ವೀರಾಜಪೇಟೆ, ಮಾ. ೨೫: ಒತ್ತೋರ್ಮೆರ ಕೊಡವ ಕೂಟದ ಸ್ಥಾಪಕ ಅಧ್ಯಕ್ಷರಾಗಿ ಚೆಟ್ಟೋಳಿರ ಶರತ್ ಸೋಮಣ್ಣ ಆಯ್ಕೆಯಾಗಿದ್ದಾರೆ. ಒತ್ತೋರ್ಮೆರ ಕೊಡವ ಕೂಟದ ಸಭೆಯಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಿತು.

ಸ್ಥಾಪಕ ಅಧ್ಯಕ್ಷರಾಗಿ ಚೆಟ್ಟೋಳಿರ ಶರತ್ ಸೋಮಣ್ಣ, ಕಾರ್ಯದರ್ಶಿಯಾಗಿ ಮಾಚಂಗಡ ಸಚಿನ್ ತಮ್ಮಯ್ಯ, ಉಪಾಧ್ಯಕ್ಷೆಯಾಗಿ ಮಾತಂಡ ಕುಶಿ ಉನ್ನತಿ, ಸಹ ಕಾರ್ಯದರ್ಶಿಯಾಗಿ ಅಳ್ಳಂಡ ಶಹನಾ ಚೋಂದಮ್ಮ, ಖಜಾಂಚಿಯಾಗಿ ಕಾಳಮಂಡ ರಾಬಿನ್ ಅಚ್ಚಮ್ಮ, ಸಹ ಖಜಾಂಚಿಯಾಗಿ ಮಾಳೇಟಿರ ಯಶ್ಮ ಬೋಜಮ್ಮ, ನಿರ್ದೇಶಕರಾಗಿ ಪೊನ್ನೋಲತಂಡ ಶರಣು ತಮ್ಮಯ್ಯ, ಬಾಡಮಾಡ ದೇಚಮ್ಮ, ಕರ್ನಂಡ ಧನುಶ್ರೀ, ಚೈಯ್ಯಂಡ ಕೀರ್ತನ್ ಅಯ್ಯಪ್ಪ, ಭೂಮಿಕಾ ಮಾಚಂಗಡ ಇವರುಗಳು ಅಧಿಕಾರ ಸ್ವೀಕರಿಸಿದರು. ಸಭೆಯಲ್ಲಿ ಸದಸ್ಯರಾದ ಮೊಣ್ಣಂಡ ವಿನು ಕಾರ್ಯಪ್ಪ, ಮೂಕೊಂಡ ಸಂಜನಾ ದಮಯಂತಿ ಉಪಸ್ಥಿತರಿದ್ದರು.