ಮಡಿಕೇರಿ, ಮಾ. ೧೬: ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ‘ವಚನ ಕಲ್ಯಾಣ’ ಎಂಬ ಅಹೋರಾತ್ರಿ (ಒಂಭತ್ತು ಗಂಟೆ) ನಾಟಕವನ್ನು ಸಿದ್ಧಪಡಿಸಿ, ನಾಡಿನಾದ್ಯಂತ ಪ್ರದರ್ಶನ ಮಾಡಲು ಇಲಾಖೆ ಉದ್ದೇಶಿಸಿದೆ.
ಆ ಸಂಬAಧ ಅರ್ಜಿ ಆಹ್ವಾನಿಸಿದೆ. ವಯೋಮಿತಿ ೧೮ ರಿಂದ ೪೦ ವರ್ಷಗಳು ರಂಗಶಿಕ್ಷಣದಲ್ಲಿ ತರಬೇತಿ ಪಡೆದ ಹಾಗೂ ನಾಟಕಗಳಲ್ಲಿ ಅಭಿನಯಿಸಿದ ಕಲಾವಿದರಿಗೆ ಆದ್ಯತೆಯನ್ನು ನೀಡಲಾಗುವುದು. ಅರ್ಜಿಗಳನ್ನು ತಾ. ೨೦ ರ ಒಳಗೆ ಸದಸ್ಯ ಕಾರ್ಯದರ್ಶಿ ಸಂತ ಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರ, ಕಲಾಗ್ರಾಮ, ಮಲ್ಲತ್ತಹಳ್ಳಿ, ಬೆಂಗಳೂರು-೫೬೦೦೫೬. ಅಂಚೆಯ ಮೂಲಕ ತಲುಪುವಂತೆ ಅಥವಾ ಮೇಲ್ ವಿಳಾಸ: ಞಚಿಟಿಚಿಞಚಿಡಿeseಚಿಡಿಛಿhಛಿeಟಿಣಡಿe@gmಚಿiಟ.ಛಿom ಮೂಲಕ ಸಲ್ಲಿಸಲು ಕೋರಿದೆ. ಅರ್ಜಿಯ ನಮೂನೆಯನ್ನು ಕನ್ನಡ ಸಂಸ್ಕೃತಿ ಇಲಾಖೆಯ ವೆಬ್ ಸೈಟ್ ಞಚಿಟಿಟಿಚಿಜಚಿsiಡಿi.ಞಚಿಡಿಟಿಚಿಣಚಿಞಚಿ.gov.iಟಿ ನಲ್ಲಿ ಪಡೆಯಬಹುದು. ಹೆಚ್ಚಿನ ಮಾಹಿತಿ ವಿವರಗಳಿಗಾಗಿ ಸಿ.ಬಸವಲಿಂಗಯ್ಯ(ವಚನ ಕಲ್ಯಾಣ ನಾಟಕದ ನಿರ್ದೇಶಕರು) ಇವರಲ್ಲಿ ಮಾಹಿತಿ ಪಡೆಯಬಹುದು ಮೊಬೈಲ್ ಸಂಪರ್ಕ ಸಂಖ್ಯೆ- ೯೪೪೮೫ ೩೮೬೨೦. ಸಂದರ್ಶನಕ್ಕೆ ಹಾಜರಾಗುವ ಕಲಾವಿದರಿಗೆ ಇಲಾಖೆಯು ಯಾವುದೇ ಭತ್ಯೆ ನೀಡಲಾಗುವುದಿಲ್ಲ.