'ಇಂದು ಹಲವೆಡೆ ಗುಡುಗು ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ೧೦ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಸೂಚಿಸಲಾಗಿದೆ. ಉಳಿದೆಡೆ ಒಣಹವೆಯಿರಲಿದ್ದು, ಇನ್ನೂ ಕೆಲ ದಿನ ಇದೇ ವಾತಾವರಣವಿರಲಿದೆ, ರಾಜ್ಯದೆಲ್ಲೆಡೆ ಒಣಹವೆ ಇರಲಿದೆ, ಇಂದೂ ಸಹ ಹಲವೆಡೆ ಗುಡುಗು-ಸಿಡಿಲು ಸಹಿತ ಸಾಧಾರಣ ಮಳೆಯಾಗಲಿದೆ' ಎಂದು ಹವಾಮಾನ ಇಲಾಖೆ ತಿಳಿಸಿದೆ...

ಈ ರೀತಿಯ ಹವಾಮಾನ ಇಲಾಖೆಯ ಮಾಹಿತಿಗಳನ್ನು ಅಲ್ಲಲ್ಲಿ ಕೇಳುತ್ತಾ ಓದುತ್ತಾ ಇರುತ್ತೇವೆ. ಹಿಂದಿನಿAದಲೂ ನಾವು ಪರಿಸರದೊಂದಿಗೆ ಬದುಕು ಕಟ್ಟಿಕೊಂಡವರು ಆದಿಕಾಲದಿಂದಲೂ ಮರ, ಗಿಡ, ನದಿ, ತೊರೆ, ಹಳ್ಳ, ಕೊಳ್ಳಗಳ ಬಳಿ ತನ್ನ ಆಹಾರಕ್ಕೆ ಬೇಕಾಗಿರುವ ಬೆಳೆಗಳನ್ನು ಬೆಳೆದುಕೊಂಡು ಜೀವಿಸಿದವರು. ಪ್ರಕೃತಿಯಲ್ಲಾಗುವ ಬದಲಾವಣೆಯನ್ನು ಸೂಕ್ಷö್ಮವಾಗಿ ಗಮನಿಸುತ್ತಲೇ ತನ್ನ ಜ್ಞಾನವನ್ನು ಹೆಚ್ಚಿಸಿಕೊಳ್ಳುತ್ತಾ ಮುಂದಿನ ತಲೆಮಾರಿಗೂ ಹವಾಮಾನದ ಮಾಹಿತಿಯನ್ನು ಹೊತ್ತು ತಂದವರು. ಇವತ್ತಿನ ಹವಾಮಾನದ ಗುರುತನ್ನು ಮುಂದಿನ ವರ್ಷಕ್ಕೆ ಹೊತ್ತೊಯ್ದು ಅದರ ಪ್ರಕಾರವಾಗಿಯೇ ಬೆಳೆಯನ್ನು ಬೆಳೆದವರು. ಪರಿಸರದಲ್ಲಾಗುವ ಬದಲಾವಣೆಯಿಂದ ಅನಾಹುತಗಳು ಸಂಭವಿಸದAತೆ ಪ್ರಕೃತಿಯನ್ನು ನಿತ್ಯ ಭಕ್ತಿಯಿಂದ ಪೂಜಿಸುತ್ತ ಬರುತ್ತಿದ್ದಾನೆ ಮನುಷ್ಯ. ಪಂಚಭೂತಗಳೊAದಿಗಿನ ಅವನ ಜೀವನ ನಿತ್ಯ ನೂತನವೇ ಸರಿ. ಪಂಚಭೂತಗಳೊAದಿಗೆ ಆತ ಪ್ರಕೃತಿಯ ಆರಾಧಕನು ಹೌದು. ಹಿಂದೆ ಕಪ್ಪು ಮೋಡವನ್ನು ಪರೀಕ್ಷಿಸಿ, ಮಳೆ ಬರುವ, ಮಳೆ ನಿಲ್ಲುವ, ಬಿಸಿಲು ಹೆಚ್ಚಾಗುವ, ಮಂಜು ಬೀಳುವುದರ ಮುನ್ಸೂಚನೆಯನ್ನು ಗುರುತಿಸಿಕೊಳ್ಳುತ್ತಿದ್ದ. ನಿಸರ್ಗದ ಬದಲಾವಣೆ ಮನುಷ್ಯ ಸೃಷ್ಟಿ ಅಲ್ಲ ಅದು ಸಹಜ ಪ್ರಕ್ರಿಯೆ ಹವಾಮಾನವನ್ನು ನಿರ್ಧರಿಸುವುದು ಮೋಡಗಳು ಈ ಬದಲಾವಣೆಯನ್ನು ಮನುಷ್ಯ ಹಿರಿಯರ ಮಾರ್ಗದರ್ಶನದೊಂದಿಗೆ ಒಂದು ವಿದ್ಯೆಯಾಗಿ ಕಲಿತುಕೊಂಡಿದ್ದ.

