಸಿಎಜಿಯು ದಾಖಲೆಗಳ ಪರಿಶೀಲನೆಯಿಂದ ಪತ್ತೆ ಹಚ್ಚಿದೆ.