ಮಡಿಕೇರಿ, ಮಾ. ೧೮: ಬೆಂಗಳೂರು ಕೊಡವ ಸಮಾಜದ ವತಿಯಿಂದ ಆಯೋಜನೆ ಮಾಡಲಾಗಿದ್ದ ಕೊಡವ ವಾಲಗ ಸ್ಪರ್ಧೆಯ ಬಗ್ಗೆ ವಿಜೇತ ವಾಲಗ ತಂಡದ ಪ್ರಮುಖರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಸಾವಿರಾರು ಮಂದಿಯ ಸಮ್ಮುಖದಲ್ಲಿ ಬಹುಮಾನ ಪಡೆದ ಬಗ್ಗೆ ಪುಳಕಿತರಾಗಿದ್ದಾರೆ.
ಈ ಬಗ್ಗೆ ‘ಶಕ್ತಿ’ಯೊಂದಿಗೆ ಪ್ರತಿಕ್ರಿಯಿಸಿ ವಿಜೇತ ತಂಡವಾದ ಚೆನ್ನಯ್ಯನಕೋಟೆ ತಂಡದ ಕಲಾವಿದ ಮೋರಿ ವಾದಕ ಪವಿತ್ರ ಅವರು ತಮ್ಮ ಜೀವಮಾನದಲ್ಲಿ ಇದೊಂದು ಭಾರೀ ಸಂತೃಪ್ತಿ ತಂದ ವಿಚಾರವಾಗಿದೆ.
ವಾಲಗ ಕಲೆಯನ್ನು ಉಳಿಸಿ - ಪೋಷಿಸಲು ಇದು ಇನ್ನಷ್ಟು ಉತ್ತೇಜನ ನೀಡಿದೆ. ಬೆಂಗಳೂರು ಕೊಡವ ಸಮಾಜ ಇದೇ ಪ್ರಥಮ ಬಾರಿಗೆ ಕೊಡವ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿರುವ ವಾಲಗ ಕಲೆಯ ಬಗ್ಗೆ ಹೆಚ್ಚು ಕಾಳಜಿ ತೋರಿ ಈ ಕಲಾವಿದರನ್ನು ಪ್ರೋತ್ಸಾಹಿಸಿದ್ದು ಉತ್ತಮ ವಿಚಾರ ಎಂದರು. ತಮ್ಮ ತಂಡದ ಎಲ್ಲಾ ಸದಸ್ಯರು ಈ ಬಗ್ಗೆ ಸಂತಸದಿAದಿದ್ದಾರೆ. ವಾಲಗ ತಮ್ಮ ಕಸುಬಾಗಿದ್ದು, ಸಾಮಾನ್ಯ ವಿಚಾರ ಎಂಬAತಿದ್ದರೂ ಸ್ಪರ್ಧೆಯ ಮೂಲಕ ಸಾವಿರಾರು ಜನರ ಎದುರು ಬಹುಮಾನ ಪಡೆಯುವಾಗ ಸಂಕೋಚವೂ ಆಯಿತು ಎಂದು ಅನುಭವ ಹಂಚಿಕೊAಡರು.
ಕೊಡವ ಸಂಸ್ಕೃತಿಯಲ್ಲಿ ವಾಲಗ ಪ್ರಮುಖವಾಗಿದೆ. ಆದರೂ ಇತ್ತೀಚಿನ ದಿನಗಳಲ್ಲಿ ಇದೊಂದು ಸಾಮಾನ್ಯ ವಿಚಾರ ಎಂಬAತಹ ಭಾವನೆ ಕಂಡುಬರುತ್ತಿದೆ. ಆದರೆ ಇದರ ಮಹತ್ವ ಅರಿತು ಈ ಕಲೆಯಲ್ಲಿ ತೊಡಗಿಸಿಕೊಂಡಿರುವವರ ಬಗ್ಗೆ ಕಾಳಜಿ ತೋರಿದ್ದು ಪ್ರಶಂಶನೀಯ ಎಂದು ಚಾಮುಂಡೇಶ್ವರಿ ವಾಲಗ ತಂಡದ ಮುಖ್ಯಸ್ಥರಾಗಿರುವ ಪವಿತ್ರ ಹೇಳಿದರು.
ತಮ್ಮದು ಇದು ಐದನೇ ತಲೆಮಾರಿನಲ್ಲಿ ಮುಂದುವರಿಯುತ್ತಿರುವ ಕಲೆಯಾಗಿದೆ. ತಾವೂ ಸೇರಿದಂತೆ ಬಹುತೇಕ ಕಲಾವಿದರಿಗೆ ರಾಷ್ಟç ಪ್ರಶಸ್ತಿ ವಿಜೇತರಾಗಿರುವ ಅಮ್ಮತ್ತಿಯ ನರಸಯ್ಯ ಅವರು ಗುರುಗಳಾಗಿದ್ದು, ಮಾರ್ಗದರ್ಶಕರಾಗಿದ್ದಾರೆ ಎಂದು ಅವರು ನೆನೆಸಿಕೊಂಡರು. ಕೊಡವ ವಾಲಗದಲ್ಲಿ ೧೪ ಪ್ರಾಕಾರಗಳು ಬರುತ್ತವೆ. ಇದು ಪ್ರಸ್ತುತ ಬಹುತೇಕರಿಗೆ ಅರಿವಿಲ್ಲದಂತಾಗುತ್ತಿದೆ. ಈ ಕಲೆಯಿಂದ ಹಿಂಜರಿಯುತ್ತಿರುವ ಯುವ ಜನಾಂಗಕ್ಕೂ ಇದು ಪ್ರೇರಣೆ ಎಂದರು.
