ಮಡಿಕೇರಿ, ಮಾ. ೧೬: ಕಾಫಿ, ಕರಿಮೆಣಸು, ಎತ್ತುಗಳನ್ನು ಕಳವು ಮಾಡಿದ ಪ್ರತ್ಯೇಕ ಪ್ರಕರಣಕ್ಕೆ ಸಂಬAಧಿಸಿದAತೆ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಗೋಣಿಕೊಪ್ಪ ಪೊಲೀಸರು ಯಶಸ್ವಿಯಾಗಿದ್ದಾರೆ. ಉಳಿದ ಆರೋಪಿಗಳ ಪತ್ತೆಗೆ ಶೋಧ ಮುಂದುವರೆಸಿದ್ದಾರೆ.
ಚನ್ನಯ್ಯನ ಕೋಟೆ ನಿವಾಸಿ ಕೆ.ಎಂ. ಉಬೈದ್ (೩೬), ಮಾನಂದವಾಡಿಯ ಕಾಟಿಕೊಳಂ ನಿವಾಸಿ ಅಬ್ದುಲ್ ರೆಹಮಾನ್ (೩೪) ಹಾಗೂ ಕೊಟ್ಟಮುಡಿಯ ಪಿ.ಎಂ. ಮುಜೀಬ್ (೩೬) ಬಂಧಿತ ಆರೋಪಿಗಳು.
ದೇವರಪುರ ಗ್ರಾಮದ ಎಂ.ಎA. ಉತ್ತಯ್ಯ ಎಂಬವರು ಕಣದಲ್ಲಿ ಹಾಕಿದ್ದ ೧೫ ಚೀಲ ಕಾಫಿ ಕಳವಾಗಿದ್ದ ಕುರಿತು ತಾ. ೨೧.೧೨.೨೦೨೫ ರಂದು ದೂರು ನೀಡಿದ್ದರು. ಚನ್ನಂಗೊಲ್ಲಿಯ ಟಿ.ಹೆಚ್. ಹನೀಫ್ ಅವರಿಗೆ ಸೇರಿದ ೧೧ ಚೀಲ ಕರಿಮೆಣಸು ಕಳವಾದ ಕುರಿತು ಫೆ. ೧೯ ರಂದು ಗೋಣಿಕೊಪ್ಪ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದರನ್ವಯ ಪ್ರಕರಣ ದಾಖಲಾಗಿತ್ತು.
ಫೆ. ೨೮ ರಂದು ತಿತಿಮತಿ ಉಪಠಾಣೆ ಸಮೀಪದ ಹೆದ್ದಾರಿಯಲ್ಲಿ ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿರುವ ಕುರಿತು ದೊರೆತ ಮಾಹಿತಿ ಮೇರೆಗೆ ತಪಾಸಣೆ ನಡೆಸಿದ ಸಂದರ್ಭ ವಾಹನದಲ್ಲಿ ಎತ್ತುಗಳನ್ನು ಸಾಗಾಟ ಮಾಡುತ್ತಿರುವುದು ಕಂಡು ಬಂದಿದೆ. ತಕ್ಷಣ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆರೋಪಿಗಳು ಬಿಳಿಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಿಂದ ೨ ಎತ್ತುಗಳು ಹಾಗೂ ಹುಣಸೂರು ನಗರ ಠಾಣಾ ವ್ಯಾಪ್ತಿಯಿಂದ ಮಹೇಂದ್ರ ಬೊಲೇರೋ ವಾಹನವನ್ನು ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ. ಮತ್ತಷ್ಟು ವಿಚಾರಣೆ ನಡೆಸಿದ ಸಂದರ್ಭ ಕಾಫಿ, ಕರಿಮೆಣಸು ಕಳ್ಳತನ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ.
ಆರೋಪಿತರಿಂದ ರೂ. ೧,೪೩,೫೦೦ ನಗದು, ೩ ವಾಹನ, ೨ ಎತ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಡಿವೈಎಸ್‌ಪಿ ಮಹೇಶ್ ಕುಮಾರ್ ನೇತೃತ್ವ, ಸಿಪಿಐ ಶಿವರಾಜ್ ಆರ್. ಮುಧೋಳ್ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಗೋಣಿಕೊಪ್ಪ ಪಿಎಸ್‌ಐ ಪ್ರದೀಪ್ ಕುಮಾರ್, ಪೊನ್ನಂಪೇಟೆ ಪಿಎಸ್‌ಐ ಜಿ. ನವೀನ್, ಎ.ಎಸ್.ಐಗಳಾದ ಪಿ.ಟಿ. ಶ್ರೀನಿವಾಸ್, ಹೆಚ್.ಟಿ. ವೆಂಕಟೇಶ್, ಟಿ.ಪಿ. ಮಂಜುನಾಥ್, ಧನಪತಿ, ಸಿಬ್ಬಂದಿಗಳಾದ ಮೊಹಮ್ಮದ್ ಅಲಿ, ಎನ್.ಎಸ್. ಲೋಕೇಶ್, ಎನ್.ಹೆಚ್. ಸತೀಶ್, ತನುಕುಮಾರ್, ನಂಜುAಡ, ಪ್ರವೀಣ್, ಕುಶ, ಪ್ರಸನ್ನ, ನೆಹರು ಕುಮಾರ್, ಮಹೇಂದ್ರ, ಗಿರೀಶ್, ದರ್ಶನ್, ಅಬ್ದುಲ್ ಘನಿ, ರಾಘವೇಂದ್ರ, ಗುರುಪ್ರಸಾದ್, ರಘೂ, ಶಶಿಕುಮಾರ್, ಜೆ. ಉಮೇಶ್, ಸಂಪತ್ ಕುಮಾರ್, ಬೀರಲಿಂಗ, ತಾಂತ್ರಿಕ ವಿಭಾಗದ ಸಿಬ್ಬಂದಿಗಳಾದ ರಾಜೇಶ್, ಶರತ್ ರೈ, ಡಿಸಿಆರ್‌ಬಿ ವಿಭಾಗದ ಪ್ರವೀಣ್, ನಿರಂಜನ್ ಅವರುಗಳು ಭಾಗವಹಿಸಿದ್ದರು.