ಪೊನ್ನಂಪೇಟೆ, ಮಾ. ೧೭: ಪೊನ್ನಂಪೇಟೆ ಶೋಟಕಾನ್ ಕರಾಟೆ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಿಗೆ ಬೆಲ್ಟ್ ಹಾಗೂ ಪ್ರಮಾಣಪತ್ರ ವಿತರಣಾ ಸಮಾರಂಭವು ಪೊನ್ನಂಪೇಟೆ ಸಂತ ಅಂಥೋಣಿ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ ನಡೆಯಿತು.
ಶೋಟಕಾನ್ ಕರಾಟೆ ವಿದ್ಯಾಸಂಸ್ಥೆ ಮುಖ್ಯ ಶಿಕ್ಷಕ ಪಾಲೆಕಾಡ್ ಗೋಪಾಲಕೃಷ್ಣ ಅವರು ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಿದರು. ಸಂತ ಅಂಥೋಣಿ ಶಾಲೆ ಮುಖ್ಯ ಶಿಕ್ಷಕಿ ಸೆವರಿನ್ ಅವರು ಬೆಲ್ಟ್ ಮತ್ತು ಪ್ರಮಾಣ ಪತ್ರ ವಿತರಿಸಿದರು. ಈ ಸಂದರ್ಭ ಶೋಟಕಾನ್ ಕರಾಟೆ ವಿದ್ಯಾಸಂಸ್ಥೆ ತರಬೇತುದಾರ ಬಿ. ಎಸ್. ಸಂತೋಷ್ ಕುಮಾರ್, ಶಿಕ್ಷಕರಾದ ಮೇನಕಾ, ಶಿಲ್ಪಾ ಇದ್ದರು.