ಮಡಿಕೇರಿ, ಮಾ. ೧೮: ಮಡಿಕೇರಿ ತಾಲೂಕಿನ ಬಿಳಿಗೇರಿ ಗ್ರಾಮದ ಶ್ರೀ ಭಗವತಿ ದೇವಾಲಯದ ವಾರ್ಷಿಕ ಉತ್ಸವವು ತಾ. ೨೨ರಿಂದ ೨೬ರವರೆಗೆ ನಡೆಯಲಿದೆ ಎಂದು ದೇವಸ್ಥಾನ ಆಡಳಿತ ಮಂಡಳಿ ಪ್ರಕಟಣೆ ತಿಳಿಸಿದೆ.
ತಾ. ೨೨ ರಂದು ಬೆಳಿಗ್ಗೆ ೯.೩೦ಗಂಟೆಗೆ ಶ್ರೀ ಗಣಪತಿ ಹೋಮ, ಮಹಾಪೂಜೆ, ಸಂಜೆ ೬.೩೦ಕ್ಕೆ ಪ್ರಾರ್ಥನೆ, ಭಂಡಾರ ತರುವುದು, ಅಂದಿಬೆಳಕು, ಮಹಾಪೂಜೆ, ಪ್ರಸಾದ ವಿತರಣೆ, ತಾ. ೨೩ ರಂದು ಬೆಳಿಗ್ಗೆ ೬ ಗಂಟೆಗೆ ಶ್ರೀ ಭಗವತಿ ದೇವರು ಬಲಿ ಬರುವುದು, ಮಹಾಪೂಜೆ, ಸಂಜೆ ೬.೩೦ ಗಂಟೆಗೆ ಬೆಳಕು, ದೇವರು ಬಲಿ ಬರುವುದು, ಅಂದಿಬೆಳಕು, ಮಹಾಪೂಜೆ, ಅನ್ನಸಂತರ್ಪಣೆ, ಶ್ರೀ ಪರದೇವರ ಕೊಟ್ಟದಲ್ಲಿ ಕೊಟ್ಟಿಪಾಡವೊ ಕಾರ್ಯಕ್ರಮಗಳು ನಡೆಯಲಿವೆ. ತಾ. ೨೪ರಂದು ಬೆಳಿಗ್ಗೆ ೬ ಗಂಟೆಗೆ ಶ್ರೀ ದೇವರು ಬಲಿ ಬರುವುದು, ಅಯ್ಯಪ್ಪ ದೇವರ ಪೂಜೆ, ಮಹಾಪೂಜೆ, ಸಂಜೆ ಬೆಳಕು, ಶ್ರೀ ದೇವರ ಬಲಿ, ಅಂದಿಬೆಳಕು ಮಹಾಪೂಜೆ ಪ್ರಸಾದ ವಿತರಣೆ, ತಾ.೨೫ರಂದು ಬೆಳಗ್ಗೆ ೬ ಗಂಟೆಯಿAದ ಶ್ರೀ ದೇವರ ನೃತ್ಯ ಬಲಿ, ಶ್ರೀ ಪರದೇವರ ಕೊಟ್ಟದಿಂದ ದೇವರು ಮಲಿಯಪಟ್ಟಿಗೆ ಬರುವುದು, ತಕ್ಕರ ಮನೆಯಿಂದ ಅಯ್ಯಪ್ಪ ದೇವರ ಭಂಡಾರ ಹಾಗೂ ಚೋಮಪೋರು ಬರುವುದು, ನುರ್ಚಟೆ ಬಾರಣಿ, ಎತ್ತು ಪೋರಾಟ, ತೆಂಗೆಪೋರು, ಬೆಳಕು, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಶ್ರೀ ದೇವರ ನೃತ್ಯ ಬಲಿ, ಶ್ರೀ ಪರದೇವರ, ಎಡೆಕೊಲ್ಲಿ ಅಯ್ಯಪ್ಪ ದೇವರ, ಕುಟ್ಟಿಚಾತ ದೇವರುಗಳ ಕೋಲ ಹಾಗೂ ದೇವರ ಬೇಟೆ ಕಾರ್ಯಕ್ರಮಗಳು ನಡೆಯಲಿವೆ.
ತಾ. ೨೬ರಂದು ಮಧ್ಯಾಹ್ನ ಮಹಾಪೂಜೆ ಸಂಜೆ ೪ಗಂಟೆಗೆ ಬೆಳಕು, ಶ್ರೀ ದೇವರ ಬಲಿ ನಂತರ ಜಳಕ ಕಾರ್ಯ, ನೃತ್ಯ ಬಲಿ, ಅನ್ನಸಂತರ್ಪಣೆ, ಮಂತ್ರಾಕ್ಷತೆ ಕಾರ್ಯಕ್ರಮಗಳು ನಡೆಯಲಿವೆ.