ಮಡಿಕೇರಿ, ಮಾ. ೧೮: ಮರೆನಾಡ್ ಶೂಟರ್ಸ್ ಕ್ಲಬ್ ವತಿಯಿಂದ ತಾ. ೨೨ ರಂದು ಬಿರುನಾಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮರೆನಾಡು ಕೊಡವ ಸಮಾಜದ ಆವರಣದಲ್ಲಿ ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆ ಏರ್ಪಡಿಸಲಾಗಿದೆ. ಇದು ಮುಕ್ತ ಸ್ಪರ್ಧೆಯಾಗಿದ್ದು, ಒಟ್ಟು ನಾಲ್ಕು ವಿಭಾಗಗಳಲ್ಲಿ ನಡೆಯಲಿದೆ. ತಾ. ೨೨ ರಂದು ಬೆಳಿಗ್ಗೆ ೯.೩೦ ರಿಂದ ಸ್ಪರ್ಧೆ ಆರಂಭವಾಗಲಿದೆ.

.೨೨ ರೈಫಲ್, ೧೨ನೇ ಬೋರ್, ಏರ್ ರೈಫಲ್ ಹಾಗೂ ಸ್ಲಗ್ ವಿಭಾಗದಲ್ಲಿ ಸ್ಪರ್ಧೆ ಏರ್ಪಡಿಸಲಾಗಿದೆ. ವಿಜೇತರಿಗೆ ಎಲ್ಲಾ ವಿಭಾಗಗಳಲ್ಲೂ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನವಿದ್ದು, ಸ್ಪರ್ಧೆಯಲ್ಲಿ ಪಾಲ್ಗೊಳ್ಳುವವರು ಕುಪ್ಪುಡೀರ ಪೊನ್ನು ಮುತ್ತಪ್ಪ ೮೭೬೨೩೪೭೫೧೭, ನೆಲ್ಲೀರ ಧನು ೯೪೪೮೬೪೭೮೨೭ ಹಾಗೂ ಕಳ್ಳಂಗಡ ನವೀನ್ ೯೪೪೮೭೧೦೫೪೯ ಅವರನ್ನು ಸಂಪರ್ಕಿಸಬಹುದು ಎಂದು ಮರೆನಾಡ್ ಶೂಟರ್ಸ್ ಕ್ಲಬ್‌ನ ಪ್ರಕಟಣೆ ತಿಳಿಸಿದೆ.