ಸಿದ್ದಾಪುರ, ಮಾ. ೧೭: ಅಡುಗೆ ಅನಿಲದ ಕೊರತೆ ಮತ್ತು ಬೆಲೆ ಏರಿಕೆಯನ್ನು ವಿರೋಧಿಸಿ ನೆಲ್ಲಿಹುದಿಕೇರಿ ಸಿಪಿಐಎಂ ಶಾಖೆಯ ವತಿಯಿಂದ ಕೇಂದ್ರ ಸರ್ಕಾರದ ಜನ ವಿರೋಧಿ ನೀತಿಯನ್ನು ಖಂಡಿಸಿ ಬಸ್ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಲಾಯಿತು.
ಜನಸಾಮಾನ್ಯರು ಉಪಯೋಗಿಸುತ್ತಿರುವ ಅಡುಗೆ ಅನಿಲದ ಬೆಲೆಯು ವಿಪರೀತವಾಗಿ ಏರಿಕೆಯಾಗಿದೆ ಮತ್ತು ತಿಂಗಳಿಗೆ ಗ್ರಾಮೀಣ ಪ್ರದೇಶದಲ್ಲಿ ೪೫ ದಿನಕ್ಕೆ ಮಾತ್ರ ಸಿಲಿಂಡರ್ ನೀಡುವುದಾಗಿ ಆದೇಶಿಸಿರುವುದು ಬಡವರಿಗೆ ಸಮಸ್ಯೆಯಾಗಿದೆ. ವಾಣಿಜ್ಯ ಅಡುಗೆ ಅನಿಲದ ಬೆಲೆಯು ವಿಪರೀತವಾಗಿ ಏರಿಕೆ ಆಗಿರುವುದರಿಂದ ನಗರ ಪ್ರದೇಶಗಳಲ್ಲಿ ಬದುಕುತ್ತಿರುವ ಕುಟುಂಬಗಳು ಹೊಟೇಲ್‌ಗಳು ಮುಚ್ಚಿರುವುದರಿಂದ ನಗರ ಪ್ರದೇಶವನ್ನು ಬಿಟ್ಟು ಗ್ರಾಮೀಣ ಪ್ರದೇಶಕ್ಕೆ ಜನರು ವಲಸೆ ಬರುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೇಂದ್ರ ಸರ್ಕಾರ ಕೂಡಲೇ ಏರಿಕೆ ಮಾಡಿರುವ ಅಡುಗೆ ಅನಿಲದ ದರವನ್ನು ಇಳಿಸಬೇಕು. ಜನಸಾಮಾನ್ಯರಿಗೆ ಸುಲಭವಾಗಿ ಅಡುಗೆ ಅನಿಲ ಸಿಗಬೇಕೆಂದು ಒತ್ತಾಯಿಸಲಾಯಿತು. ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಪಿ .ಆರ್. ಭರತ್, ಟಿ.ಟಿ .ಉದಯ ಕುಮಾರ್, ಎಂ.ಜಿ .ಜೋಸ್, ಶೌಕತ್ತಲಿ, ಶಿವರಾಮನ್, ಚಂದ್ರನ್, ಬೋಜಿ , ರಘು, ಹಬೀಬ್, ಸುಬ್ರಮಣಿ, ಲಲಿತಮ್ಮ, ಕಾವೇರಿ , ಸತ್ತಾರ್, ಇನ್ನಿತರರು ಭಾಗವಹಿಸಿದ್ದರು.