( ಕಾಯಪಂಡ ಶಶಿ ಸೋಮಯ್ಯ)

ಮಡಿಕೇರಿ, ಮಾ. ೨೨: ಕೊಡಗು ಸೇರಿದಂತೆ ಇತರೆಡೆಗಳಲ್ಲಿ ಪ್ರಸ್ತುತ ಕೊಡವ ಪೊಮ್ಮಕ್ಕಡ ಕೂಟಗಳು ಅಸ್ತಿತ್ವಕ್ಕೆ ಬರುತ್ತಿವೆ. ಈ ಪೊಮ್ಮಕ್ಕಡ ಕೂಟಗಳ ನಡುವೆ ಭಾಂದವ್ಯ ವೃದ್ಧಿ ಹಾಗೂ ಕ್ರೀಡಾಮನೋಭಾವ ಮೂಡಿಸುವ ಉದ್ದೇಶದೊಂದಿಗೆ ಚೆಟ್ಟಳ್ಳಿ ಕೊಡವ ಸಮಾಜದ ಅಧೀನದಲ್ಲಿ ಬರುವ ಜೋಮಾಲೆ ಕೊಡವ ಪೊಮ್ಮಕ್ಕಡ ಕೂಟ ಅಂತರ ಕೊಡವ ಪೊಮ್ಮಕ್ಕಡ ಥ್ರೋಬಾಲ್ ಪಂದ್ಯಾವಳಿಯನ್ನು ಏರ್ಪಡಿಸಿದೆ.

ಏಪ್ರಿಲ್ ೧ ರ ಬುಧವಾರದಂದು ಚೆಟ್ಟಳ್ಳಿ ಪ್ರೌಢಶಾಲಾ ಮೈದಾನದಲ್ಲಿ ಪಂದ್ಯಾವಳಿ ನಿಗದಿಯಾಗಿದೆ. ಥ್ರೋಬಾಲ್ ಪಂದ್ಯಾವಳಿಯ ಸಡಗರದೊಂದಿಗೆ ಮಹಿಳೆಯರು ತಮ್ಮ ಕ್ರೀಡಾ ಪ್ರತಿಭೆ ತೋರಲಿದ್ದಾರೆ. ಈ ಪಂದ್ಯಾವಳಿಯಲ್ಲಿ ವಿವಾಹಿತ ಮಹಿಳೆಯರು ಮಾತ್ರ ಪಾಲ್ಗೊಳ್ಳಲು ಅವಕಾಶ ಕಲ್ಪಿಸಲಾಗಿದೆ. ವಿವಿಧ ತಂಡಗಳಲ್ಲಿ ಸಮಾನ ಸ್ಪರ್ಧೆಯ ಉದ್ದೇಶದೊಂದಿಗೆ ವಿವಾಹಿತ ಮಹಿಳೆಯರನ್ನು ಒಳಗೊಂಡAತೆ ಮಾತ್ರ ಈ ಪಂದ್ಯಾವಳಿ ಆಯೋಜಿಸಲಾಗಿದೆ. ಜೋಮಾಲೆ ಪೊಮ್ಮಕ್ಕಡ ಕೂಟ ಪ್ರಥಮ ಬಾರಿಗೆ ಈ ಕ್ರೀಡಾಕೂಟ ಹಮ್ಮಿಕೊಂಡಿದೆ.

ಈಗಾಗಲೇ ತಂಡಗಳ ನೋಂದಣಿ ಪ್ರಕ್ರಿಯೆ ಪೂರ್ಣಗೊಂಡಿದೆ. ಕೇವಲ ಒಂದು ದಿನದ ಅವಧಿಯ ಕ್ರೀಡಾಕೂಟ ಇದಾಗಿರುವುದರಿಂದ ೧೬ ತಂಡಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಬೆಂಗಳೂರು, ಮೈಸೂರು ಸೇರಿದಂತೆ ಒಟ್ಟು ೧೬ ತಂಡಗಳು ನೋಂದಾಯಿಸಿಕೊAಡಿವೆ.

