ಸೋಮವಾರಪೇಟೆ, ಮಾ. ೧೮: ಸ್ಥಳೀಯ ಕೊಡವ ಸಮಾಜದ ಮಹಿಳಾ ಘಟಕಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ ಸಭೆ, ಸಮಾಜದ ಸಭಾಂಗಣದಲ್ಲಿ ಕೊಡವ ಸಮಾಜದ ಅಧ್ಯಕ್ಷರಾದ ಎಂ.ಬಿ. ಅಭಿಮನ್ಯು ಕುಮಾರ್ ಅಧ್ಯಕ್ಷತೆಯಲ್ಲಿ ನಡೆಯಿತು.

ಮಹಿಳಾ ಘಟಕದ ಅಧ್ಯಕ್ಷರಾಗಿ ಬಾಚಿನಾಡಂಡ ಇಂದಿರಾ ಚಿಂಗಪ್ಪ, ಉಪಾಧ್ಯಕ್ಷರಾಗಿ ಅಜ್ಜಮಕ್ಕಡ ವೀಣಾ ಕಾರ್ಯಪ್ಪ, ಕಾರ್ಯದರ್ಶಿಯಾಗಿ ಪೋರೆರ ಅನಿತಾ, ಖಜಾಂಚಿಯಾಗಿ ಹಂಚೆಟ್ಟಿರ ಸಾರಿಕ ತಮ್ಮಯ್ಯ, ಸಹಕಾರ್ಯದರ್ಶಿಯಾಗಿ ಉಡುವೇರ ರೇಖಾ ಹಾಗೂ ನಿರ್ದೇಶಕರುಗಳಾಗಿ ಆಪಾಡಂಡ ಆಶಾ ವೀರರಾಜ್, ಹಂಚೆಟ್ಟಿರ ಸುಮಿತಾ, ಮಾಳೆಯಂಡ ದಮಯಂತಿ, ಬಾಚಿನಾಡಂಡ ರೀಟಾ ಕುಶಾಲಪ್ಪ, ಮಲ್ಲಾಜಿರ ವಾಣಿ, ಬಾಚಿನಾಡಂಡ ಕನ್ನಿಕೆ ಕರುಂಬಯ್ಯ, ಬೈರಾಜಂಡ ಮೈನಾ ಪೂವಯ್ಯ, ಪಾಡೆಯಂಡ ಕವನ, ಮೇರಿಯಂಡ ರಾಣಿ, ಕಾಡೀರ ಪ್ರೇಮ, ಪಾಸುರ ರೇವತಿ, ನಾಗಂಡ ಧನ್ಯ ಅವರುಗಳು ಆಯ್ಕೆಯಾದರು.