ಸುಂಟಿಕೊಪ್ಪ, ಮಾ.೨೫: ಬಾಳೆಕಾಡು ಚಾಮುಂಡೇಶ್ವರಿ ಮತ್ತು ಮುತ್ತಪ್ಪ ಸೇವಾ ಸಮಿತಿ ವತಿಯಿಂದ ೬೦ನೇ ವರ್ಷದ ಚಾಮುಂಡೇಶ್ವರಿ ಮತ್ತು ಮುತ್ತಪ್ಪ ದೇವಾಲಯದ ವಾರ್ಷಿಕ ಮಹೋತ್ಸವದ ಅಂಗವಾಗಿ ಅದ್ಧೂರಿ ಶೋಭಾಯಾತ್ರೆ ತಾ. ೨೨ ರಂದು ರಾತ್ರಿ ನಡೆಯಿತು. ದೇವಾಲಯದಲ್ಲಿ ವಾರ್ಷಿಕ ಮಹೋತ್ಸವದ ಅಂಗವಾಗಿ ಪೈಂಗುತ್ತಿ ಪೂಜೆ, ಅಲಂಕಾರ ಪೂಜೆ ನಡೆಯಿತು. ಸಂಜೆ ಬಾಳೆಕಾಡುವಿನ ತೋಟದ ದೇವಾಲಯದಿಂದ ಕೇರಳದ ೩೦ ಅಡಿ ಎತ್ತರದ ಬೃಹತ್ ವಿದ್ಯುತ್ ದೀಪ ಅಲಂಕೃತ ಆಕರ್ಷಣೀಯ ಮಂಟಪ ಮತ್ತು ವೈಭವಯುತ ಮತ್ತೊಂದು ಆಕರ್ಷಕ ಮಂಟಪದಲ್ಲಿ ಮುತ್ತಪ್ಪ, ತಿರುವಪ್ಪ ಉತ್ಸವ ಮೂರ್ತಿಯ ಭವ್ಯ ಮೆರವಣಿಗೆ ಬಾಳೆಕಾಡು ದೇವಾಲಯದಿಂದ ಸುಂಟಿಕೊಪ್ಪ ಪಟ್ಟಣದತ್ತ ಸಾಗಿತು. ಸಮಿತಿಯ ಸದಸ್ಯರು ಸಮವಸ್ತç ಮತ್ತು ಮಲಯಾಳಿ ಸಮೂದಾಯದ ಭಕ್ತರು ಬಿಳಿ ವಸ್ತçದಲ್ಲಿ ಮಿಂಚಿದರು. ಈ ಮೆರವಣಿಗೆಯನ್ನು ಹೆದ್ದಾರಿಯ ಎರಡು ಬದಿಗಳಲ್ಲಿ ಸಾವಿರಾರು ಮಂದಿ ನಿಂತು ವೀಕ್ಷಿಸಿದರು.
ಮೆರವಣಿಗೆಯಲ್ಲಿ ಮುತ್ತಪ್ಪ ಮತ್ತು ತಿರುವಪ್ಪ ದೇವರ ಸ್ತಬ್ಧಚಿತ್ರ, ಅದರೊಂದಿಗೆ ಮೂರು ಕಳಶದ ಮೆರವಣಿಗೆಯೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾಗಿ ನಂತರ ಸುಂಟಿಕೊಪ್ಪ ಚಾಮುಂಡೇಶ್ವರಿ ಮತ್ತು ಮುತ್ತಪ್ಪ ದೇವಾಲಯದಲ್ಲಿ ಕಳಸ ಪೂಜೆ ನಡೆಸಿ ದೇವಾಲಯದಲ್ಲಿ ಹರಕೆ ಸಮರ್ಪಿಸಿ ಕೊನೆಯಲ್ಲಿ ಚಂಡೆವಾದ್ಯದೊAದಿಗೆ ಕಾರ್ಯಕ್ರಮ ಸಮಾಪ್ತಿಗೊಂಡಿತು.
ನೆರೆದಿದ್ದ ಭಕ್ತರಿಗೆ ಮಧ್ಯಾಹ್ನ ಬಾಳೆಕಾಡು ತೋಟದ ದೇವಾಲಯದ ಆವರಣದಲ್ಲಿ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಸಮಿತಿ ಅಧ್ಯಕ್ಷ ಹರೀಶ್(ಹರೀ) ಪ್ರಧಾನ ಕಾರ್ಯದರ್ಶಿ ಪ್ರಕಾಶ್(ಕುಟ್ಟಿ ), ಉಪಾಧ್ಯಕ್ಷ ಹರೀಶ, ಸಹ ಉಪಾಧ್ಯಕ್ಷ ವಸಂತ, ಸಹ ಕಾರ್ಯದರ್ಶಿ ಅರುಣ, ಖಜಾಂಚಿ ಸತೀಶ್, ಸಹ ಖಜಾಂಚಿ ಸುಜಯ್, ಗೌರವ ಅಧ್ಯಕ್ಷರುಗಳಾದ ಅಶೋಕ, ಶಶಿ, ಉನ್ನಿಕೃಷ್ಣ, ತಂಗಪ್ಪ, ಅಶೋಕ್, ಕುಮಾರ, ವಾಸು, ಮುರುಗೇಶ್, ರಾಮಚಂದ್ರ, ಸಲಹೆಗಾರ ಪ್ರವೀಣ್, ಸುರೇಶ್, ಸಂದೀಪ್ (ರಾಜೇಶ್) ಮೋಹನ್ ಪ್ರದೀಪ್, ವಿನು, ರವಿ, ಮೋಹನ್, ಆರ್.ಸುಧಿ, ಪದಾಧಿಕಾರಿಗಳು, ಬಾಳೆಕಾಡು ತೋಟದ ಕಾರ್ಮಿಕರು, ಸಾರ್ವಜನಿಕರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.