ನಾಗರಿಕತೆ ಬೆಳೆದು ಮನುಷ್ಯ ಎಲ್ಲವನ್ನು ಕೂಡ ಯಂತ್ರಗಳ ಮೂಲಕ ಗುರುತಿಸುವ ಜ್ಞಾನವನ್ನು ಪಡೆದುಕೊಂಡನು. ಇದಕ್ಕೆ ಪೂರಕವಾಗಿ ೧೮೭೩ ರಲ್ಲಿ ರಲ್ಲಿ ರಚನೆಯಾದ ಅಂತರರಾಷ್ಟಿçÃಯ ಹವಾಮಾನ ಸಂಸ್ಥೆಯು "ವಿಶ್ವ ಹವಾಮಾನ" ಸಂಸ್ಥೆಯಾಗಿ ೧೯೫೦ ಮಾರ್ಚ್ ೨೩ ರಂದು ಈ ದಿನವನ್ನು ಆರಂಭಿಸಿತು. ಜನರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಹವಾಮಾನ ಇಲಾಖೆಯು ಪ್ರಕೃತಿ ಬದಲಾವಣೆ ಮಹತ್ವದ ವಿಷಯಗಳನ್ನು ಜನರಿಗೆ ತಲುಪಿಸಲು ಪ್ರಾರಂಭಿಸಿತು.

ಭೂಮಿಯ ಮೇಲೆ ಅಧಿಕ ತಾಪಮಾನದಿಂದಾಗಿ ಎಷ್ಟೋ ಕೋಟಿ ವರ್ಷಗಳ ಹಿಂದೆ ಜೀವ ವೈವಿಧ್ಯವೆಲ್ಲ ನಾಶವಾಗಿತ್ತು ಎಂಬುದು ಇದರಿಂದ ತಿಳಿದು ಬರುತ್ತದೆ. ಇದರ ಉದ್ದೇಶ ಹವಾಮಾನ ಬದಲಾವಣೆಯಿಂದ ಪ್ರಕೃತಿಯಲ್ಲಿ ಆಗುವ ವ್ಯತ್ಯಾಸಗಳ ಬಗ್ಗೆ ಅರಿವು ಮೂಡಿಸುವುದು. ಅದರಲ್ಲೂ ರೈತಾಪಿ ವರ್ಗದ ಜನರಿಗೆ ಮುನ್ಸೂಚನೆಗಳನ್ನು ಆಗಾಗ ನೀಡುತ್ತಲೇ ಇರುವುದು. ಮಾನ್ಸೂನ್ ಮಾರುತಗಳು ಒಂದಾಗುವ ಮಾನ್ಸೂನ್ ನ ಪ್ರಾರಂಭವಾಗುವ ದಿನಾಂಕವನ್ನು ಮೊದಲೇ ಗುರುತಿಸುವ, ಹೊಲಗದ್ದೆಗಳನ್ನು ಉಳುಮೆ ಮಾಡಿ ತಯಾರಿ ಮಾಡಿಕೊಳ್ಳಲು ಬೇಕಾಗಿರುವ ಎಲ್ಲ ಮಾಹಿತಿಗಳು ನಮಗೀಗ ಲಭ್ಯವಿದೆ. ಮಳೆಗಾಲವು ಕೇರಳಕ್ಕೆ ಆಗಮಿಸುವ ಮೊದಲು ಹಿಂದೂ ಮಹಾಸಾಗರ, ಅರೇಬಿಯನ್ ಸಮುದ್ರ, ಭಾರತೀಯ ಪರ್ಯಾಯ ದ್ವೀಪದ ಆವರಣದಲ್ಲಿ ದೊಡ್ಡ ಪ್ರಮಾಣದ ಬದಲಾವಣೆಯನ್ನು ಉಂಟುಮಾಡುತ್ತದೆ. ಮಳೆ ಆರಂಭಕ್ಕೂ ಕೆಲವು ದಿನಗಳ ಮುಂಚೆ ಮಳೆಯ ಮಾರುತ ಮತ್ತು ವಿಕಿರಣಗಳನ್ನು ಒಳಗೊಂಡAತೆ ವಾತಾವರಣದಲ್ಲಿ ಆಗುವ ಬದಲಾವಣೆಗಳನ್ನು ಹವಾಮಾನ ಇಲಾಖೆಯ ಶಾಸ್ತ್ರಜ್ಞರು ಅಧ್ಯಯನ ಮಾಡುತ್ತಾರೆ. ಈಗ ಮುಂಗಾರಿನ ಆಗಮನದ ದಿನಾಂಕವನ್ನು ೩ ರಿಂದ ೪ ವಾರಗಳ ಮುಂಚಿತವಾಗಿಯೇ ಊಹಿಸುವ ಮಿತಿಯನ್ನು ಹೊಂದಿದೆ.

