ಮಡಿಕೇರಿ, ಮಾ. ೧೭; ಕೃಷಿ ಕ್ಷೇತ್ರದಲ್ಲಿ ವಿವಿಧ ರೀತಿಯಲ್ಲಿ ಸೇವೆ ಸಲ್ಲಿಸುತ್ತಿರುವ ಜಿಲ್ಲೆಯ ಯಾಲದಾಳು ಕುಮುದಾ ಜಯಪ್ರಶಾಂತ್ ಅವರಿಗೆ ದಕ್ಷಿಣ ಭಾರತ ಮಹಿಳಾ ಸಾಧಕಿ ಪ್ರಶಸ್ತಿ -೨೦೨೬ರ ಅಡಿಯಲ್ಲಿ ಅತ್ಯುತ್ತಮ ಸಾಧಕಿ ಪ್ರಶಸ್ತಿ ಲಭಿಸಿದೆ.

ಟ್ವೆಲ್ ಮಾಗಜೈನ್ ವತಿಯಿಂದ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ೨೦೦ಕ್ಕೂ ಅಧಿಕ ಹೆಚ್ಚು ಮಹಿಳಾ ಸಾಧಕಿಯರಿಗೆ ಪ್ರಶಸ್ತಿ ನೀಡಲಾಗಿದ್ದು, ಕೃಷಿ ಕ್ಷೇತ್ರದಲ್ಲಿನ ಉದ್ಯಮಶೀಲತೆ, ರೈತರಿಗೆ ತಾಂತ್ರಿಕ ಮಾರ್ಗದರ್ಶನ, ಎಫ್‌ಪಿಒಗಳ ಸಾಮರ್ಥ್ಯ ವೃದ್ಧಿ, ಡಿಜಿಟಲ್ ಕೃಷಿ ವಿಸ್ತರಣೆ ಸೇವೆಗಳು ಹಾಗೂ ಸ್ಥಿರ ಕೃಷಿ ವ್ಯವಸ್ಥೆಗಳ ಅಭಿವೃದ್ಧಿಗೆ ನೀಡುತ್ತಿರುವ ಸೇವೆಗಳನ್ನು ಪರಿಗಣಿಸಿ ಕುಮುದಾಳಿಗೆ ಪ್ರಶಸ್ತಿ ನೀಡಲಾಗಿದೆ. ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಚೆನ್ನೆöÊನಲ್ಲಿ ನಡೆದ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಜಿಲ್ಲೆಯ ಗಾಳಿಬೀಡು ಗ್ರಾಮದವರಾಗಿರುವ ಕುಮುದಾ ಕೃಷಿ ಯೋಜನೆಗಳ ನಿರ್ವಹಣೆ, ಸಾವಯವ ಕೃಷಿ ಮತ್ತು ಗುಣಮಟ್ಟದ ಮಾನದಂಡಗಳ ವಿಸ್ತರಣೆ, ರೈತ ಉತ್ಪಾದಕರ ಸಂಘಗಳ ಬಲವರ್ಧನೆ ಹಾಗೂ ಡಿಜಿಟಲ್ ಕೃಷಿ ಕ್ಷೇತ್ರಗಳಲ್ಲಿ ಹಲವಾರು ವರ್ಷಗಳೊಂದಿಗೆ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಸ್ತುತ ಪತಿ ಜಯಪ್ರಶಾಂತ್ ಹಾಗೂ ಪುತ್ರನೊಂದಿಗೆ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.