ಈ ಬಾರಿಯ ಸ್ಪರ್ಧೆಯಲ್ಲಿ ಇದಕ್ಕೆ ಆದ್ಯತೆ ನೀಡಲಾಗಿತ್ತು. ಇದರಲ್ಲಿ ಸಾವಿನ ಸಂದರ್ಭದ ವಾದ್ಯ ಹೊರತುಪಡಿಸಿ ಇನ್ನಿತರ ಪ್ರಾಕಾರಗಳಾದ ಆಟ್-ಕೊಟ್ಟ್, ಜೋಗಿಕೊಟ್ಟ್, ಸುಗ್ಗಿಕೊಟ್ಟ್, ಎರವಡಾಟ್, ಪಾಂಬಾಟ್, ವಡ್ಡರಚೀನಿ, ಉಮ್ಮತ್ತಾಟ್, ಬೊಳಕಾಟ್, ಪುತ್ತರಿಪಾಟ್, ಕುರುಂದಪಾಟ್, ದೇವಆಟ್, ನರಿಕೊಟ್ಟ್, ಮೋಹಿನಿಕೊಟ್ಟ್ ಎಂಬ ಕಲೆ ಇರುವುದಾಗಿ ಅವರು ಮಾಹಿತಿಯಿತ್ತರು.
ತಂಡದವರಿಗೆ ಕೊಡುಗೆ
ಬೆಂಗಳೂರು ಕೊಡವ ಸಮಾಜದಿಂದ ವಾಲಗ ತಂಡದ ವಿಜೇತರಿಗೆ ರೂ. ೩೫ ಸಾವಿರ, ರೂ. ೩೦ ಸಾವಿರ ಹಾಗೂ ರೂ. ೨೫ ಸಾವಿರದಂತೆ ಬಹುಮಾನ ನೀಡಲಾಗಿದೆ. ಜೊತೆಗೆ ಎಲ್ಲಾ ತಂಡಕ್ಕೂ ತಲಾ ರೂ. ೧೨ ಸಾವಿರ ಪ್ರಯಾಣದ ವೆಚ್ಚ, ಊಟೋಪಚಾರ ಸೇರಿದಂತೆ ಪ್ರತಿ ಸದಸ್ಯರಿಗೂ ರೇಮಂಡ್ಸ್ ಶರ್ಟ್ಪೀಸ್ ಹಾಗೂ ಪ್ಯಾಂಟ್‌ಪೀಸ್ ಉಡುಗೊರೆಯಾಗಿ ನೀಡಲಾಯಿತು. ಜೊತೆಗೆ ವಾಲಗದ ಸಂದರ್ಭ ಕಿಟ್‌ಬಾಕ್ಸ್ ಒಂದನ್ನು ಇಟ್ಟು ಅದರಲ್ಲಿ ಸಂಗ್ರಹವಾದ ಹಣವನ್ನು ತಲಾ ರೂ. ೮ ಸಾವಿರದಂತೆ ನೀಡಿ ಪ್ರೋತ್ಸಾಹ ನೀಡಿದ್ದು ಈ ಬಾರಿಯ ವಾಲಗ ಸ್ಪರ್ಧೆಯ ವಿಶೇಷ.
ಮುಂದಿನ ಬಾರಿ ರೂ. ೧ ಲಕ್ಷ
ಮುಂದಿನ ಬಾರಿ ವಿಜೇತರಿಗೆ ರೂ. ೧ ಲಕ್ಷ ಬಹುಮಾನ ನೀಡಲಿರುವುದಾಗಿ ಕೊಡವ ಸಮಾಜದ ಅಧ್ಯಕ್ಷ ಚಿರಿಯಪಂಡ ಸುರೇಶ್ ನಂಜಪ್ಪ ಅವರು ಪ್ರಕಟಿಸಿದರು.
ಪರಿಕರ ಏನೇನು...?
ಪ್ರಸ್ತುತದ ದಿನಗಳಲ್ಲಿ ವಾಲಗ ಪರಿಕರಗಳಲ್ಲಿ ಬ್ಯಾಂಡ್ ಬಳಕೆ ಬಗ್ಗೆ ಒಂದಷ್ಟು ಅಸಮಾಧಾನವಿದೆ. ಇದರ ಬದಲು ಈ ಹಿಂದಿನ ಮಾದರಿಯಲ್ಲೇ ವಾಲಗ ಇರಬೇಕೆಂಬದು ಹಲವರ ಅಭಿಮತ. ಈ ಹಿನ್ನೆಲೆ ಎರಡುದೋಳು, ಪರೆತಾಳ, ಮೋರಿ, ಶೃತಿ ಹಾಗೂ ಎರಡು ಕೊಂಬುಗಳನ್ನು ಒಳಗೊಂಡAತೆ ಕೊಂಬ್‌ಕೊಟ್ಟ್ ವಾಲಗದ ಸ್ಪರ್ಧೆ ಆಯೋಜಿಸಲಾಗಿತ್ತು.
- ಶಶಿ ಕಾಯಪಂಡ