ಮಡಿಕೇರಿ, ಮಾ. ೧೬: ಮಕ್ಕಂದೂರು ಕೊಡವ ಸಮಾಜದ ಮೈದಾನದಲ್ಲಿ ನೂತನ ಆಸ್ಟೊçà ಲೆದರ್ ಬಾಲ್ ಕ್ರಿಕೆಟ್ ಟರ್ಫ್ ಮತ್ತು ಬೌಲಿಂಗ್ ಘಟಕವನ್ನು ಮಡಿಕೇರಿ ಕ್ಷೇತ್ರದ ಶಾಸಕರಾದ ಡಾ.ಮಂತರ್ ಗೌಡ ಅವರು ಉದ್ಘಾಟಿಸಿದರು. ಮಕ್ಕಂದೂರು ಕೊಡವ ಸಮಾಜದ ಯೂತ್ ಕೌನ್‌ಸಿಲ್‌ನ ಪ್ರಯತ್ನದ ಫಲವಾಗಿ ಸ್ಥಾಪಿಸಲ್ಪಟ್ಟ ಟರ್ಫ್ನ ಸದುಪಯೋಗಪಡಿಸಿಕೊಳ್ಳಲು ಶಾಸಕರು ಈ ಸಂದರ್ಭ ಕರೆ ನೀಡಿದರು.
ಟರ್ಫ್ ಉದ್ಘಾಟಿಸಿದ ನಂತರ ಮಾತನಾಡಿದ ಮಂತರ್, ಮಕ್ಕಂದೂರು ಕೊಡವ ಸಮಾಜದ ಕಟ್ಟಡದ ಅಭಿವೃದ್ಧಿಗಾಗಿ ಶಾಸಕರ ನಿಧಿಯಿಂದ ರೂ.೫ ಲಕ್ಷ ಬಿಡುಗಡೆ ಮಾಡುವುದಾಗಿ ಭರವಸೆ ನೀಡಿದರು. ಮಕ್ಕಂದೂರು ಕೊಡವ ಯೂತ್ ಕೌನ್ಸಿಲ್‌ನ ಯುವಕರ ಕಾರ್ಯವನ್ನು ಶ್ಲಾಘಿಸಿದ ಶಾಸಕರು, ಜಿಲ್ಲೆಯಾದ್ಯಂತ ವೃತ್ತಿಪರ ಕ್ರಿಕೆಟ್ ತರಬೇತಿಯನ್ನು ಉತ್ತೇಜಿಸುವ ಅವಶ್ಯಕತೆಯಿದೆ ಎಂದು ಅಭಿಪ್ರಾಯಪಟ್ಟರು. ಬೇಸಿಗೆ ಶಿಬಿರವನ್ನು ಪ್ರಾರಂಭಿಸಲು ಮತ್ತು ಮಕ್ಕಳಲ್ಲಿ ವೃತ್ತಿಪರ ಕ್ರಿಕೆಟ್ ತರಬೇತಿಯನ್ನು ಉತ್ತೇಜಿಸಲು ಮಂಡಳಿಗೆ ಸಲಹೆ ನೀಡಿದರು.
ಇದೇ ಮೊದಲ ಬಾರಿಗೆ ಜಿಲ್ಲೆಯಲ್ಲಿ ಲೆದರ್ ಬಾಲ್ ಕ್ರಿಕೆಟ್ ಆಸ್ಟೊçà ಟರ್ಫ್ ಮತ್ತು ಬೌಲಿಂಗ್ ಯಂತ್ರವನ್ನು ಮಕ್ಕಂದೂರಿನÀಲ್ಲಿ ಪರಿಚಯಿಸಲಾಗಿದೆ ಎಂದು ಮಕ್ಕಂದೂರು ಯೂತ್ ಕೌನ್‌ಸಿಲ್‌ನ ಅಧ್ಯಕ್ಷ ನಂದೀರ ಸಜನ್ ಸೋಮಣ್ಣ ಮಾಹಿತಿ ನೀಡಿದರು.
