ಕುಶಾಲನಗರ, ಮಾ. ೧೮: ಕುಶಾಲನಗರ ಲಯನ್ಸ್ ಕ್ಲಬ್ ಹಾಗೂ ಗೌಡ ಸಮಾಜದ ಆಶ್ರಯದಲ್ಲಿ ಚಿತ್ರನಟ ದಿ. ಪುನೀತ್ ರಾಜ್ ಕುಮಾರ್ ಹುಟ್ಟುಹಬ್ಬ ಅಂಗವಾಗಿ ರಕ್ತದಾನ ಶಿಬಿರ ಕುಶಾಲನಗರ ಗೌಡ ಸಮಾಜ ಸಭಾಂಗಣದಲ್ಲಿ ನಡೆಯಿತು.
ಲಯನ್ಸ್ ಕ್ಲಬ್ ವಲಯ ಅಧ್ಯಕ್ಷ ಡಾ.ಪಂಚಮ್ ತಿಮ್ಮಯ್ಯ ಕಾರ್ಯಕ್ರಮ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಪುನೀತ್ ರಾಜ್ ಕುಮಾರ್ ಸಮಾಜಕ್ಕೆ ನೀಡಿದ ಕೊಡುಗೆ ಅಪಾರ ಎಂದು ಹೇಳಿದರು.
ಗೌಡ ಸಮಾಜದ ಅಧ್ಯಕ್ಷ ಚಿಲ್ಲನ ಗಣಿಪ್ರಸಾದ್ ಮಾತನಾಡಿ, ರಕ್ತದಾನ ಮಾಡಲು ಅವಕಾಶವಿರುವವರು ಕಡ್ಡಾಯವಾಗಿ ರಕ್ತದಾನದಂತಹ ಸತ್ಕಾರ್ಯದಲ್ಲಿ ತೊಡಗಿಸಿಕೊಂಡು ಇತರರ ಜೀವ ಉಳಿಸಲು ಕೈಜೋಡಿಸಬೇಕು ಎಂದರು.
ಜಿಲ್ಲಾ ರಕ್ತ ನಿಧಿ ಘಟಕದ ಡಾ.ಕರುಂಬಯ್ಯ ಮಾತನಾಡಿ ರಕ್ತದಾನ ಮಹತ್ವದ ಬಗ್ಗೆ ತಿಳಿಸಿದರು.
ಈ ಸಂದರ್ಭ ಲಯನ್ಸ್ ಕ್ಲಬ್ ಜಿಲ್ಲಾ ಕ್ಯಾಬಿನೆಟ್ ಉಪ ಕಾರ್ಯದರ್ಶಿ ಸುಮನ್ ಬಾಲಚಂದ್ರ, ಕುಶಾಲನಗರ ಅಧ್ಯಕ್ಷ ನಾರಾಯಣ, ಕಾರ್ಯದರ್ಶಿ ಕಿರಣ್, ಕುಶಾಲನಗರ ಗೌಡ ಸಮಾಜ ಉಪಾಧ್ಯಕ್ಷ ಕಾಶಿ ಪೂವಯ್ಯ, ಕಾರ್ಯದರ್ಶಿ ಹೇಮಂತ್, ಮೈಸೂರಿನ ಡಾ.ಇಬ್ರಾಹಿಂ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಹೆಚ್.ಕೆ.ಶಾಂತಿ, ಸೇರಿದಂತೆ ಲಯನ್ಸ್ ಪ್ರಮುಖರಾದ ಎಂ ಎಸ್ ಚಿಣ್ಣಪ್ಪ, ಡಾ.ಪ್ರವೀಣ್ ದೇವರಗುಂಡ, ರಾಜಶೇಖರ್, ಗೌಡ ಸಮಾಜದ ಪ್ರಮುಖರು, ರಕ್ತದಾನಿಗಳು ಇದ್ದರು. ಶಿಬಿರದಲ್ಲಿ ಒಟ್ಟು ೬೪ ಯುನಿಟ್ ಪ್ರಮಾಣದ ರಕ್ತ ಸಂಗ್ರಹ ಆಗಿರುವುದಾಗಿ ಕಾರ್ಯಕ್ರಮದ ಆಯೋಜಕರು ತಿಳಿಸಿದ್ದಾರೆ.++