ಸುಂಟಿಕೊಪ್ಪ, ಮಾ. ೨೫: ಸುಂಟಿಕೊಪ್ಪ ಶ್ರೀ ಚಾಮುಂಡೇಶ್ವರಿ, ಶ್ರೀಮುತ್ತಪ್ಪ ಮತ್ತು ಪರಿವಾರ ದೇವರುಗಳ ತೆರೆ ಮಹೋತ್ಸವ ವಿಜೃಂಭಣೆಯಿAದ ನಡೆಯಿತು.
೫೮ನೇ ವರ್ಷದ ತೆರೆ ಮಹೋತ್ಸವದ ಅಂಗವಾಗಿ ದೇವಾಲಯವನ್ನು ವಿದ್ಯುತ್ ದೀಪ ಹಾಗೂ ಬಣ್ಣ ಬಣ್ಣದ ಹೂಗಳಿಂದ ಸಿಂಗರಿಸಲಾಗಿತ್ತು.
ಶ್ರೀ ಚಾಮುಂಡೇಶ್ವರಿ ದೇವಾಲಯದ ಅರ್ಚಕರಾದ ವಿನಯಕುಮಾರ್ ಅವರು ವಿಶೇಷ ಪೂಜೆ ನೆರವೇರಿಸಿದರು.
ಶನಿವಾರ ಬೆಳಿಗ್ಗೆ ೭.೩೦ ಗಂಟೆಗೆ ಬಾವುಟವನ್ನು ಏರಿಸುವುದರೊಂದಿಗೆ ಶ್ರೀ ಚಾಮುಂಡೇಶ್ವರಿ, ಶ್ರೀಮುತ್ತಪ್ಪ ಮತ್ತು ಪರಿವಾರ ದೇವರುಗಳ ತೆರೆ ಮಹೋತ್ಸವಕ್ಕೆ ವಿದ್ಯುಕ್ತ ಚಾಲನೆ ನೀಡಲಾಯಿತು. ಸಂಜೆ ೪ ಗಂಟೆಗೆ ಶ್ರೀ ಮುತ್ತಪ್ಪ ದೇವರ ಮಲೆ ಇಳಿಸುವಿಕೆ, ರಾತ್ರಿ ೬ ಗಂಟೆಗೆ ಚಂಡೆಮೇಳ, ೭ ಗಂಟೆಗೆ ಶ್ರೀಮುತ್ತಪ್ಪ ವೆಳ್ಳಾಟಂ ನಡೆಯಿತು.
ಭಾನುವಾರ ಬೆಳಿಗ್ಗೆ ೭ ಗಂಟೆಗೆ ವಾದ್ಯಮೇಳ, ೧೧ ಗಂಟೆಗೆ ಶ್ರೀಶಾಸ್ತಪ್ಪನ ವೆಳ್ಳಾಟಂ, ಮಧ್ಯಾಹ್ನ ೧ ಗಂಟೆಗೆ ಶ್ರೀ ಗುಳಿಗವೆಳ್ಳಾಟಂ, ಸಂಜೆ ೪ ಗಂಟೆಗೆ ಅಡಿಯರ ವಿದ್ಯುತ್ ದೀಪಾಲಂಕೃತ ಭವ್ಯ ಮಂಟಪದಲ್ಲಿ ಶ್ರೀಮುತ್ತಪ್ಪ ಹಾಗೂ ತಿರುವಪ್ಪ ಮೂರ್ತಿಗಳನ್ನು ಇರಿಸಿ ಪಟ್ಟಣದ ಮುಖ್ಯ ಬೀದಿಗಳಲ್ಲಿ ಚಂಡೆಯೊAದಿಗೆ ಮೆರವಣಿಗೆ ಸಾಗಿತು.
