ಸುಂಟಿಕೊಪ್ಪ, ಮಾ. ೧೮: ಸರಕಾರಿ ಯೋಜನೆಗಳ ಜೊತೆಗೆ ರಾಷ್ಟಿçÃಕೃತ ಬ್ಯಾಂಕ್‌ಗಳಿAದ ದೊರೆಯುವ ಸಾಲ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಸಾಮಾಜಿಕವಾಗಿ ಮತ್ತು ಅರ್ಥಿಕವಾಗಿ ಸಬಲೀಕರಣಗೊಳ್ಳುವಂತೆ ಸೋಮವಾರಪೇಟೆ ತಾಲೂಕು ಸಹಾಯಕ ಕೃಷಿ ನಿರ್ದೇಶಕ ಮತ್ತು ಕೊಡಗರಹಳ್ಳಿ ಗ್ರಾಮ ಪಂಚಾಯಿತಿ ಆಡಳಿತಾಧಿಕಾರಿ ವೀರಣ್ಣ ಕರೆ ನೀಡಿದರು.
ಕೊಡಗರಹಳ್ಳಿ ಗ್ರಾಮ ಪಂಚಾಯಿತಿ ಮತ್ತು ಸಂಜೀವಿನಿ ಒಕ್ಕೂಟ ವತಿಯಿಂದ ಕೊಡಗರಹಳ್ಳಿ ನೇತಾಜಿ ಭವನದಲ್ಲಿ ಅಯೋಜಿಸಲಾಗಿದ್ದ ಸಂತೆ ಮೇಳವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸರಕಾರವು ಮಹಿಳೆಯರ ಅಭಿವೃದ್ಧಿಗಾಗಿ ಸಾಕಷ್ಟು ಯೋಜನೆಗಳು ರೂಪಿಸಿ ಸಾಲ ಸೌಲಭ್ಯ ಮತ್ತು ರಿಯಾಯಿತಿ ದರದಲ್ಲಿ ಧನ ಸಹಾಯ ನೀಡುತ್ತಿದ್ದು, ಮಹಿಳೆಯರು ಸ್ವಾಲಂಬಿಗಳಾಗಲು ವಿಪುಲ ಅವಕಾಶಗಳಿವೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಯೂನಿಯನ್ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ಸಂಸ್ಥೆಯ ಕೂಡಿಗೆ ಕೇಂದ್ರದಿAದ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡಿದ ನವ್ಯ ಮಾತನಾಡಿ, ಸ್ವ ಉದ್ಯೋಗ ತರಬೇತಿಯಲ್ಲಿ ೬೪ ವಿಧದ ತರಬೇತಿ ನೀಡಲಾಗುತ್ತಿದ್ದು, ಊಟ ವಸತಿಯೊಂದಿಗೆ ಉಚಿತ ತರಬೇತಿ ನೀಡಲಾಗುತ್ತಿದೆ. ನಿರುದ್ಯೋಗ ಎಂಬುದು ಸಮಸ್ಯೆಯಲ್ಲ. ಉದ್ಯೋಗ ಮಾಡುವವವರಿಗೆ ನೂರೆಂಟು ಮಾರ್ಗಗಳು ಇವೆ ಎಂದು ಮಾಹಿತಿ ನೀಡಿದರು.
ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ಶಿಕ್ಷಕಿ ಸುಮ ಮಾತನಾಡಿ, ಇದೊಂದು ಪ್ರೇರಣಾದಾಯಕ ಕಾರ್ಯಕ್ರಮ. ಮಕ್ಕಳು ಮತ್ತು ಮಹಿಳೆಯರಿಗೆ ಸಾರ್ವಜನಿಕ ಮತ್ತು ವ್ಯವಹಾರಿಕ ಜೀವನವನ್ನು ಈ ಮಾಸಿಕ ಸಂತೆ ತೋರಿಸಿಕೊಟ್ಟಿದೆ. ಸ್ವ ಉದ್ಯೋಗದಿಂದ ಸ್ವಾವಲಂಬಿಗಳಾಗಿ ಬದುಕಲು ಈ ರೀತಿಯ ಕಾರ್ಯಕ್ರಮಗಳು ಹೆಚ್ಚು ಹೆಚ್ಚಾಗಿ ನಡೆಯಬೇಕೆಂದು ಆಶಿಸಿದರು.
೨ ದಿನಗಳ ಕಾಲ ನಡೆದ ಸಂತೆಯಲ್ಲಿ ೧೭ಕ್ಕೂ ಹೆಚ್ಚು ಮಳಿಗೆಗಳಲ್ಲಿ ವ್ಯಾಪಾರ-ವಹಿವಾಟು ನಡೆಯಿತು. ಮಹಿಳೆಯರು ತಾವೇ ಬೆಳೆದ ಸೊಪ್ಪು, ತರಕಾರಿ ಮನೆಯಲ್ಲಿ ತಯಾರಿಸಿ ತಂದ ತಿಂಡಿ, ತಿನಿಸು, ಮಜ್ಜಿಗೆ ಪಾನಕ ಮೊದಲಾದವುಗಳನ್ನು ಮಹಿಳೆಯರು ಮಾರಾಟ ಮಾಡಿದರು.
ಕಂಬಿಬಾಣೆಯ ಬ್ರಹ್ಮಜ್ಞಾನ ಮಂದಿರ ವತಿಯಿಂದ ಮಾಸಿಕ ಸಂತೆಯಲ್ಲಿ ಪಾಲ್ಗೊಂಡವರಿಗೆ ಶಾಲಾ ವಿದ್ಯಾರ್ಥಿಗಳಿಗೆ ಹಾಗೂ ಆಸಕ್ತರಿಗೆ ಉಚಿತವಾಗಿ ಭಗವದ್ಗೀತಾ ಗ್ರಂಥವನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಭುವನೇಶ್ವರಿ, ಉಪಾಧ್ಯಕ್ಷೆ ಇಂದಿರಾ, ಖಜಾಂಜಿ ಪುಷ್ಪಾಲತಾ, ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ರವೀಶ್, ನಿಕಟಪೂರ್ವ ಸದಸ್ಯೆ ಕಲಾಮಣಿ, ಸಂಜೀವಿನಿ ಒಕ್ಕೂಟದ ಮುಖ್ಯಲೆಕ್ಕಾಧಿಕಾರಿ ಶಾರಾದ, ಮೇಲ್ವಿಚಾರಕಾರದ ಪದ್ಮಶ್ರೀ, ಸ್ಥಳೀಯ ಸಂಪನ್ಮೂಲ ವ್ಯಕ್ತಿ ಪೂರ್ಣಿಮ, ಸಂಜೀವಿನಿ ಒಕ್ಕೂಟದ ತಾಲೂಕು ವ್ಯವಸ್ಥಾಪಕ ರವಿ, ಕೃಷಿ ಉತ್ತೇಜನಕ್ಕೆ ಶ್ರಮಿಸುತ್ತಿರುವ ಸ್ವಯಂ ಸೇವಾ ಸಂಸ್ಥೆ ಸಬಲದ ರೇವಣ ಸಿದ್ಧಪ್ಪ, ಪ್ರಸನ್ನ ಸೇರಿದಂತೆ ೭ನೆ ಹೊಸಕೋಟೆ, ಸುಂಟಿಕೊಪ್ಪ, ನಾಕೂರು ಶಿರಂಗಾಲ, ಮಾದಾಪುರ ವ್ಯಾಪ್ತಿಯ ಪ್ರತಿನಿಧಿಗಳು ಪದಾಧಿಕಾರಿಗಳು ಪಾಲ್ಗೊಂಡಿದ್ದರು.