ಗೋಣಿಕೊಪ್ಪ ವರದಿ, ಮಾ. ೨೫: ಅಕ್ಟೋಬರ್ ತಿಂಗಳಲ್ಲಿ ನಡೆಯಲಿರುವ ಆಲೆಮಾಡ ತೋಕ್ ನಮ್ಮೆ ಲಾಂಛನವನ್ನು ಪೊನ್ನಂಪೇಟೆ ಕೊಡವ ಸಮಾಜದಲ್ಲಿ ಅನಾವರಣಗೊಳಿಸಲಾಯಿತು. ಕುಟುಂಬದ ಹಿರಿಯರಾದ ಆಲೆಮಾಡ ಕಾರ್ಯಪ್ಪ, ಶಾಂತಿ ಕಾರ್ಯಪ್ಪ ದಂಪತಿ ಲಾಂಛನ ಅನಾವರಣಗೊಳಿಸಿ ಶುಭಕೋರಿದರು.

ಆಲೆಮಾಡ ಒಕ್ಕ ಅಧ್ಯಕ್ಷ ಆಲೆಮಾಡ ಎನ್. ದೇವಯ್ಯ, ಆಲೆಮಾಡ ತೋಕ್ ನಮ್ಮೆ ಅಧ್ಯಕ್ಷ ಆಲೆಮಾಡ ಸೋಮಣ್ಣ ಉಪಸ್ಥಿತರಿದ್ದರು.

ಅಕ್ಟೋಬರ್ ೧೦ ಮತ್ತು ೧೧ ರಂದು ಪೊನ್ನಂಪೇಟೆ ಕರ್ನಾಟಕ ಪಬ್ಲಿಕ್ ಶಾಲಾ ಮೈದಾನದಲ್ಲಿ ತೋಕ್‌ನಮ್ಮೆ ಆಯೋಜಿಸಲು ನಿರ್ಧರಿಸಲಾಯಿತು.