ಅಧಿಕ ಬಿಸಿ ಗಾಳಿ, ಬರ ಪರಿಸ್ಥಿತಿ, ಅತಿವೃಷ್ಟಿ, ಭೂಕಂಪ, ಅಗ್ನಿ ಪರ್ವತಗಳ ಸ್ಫೋಟಗಳು, ಸುನಾಮಿ ಸೇರಿದಂತೆ ಇತರ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲುತ್ತಾ ಮಾಹಿತಿಯನ್ನು ಆಗಾಗ ರವಾನಿಸುತ್ತದೆ.

ಬಿಸಿಲಿನ ದಿನದಲ್ಲಿ ಮಳೆ ಒಮ್ಮೆಲೇ ಪ್ರಾರಂಭವಾಗಿ ಸ್ವಲ್ಪ ಸಮಯದ ನಂತರ ಮಳೆ ನಿಂತು ಮತ್ತೆ ಬಿಸಿಲು ಬರುವುದು ಮರುದಿನ ಮೋಡ ಕವಿದ ವಾತಾವರಣವಿರುವುದು ಈ ನಿರ್ದಿಷ್ಟ ಸ್ಥಳದ ನಿತ್ಯದ ವಾತಾವರಣದ ಸ್ಥಿತಿಯನ್ನು ಹವಾಮಾನ ಎಂದು ಕರೆಯಬಹುದು. ನಾವು ಬಿಸಿಲಿನಲ್ಲಿ ಇದ್ದಾಗ ಇದ್ದಕ್ಕಿದ್ದಂತೆ ಮಳೆ ಬಿದ್ದರೆ ಅದು ನಮ್ಮ ಕಣ್ಣೆದುರೇ ಬದಲಾಗುತ್ತಿರುವ ಹವಾಮಾನ ಎಂದು ಅರ್ಥ. ಇದು ವಾತಾವರಣದ ದೈನಂದಿನ ಸ್ಥಿತಿ. ಹಿಂದೆ ಮಳೆಗಾಲ, ಚಳಿಗಾಲ, ಬೇಸಿಗೆಗಾಲ ಎಂದು ಅದಕ್ಕಾಗಿಯೇ ಮೀಸಲಿಟ್ಟ ತಿಂಗಳುಗಳು ಇರುತಿದ್ದವು. ಆದರೆ ಇಂದು ಒಂದೇ ದಿನದಲ್ಲಿ ಮೂರು ಕಾಲಗಳನ್ನು ಅನುಭವಿಸುವಂತಹ ಪರಿಸ್ಥಿತಿ ಇದೆ. ಇದಕ್ಕೆ ಕಾರಣ ಹವಾಮಾನದ ವೈಪರಿತ್ಯ ಹವಾಮಾನವನ್ನು ಅಳೆಯುವುದು ಹವಾಮಾನ ವೀಕ್ಷಕರ ಕೆಲಸ.