ಅತಿಥಿಯಾಗಿ ಪಾಲ್ಗೊಂಡಿದ್ದ ಕೂರ್ಗ್ ಕ್ಯುಸೀನ್‌ನ ಮಾಲಿಕರಾದ ಶಯಾನ್ ಸುಬ್ಬಯ್ಯ ಅವರು ತಮ್ಮ ಸಹೋದರ ಕಣ್ಣಚಂಡ ಸ್ವರೂಪ್ ಅವರ ಸ್ಮರಣಾರ್ಥ ಬೌಲಿಂಗ್ ಯಂತ್ರ ಅಳವಡಿಕೆಗೆ ರೂ.೬೫,೦೦೦ ದೇಣಿಗೆ ನೀಡಿರುವುದಾಗಿ ವಿವರಿಸಿದರು. ಮಕ್ಕಂದೂರು ಕೊಡವ ಯುವ ಮಂಡಳಿಯನ್ನು ೨೦೨೦ರಲ್ಲಿ ಸ್ಥಾಪಿಸಲಾಗಿದ್ದು, ಜಿಲ್ಲೆಯಲ್ಲಿ ಆಸ್ಟೊçà ಟರ್ಫ್ ಅನ್ನು ಪರಿಚಯಿಸಿರುವುದು ಮಂಡಳಿಯ ಸಾಧನೆಯಾಗಿದೆ. ಹಲವಾರು ದಾನಿಗಳ ಕೊಡುಗೆಯಿಂದÀ ಇದು ಸಾಧ್ಯವಾಗಿದೆ ಎಂದು ಅವರು ಈ ಸಂದರ್ಭ ನುಡಿದರು. ಮತ್ತೊಬ್ಬ ಅತಿಥಿಯಾಗಿ ಪಾಲ್ಗೊಂಡಿದ್ದ ಶಕ್ತಿ ದಿನಪತ್ರಿಕೆಯ ವ್ಯವಸ್ಥಾಪಕರಾದ ಪ್ರಜ್ಞಾ ಬೋಪಯ್ಯ ಅವರು ಯೂತ್ ಕೌನ್ಸಿಲ್‌ನ ಪರಿಶ್ರಮವನ್ನು ಶ್ಲಾಘಿಸಿದರು. ಯುವ ಜನತೆ ಸ್ವಾಮೀ ವಿವೇಕಾನಂದ ಅವರು ತಿಳಿಸಿರುವಂತೆ ನಿರ್ಭಯತೆಯಿಂದ ದೇಶದ, ಗ್ರಾಮದ ಒಳಿತಿಗಾಗಿ ಧ್ವನಿ ಏರಿಸಿದರೆ ಸುಭದ್ರ ರಾಷ್ಟç ನಿರ್ಮಾಣ ಸಾಧ್ಯವೆಂದು ಅಭಿಪ್ರಾಯಪಟ್ಟರು.
ಬೆಳೆಗಾರ ಮತ್ತು ದಾನಿಗಳಲ್ಲಿ ಒಬ್ಬರಾದ ಕೊಕ್ಕಲೇರ ಅಪ್ಪಯ್ಯ, ಯುವಕರು ಈ ಸೌಲಭ್ಯವನ್ನು ಬಳಸಿಕೊಳ್ಳುವಂತೆಯೂ, ವೃತ್ತಿಪರ ಕ್ರಿಕೆಟ್‌ಗೆ ಇರುವ ಅವಕಾಶಗಳಲ್ಲಿ ಭಾಗಿಯಾಗಲು ಈ ಆಸ್ಟೊçà ಘಟಕ ಸಹಾಯಕಾರಿಯಾಗಲಿ ಎಂದು ಆಶಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ರವಿ ಕಾಳಪ್ಪ ಮಾತನಾಡಿ, ಯೂತ್ ಕೌನ್ಸಿಲ್ ಕಾರ್ಯವನ್ನು ಶ್ಲಾಘಿಸಿದರು. ಮಕ್ಕಂದೂರು ಕೊಡವ ಸಮಾಜದ ಅಧ್ಯಕ್ಷ ಮಧು ಮಂದಣ್ಣ, ಮಕ್ಕಂದೂರು ಪೊಮ್ಮಕಡ ಕೂಟದ ಅಧ್ಯಕ್ಷೆ ರೇಣು ತಿಮ್ಮಯ್ಯ, ಮಕ್ಕಂದೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ರಮೇಶ್ ಬಿ.ಎನ್, ದಾನಿಗಳಾದ ರಂಜಿತ್, ಯೂತ್ ಕೌನ್ಸಿಲ್‌ನ ಸದಸ್ಯರುಗಳಾದ ಎಂ. ಫೆಮ್ಮು, ಶರಿನ್ ದೇವಯ್ಯ, ದರ್ಶನ್ ಬೋಪಯ್ಯ ಮತ್ತು ಇತರರು ಹಾಜರಿದ್ದರು. ನಂದೀರ ವರ್ಷ ಅವರು ಪ್ರಾರ್ಥನೆ ನೆರವೇರಿಸಿದರು.