ಏ. ೧ ರಂದು ಬೆಳಿಗ್ಗೆ ೯ ರಿಂದ ಪಂದ್ಯಾವಳಿ ಆರಂಭಗೊಳ್ಳಲಿದೆ. ಜೋಮಾಲೆ ಕೂಟದ ಅಧ್ಯಕ್ಷೆ ಮುಳ್ಳಂಡ ಶೋಭಾ ಚಂಗಪ್ಪ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾಜಿ ವಿಧಾನ ಪರಿಷತ್ ಸದಸ್ಯೆ ಶಾಂತೆಯAಡ ವೀಣಾ ಅಚ್ಚಯ್ಯ ಅವರು ಪಾಲ್ಗೊಳ್ಳಲಿದ್ದಾರೆ. ಸಂಜೆ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಚೆಟ್ಟಳ್ಳಿ ಕೊಡವ ಸಮಾಜದ ಅಧ್ಯಕ್ಷ ಮುಳ್ಳಂಡ ರತ್ತು ಚಂಗಪ್ಪ, ಉಪಾಧ್ಯಕ್ಷ ಬಿದ್ದಂಡ ಮಾದಯ್ಯ ಅವರುಗಳು ಭಾಗವಹಿಸಲಿದ್ದಾರೆ. ಶೋಭಾ ಚಂಗಪ್ಪ ಅಧ್ಯಕ್ಷತೆಯಲ್ಲಿ ಉಪಾಧ್ಯಕ್ಷೆ ಚೋಳಂಡ ಜ್ಯೋತಿ ನಾಣಯ್ಯ, ಕಾರ್ಯದರ್ಶಿ ಅಡಿಕೆರ ಶಾಂತಿ ಮುತ್ತಪ್ಪ, ಖಜಾಂಚಿ ಪುತ್ತರಿರ ಗಂಗು ಅಚ್ಚಯ್ಯ, ಸಹ ಕಾರ್ಯದರ್ಶಿ ಕೆಚ್ಚೆಟ್ಟಿರ ರತಿ ಕಾರ್ಯಪ್ಪ ಹಾಗೂ ಇತರ ಐದು ಮಂದಿ ನಿರ್ದೇಶಕರಾಗಿರುವ ಜೋಮಾಲೆ ಪೊಮ್ಮಕ್ಕಡ ಕೂಟದಲ್ಲಿ ಸುಮಾರು ೬೦ ಸದಸ್ಯೆಯರು ಇದ್ದು ಪ್ರಥಮ ಬಾರಿಗೆ ಈ ಪಂದ್ಯಾವಳಿ ಆಯೋಜಿಸಲು ಪ್ರಯತ್ನ ನಡೆಸಿದ್ದಾರೆ. ವಿಜೇತ ತಂಡಗಳಿಗೆ ನಗದು ಹಾಗೂ ಟ್ರೋಫಿ ಬಹುಮಾನ ನೀಡಲಾಗುವುದು.

ಪಾಲ್ಗೊಳ್ಳಲಿರುವ ತಂಡಗಳು

ಮಡಿಕೇರಿ ಕೊಡವ ಸಮಾಜ ಪೊಮ್ಮಕ್ಕಡ ಕೂಟ (ಎರಡು ತಂಡ) ನೆಲಜಿ ಪೊಮ್ಮಕ್ಕಡ ಕೂಟ,೪ಐದನೇ ಪುಟಕ್ಕೆ

(ಮೊದಲ ಪುಟದಿಂದ) ಅಮ್ಮತ್ತಿ ಪೂಂದಳಿ ಪೊಮ್ಮಕ್ಕಡ ಕೂಟ, ಮೈಸೂರು ಪೊಮ್ಮಕ್ಕಡ ಕೂಟ, ಟಿ. ಶೆಟ್ಟಿಗೇರಿ ಕೂಟ, ಗುಂಬಳಮಾಡ ಪೊಮ್ಮಕ್ಕಡ ಕೂಟ ಪೊನ್ನಂಪೇಟೆ, ತಲಕಾವೇರಿ ಪೊಮ್ಮಕ್ಕಡ ಕೂಟ ಮೈಸೂರು, ವೀರಾಜಪೇಟೆ ಕೊಡವ ಸಮಾಜ ಪೊಮ್ಮಕ್ಕಡ ಕೂಟ, ಅಮ್ಮತ್ತಿ ಕೊಡವ ಸಮಾಜ ಪೊಮ್ಮಕ್ಕಡ ಕೂಟ, ಬೆಂಗಳೂರು ಪೊಮ್ಮಕ್ಕಡ ಕೂಟ, ಜೋಮಾಲೆ ಕೂಟ ಚೆಟ್ಟಳ್ಳಿ, ಬೇಗೂರು ಪೊಮ್ಮಕ್ಕಡ ಕೂಟ, ಪೊನ್ನಂಪೇಟೆ ಪೊಮ್ಮಕ್ಕಡ ಕೂಟ, ರೈರ‍್ಸ್ ಪೊಮ್ಮಕ್ಕಡ ಕೂಟ ಪೊನ್ನಂಪೇಟೆ ಹಾಗೂ ಮೂರ್ನಾಡು ಪೊಮ್ಮಕ್ಕಡ ಕೂಟ.