ತಾಪಮಾನ

ತಾಪಮಾನವನ್ನು ಥರ್ಮಾಮೀಟರ್ ಮೂಲಕ ಅಳೆಯುತ್ತಿದ್ದರು. ಈಗ ಡಿಜಿಟಲ್ ಥರ್ಮಾಮೀಟರ್ ಮೂಲಕ ಅಳೆದು ದಾಖಲಿಸಿಕೊಳ್ಳುತ್ತಾರೆ. ಮಳೆ ಬರುವ ಮುನ್ಸೂಚನೆಯ ಕುರಿತು ಅಜ್ಜಿ ಹೇಳಿದ ಒಂದು ಕಥೆ ನೆನಪಾಗುತ್ತದೆ.

ಮನೆಯ ಮುಂದಿನ ಮರದ ಕೊಂಬೆಯಲೊAದು ಪಕ್ಷಿಮರಿ ಕುಳಿತು ಅಳುತ್ತಿತ್ತು. ಅದನ್ನು ನೋಡಿದ ಮನೆಯ ಅಜ್ಜಿ ಪಕ್ಷಿ ಮರಿಯನ್ನು ಸಮಾಧಾನಿಸಿ ಅಳುವಿಗೆ ಕಾರಣ ಕೇಳಿದಾಗ ಮರಿ ಪಕ್ಷಿ, ತಾಯಿ ಮೂರು ದಿನಗಳಿಂದ ಗೂಡಿಗೆ ಬರಲಿಲ್ಲವೆಂಬ ವಿಷಯವನ್ನು ತಿಳಿಸಿತು. ವಿವಿಧ ರೀತಿಯಲ್ಲಿ ಅಜ್ಜಿ ಮರಿ ಪಕ್ಷಿಯನ್ನು ಸಮಾಧಾನಪಡಿಸಿದರೂ ಮತ್ತೆ ಮತ್ತೆ ಕೇಳುತ್ತಿದ್ದ ಪ್ರಶ್ನೆ ಅಮ್ಮನ ಕುರಿತೆ, ಈ ಸಂದರ್ಭದಲ್ಲಿ ಬೇಸಿಗೆ ಕಾಲವು ಕಳೆದು ಮಳೆಗಾಲವು ಆರಂಭವಾಗುವ ಹಂತದಲ್ಲಿತ್ತು. ಅಜ್ಜಿ ಮತ್ತೆ ಮತ್ತೆ ಸಮಾಧಾನಿಸುತ್ತಲ್ಲೇ ನಿನ್ನ ತಾಯಿ ಬೆಟ್ಟ ಸಮುದ್ರದ ಆಚೆ ಹೋಗಿದ್ದಾಳೆ, ಇನ್ನೆರಡು ದಿನಗಳಲ್ಲಿ ಮಳೆಯನ್ನು ಕರೆತರುತ್ತಾಳೆ ಎಂದು ಸಮಾಧಾನಿಸುತ್ತಾಳೆ. ಸಂತೋಷಗೊAಡ ಪಕ್ಷಿಮರಿ ಹಿರಿ ಹಿರಿ ಹಿಗ್ಗಿ ಮಳೆ ಬಂದರೆ ರೈತ ಬೆಳೆ ಬೆಳೆಯುತ್ತಾನೆ, ಆ ಬೆಳೆಯಲ್ಲಿ ಕೊಂಚ ತಾವು ತಿಂದು ಬದುಕಬಹುದೆಂದು ಸಂಭ್ರಮಿಸಿತು.

ಹವಾಮಾನದ ಬದಲಾವಣೆ ಏನೇ ಆದರೂ ಪ್ರಕೃತಿಯಲ್ಲಿರುವ ಎಲ್ಲಾ ಸಣ್ಣಪುಟ್ಟ ಜೀವಿಗಳಿಂದ ಹಿಡಿದು ಬಹುದೊಡ್ಡ ಜೀವಿಗಳವರೆಗೂ ಪರಿಣಾಮವನ್ನು ಉಂಟುಮಾಡುತ್ತದೆ ಅಲ್ಲವೇ...?

- ಮನ ಕೆ.ಆರ್., ಅಂತಿಮ ಬಿಸಿಎ,

ಕಾವೇರಿ ಕಾಲೇಜು ಗೋಣಿಕೊಪ್ಪಲು.