ರಾತ್ರಿ ೭ ಗಂಟೆಗೆ ಶ್ರೀ ಮುತ್ತಪ್ಪ ವೆಳ್ಳಾಟಂ, ೮ ಗಂಟೆಗೆ ಶ್ರೀ ಚಾಮುಂಡೇಶ್ವರಿ ಮತ್ತು ಶ್ರೀ ರಕ್ತ ಚಾಮುಂಡಿ ವೆಳ್ಳಾಟಂ, ೮.೩೦ ಕ್ಕೆ ಶ್ರೀ ವಸೂರಿಮಾಲೆ ಸ್ನಾನಕ್ಕೆ ಹೊರಡುವುದು, ೯ ಕ್ಕೆ ವಿಷ್ಣುಮೂರ್ತಿ ವೆಳ್ಳಾಟಂ, ೧೧ ಗಂಟೆಗೆ ಕಳಿಗ ಪಾಟ್ ಅಂದಿವೇಳ ಕಳಸಂ ಸ್ವೀಕರಿಸುವುದು, ವೆಳ್ಳಕಟ್ಟ್, ೧-೧೫ಕ್ಕೆ ಗುಳಿಗನ ಕೋಲ, ೨ ಗಂಟೆಗೆ ಶಾಸ್ತಪ್ಪನ ಕೋಲ, ಬೆಳಗಿನ ಜಾವ ೪ ಗಂಟೆಗೆ ಶ್ರೀಮುತ್ತಪ್ಪ ಮತ್ತು ಶ್ರೀ ತಿರುವಪ್ಪನ ಕೋಲಗಳು ನಡೆದವು. ಬೆಳಗಿನ ಜಾವ ೫ ಗಂಟೆಗೆ ಪಟಾಕಿ ಸಿಡಿಸಲಾಯಿತು.
ಸೋಮವಾರದಂದು ಬೆಳಿಗ್ಗೆ ೭ ಗಂಟೆಗೆ ಶ್ರೀ ರಕ್ತ ಚಾಮುಂಡಿ ಕೋಲ, ೮ ಗಂಟೆಗೆ ಶ್ರೀ ಮುತ್ತಪ್ಪ ಮತ್ತು ಶ್ರೀ ತಿರುವಪ್ಪ ದೇವರ ಪಳ್ಳಿವೇಟ, ೯ ಗಂಟೆಗೆ ಶ್ರೀ ವಿಷ್ಣುಮೂರ್ತಿ ಕೋಲ, ೧೦ ಗಂಟೆಗೆ ಶ್ರೀ ಚಾಮುಂಡೇಶ್ವರಿ ಕೋಲ, ೧೧ ಗಂಟೆಗೆ ಶ್ರೀ ವಸೂರಿ ಮಾಲೆ ಕೋಲ, ೧೧:೩೦ ಗಂಟೆಗೆ ಗುರುಶ್ರೀ ದರ್ಪಣ, ಮಧ್ಯಾಹ್ನ ೧೨ ಗಂಟೆಗೆ ಬಾವುಟವನ್ನು ಇಳಿಸುವುದರೊಂದಿಗೆ ಶ್ರೀ ಚಾಮುಂಡೇಶ್ವರಿ, ಶ್ರೀಮುತ್ತಪ್ಪ ಮತ್ತು ಪರಿವಾರ ದೇವರುಗಳ ತೆರೆ ಮಹೋತ್ಸವವು ಸಂಪನ್ನಗೊAಡಿತು.
ಸಮಿತಿಯ ಅಧ್ಯಕ್ಷ ಪಟ್ಟೆಮನೆ ಉದಯಕುಮಾರ್, ಉಪಾಧ್ಯಕ್ಷ ಯಂಕನ ಶ್ರೀರಾಮ್, ಬಿ.ಡಿ ರಾಜುರೈ, ಪ್ರಧಾನ ಕಾರ್ಯದರ್ಶಿ ಪಿ.ಸಿ ಮೋಹನ್, ಖಜಾಂಚಿ ರಮೇಶ್ ಪಿಳ್ಳೆ, ಸಹಕಾರ್ಯದರ್ಶಿ ಯಂಕನ ಕೌಶಿಕ್, ಕಾರ್ಯಕಾರಿ ಸಮಿತಿ ಸದಸ್ಯರುಗಳಾದ ಸುರೇಶ್ ಗೋಪಿ, ಸುದೀಶ್, ಚಂದು ಸುರೇಶ್, ಧನು ಕಾವೇರಪ್ಪ, ಎಂ.ಎಸ್ ಸುನಿಲ್, ಚಂದ್ರ, ಪ್ರವೀಣ, ದಿವಾಕರ ರೈ, ವಿನೋದ್, ಪ್ರಾಂತ್, ಎ ಲೋಕೇಶ್ ಕುಮಾರ್, ಎ.ಶ್ರೀಧರ್ ಕುಮಾರ್, ಮನು ರೈ (ಮಹೇಶ್), ಸಲಹಾ ಸಮಿತಿ ಸದ್ಯರಾದ ಕೆ.ಪಿ ಜಗನ್ನಾಥ್, ವೀಣಾರೈ, ಗಿರೀಜಾ ಉದಯಕುಮಾರ್ ಹಾಗೂ ರಮ್ಯ ಮೋಹನ್ ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಪಾಲ್ಗೊಂಡಿದ್ದರು.