ಮುಳ್ಳೂರು, ಮಾ. ೧೮: ಕ್ರೀಡೆಯಿಂದ ಆರೋಗ್ಯ ವೃದ್ದಿಯಾಗುತ್ತದೆ ಎಂದು ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತÀರ್ ಗೌಡ ಅಭಿಪ್ರಾಯಪಟ್ಟರು.
ಸಮಿಪದ ಮಾಲಂಬಿ ಬ್ರದರ್ಸ್ ವತಿಯಿಂದ ಹಮ್ಮಿಕೊಂಡಿದ್ದ ಸೋಮವಾರಪೇಟೆ, ಕುಶಾಲನಗರ ತಾಲೂಕು ಹಾಗೂ ಹಾಸನ ಜಿಲ್ಲೆಯ ಮರಿಯಾನಗರ ಮತ್ತು ಅರಗಲ್ಲು ಗ್ರಾಮಸ್ಥರ ವಾಲಿಬಾಲ್ ಪಂದ್ಯಾವಳಿಯ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ಗ್ರಾಮೀಣ ಭಾಗದಲ್ಲಿ ವಾಲಿಬಾಲ್‌ನಂತಹ ಕ್ರೀಡಾಕೂಟವನ್ನು ಹಮ್ಮಿಕೊಳ್ಳುತ್ತಿರುವುದು ಶ್ಲಾಘನಿಯ ಎಂದರು.
ಗ್ರಾ.ಪಂ.ಮಾಜಿ ಅಧ್ಯಕ್ಷ ಎಂ.ವಿ. ಅಶೋಕ್ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಇಂತಹ ಕ್ರೀಡಾಕೂಟವನ್ನು ಆಯೋಜನೆ ಮಾಡುವುದು ಸಾಹಸದ ಕೆಲಸವಾಗಿದೆ ಆದರೂ ಇಲ್ಲಿನ ಯುವ ಸಮೂಹ ವಾಲಿಬಾಲ್ ಪಂದ್ಯಾವಳಿಯನ್ನು ಆಯೋಜನೆ ಮಾಡಿರುವುದು ಶ್ಲಾಘನೀಯ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯೆ ರಾಜಮ್ಮ ರುದ್ರಯ್ಯ, ಕೃಷಿ ಪತ್ತಿನ ಸಂಘದ ಅಧ್ಯಕ್ಷ ಪ್ರಸನ್ನ ಕುಮಾರ್, ಪ್ರಮುಖರಾದ ಕೊಮರಪ್ಪ, ಸುರೇಶ್, ಮತ್ತಮ್ಮ ಗಣೇಶ್, ಲೀಲಾದಾಸ್, ಲಿಂಗರಾಜು, ತೀರ್ಥಪ್ರಸಾದ್, ಪ್ರಸನ್ನ, ಮಾಲಂಬಿ ಬ್ರದರ್ಸ್ ಸಮಿತಿ ಅಧ್ಯಕ್ಷ ಸಿದ್ದಪ್ಪಾಜಿ, ಸುಂದರ್, ಮತ್ತಪ್ಪ, ಉಣ್ಣಿಕೃಷ್ಣ, ಸುಬ್ರಮಣ್ಯ, ಚನ್ನಕೇಶವ ಮುಂತಾದವರು ಇದ್ದರು.
ವಾಲಿಬಾಲ್ ಪಂದ್ಯಾವಳಿಯಲ್ಲಿ ಕೂಡು ಮಂಗಳೂರು ಬಿ.ವೈ.ಸಿ ತಂಡ (ಪ್ರಥಮ) ಹೆಬ್ಬಾಲೆ ಟೀಮ್‌ಲಾಲಿ ತಂಡ (ದ್ವಿತೀಯ) ಶನಿವಾರಸಂತೆ ಫ್ರೆಂಡ್ಸ್ ತಂಡ (ತೃತೀಯ) ಆತಿಥೇಯ ಮಾಲಂಬಿ ಬ್ರದರ್ಸ್ ತಂಡ (ಚತುರ್ಥ ಸ್ಥಾನ) ಜಯಸಾಧಿಸಿತು.