ಕೋವರ್ ಕೊಲ್ಲಿ ಇಂದ್ರೇಶ್

ಟೆಹರಾನ್, ಮಾ. ೧೫: ಇರಾನ್ ಹಾಗೂ ಅಮೇರಿಕ, ಇಸ್ರೇಲ್ ನಡುವಿನ ಯುದ್ದದ ಬಿಕ್ಕಟ್ಟು ದಿನೇ ದಿನೇ ಉಲ್ಬಣಿಸುತ್ತಲೇ ಸಾಗಿದೆ. ಪುಟ್ಟ ರಾಷ್ಟ್ರವಾಗಿದ್ದರೂ ದೈತ್ಯ ಅಮೇರಿಕಕ್ಕೆ ಸೆಡ್ಡು ಹೊಡೆದು ನಿಂತಿರುವ ಇರಾನ್ ಅಮೇರಿಕ ಮತ್ತು ಇಸ್ರೇಲ್ ಹಾಗೂ ಅವುಗಳ ಮಿತ್ರ ರಾಷ್ಟ್ರಗಳ ಹಡಗುಗಳಿಗೆ ಯಾವುದೇ ಕಾರಣಕ್ಕೂ ಜಲಸಂಧಿಯಲ್ಲಿ ಸರಕು ಸಾಗಾಣಿಕೆಗೆ ಅವಕಾಶ ನೀಡುವುದಿಲ್ಲ ಎಂದು ಘೋಷಿಸಿದೆ.

ಈಗ ಹಾರ್ಮುಜ್ ಜಲಸಂಧಿಯಲ್ಲಿ(Sಣಡಿಚಿiಣ oಜಿ ಊoಡಿmuz) ಹಡಗುಗಳು ಸಂಚರಿಸದAತೆ ಸಮುದ್ರದ ಒಳಗಡೆ ಸ್ಫೋಟಕವನ್ನು ಇರಿಸಿದೆ ಎಂದು ಅಮೇರಿಕ ಸೇನೆಯ ಗುಪ್ತಚರ ವಿಭಾಗದ ಮೂಲಗಳು ತಿಳಿಸಿವೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರತಿಕ್ರಿಯಿಸಿ, ಇರಾನ್ ಹಾರ್ಮುಜ್ ಜಲಸಂಧಿಯಲ್ಲಿ ಯಾವುದೇ ಜಲ ಸ್ಫೋಟಕ(ಓಚಿvಚಿಟ ಒiಟಿes) ಹಾಕಿದ್ದರೆ ತಕ್ಷಣವೇ ತೆಗೆದು ಹಾಕಬೇಕು. ಒಂದು ವೇಳೆ ತೆಗೆಯದೇ ಇದ್ದರೆ ಹಿಂದೆAದು ಕಾಣದ ರೀತಿಯಲ್ಲಿ ಇರಾನ್ ಮೇಲೆ ಮಿಲಿಟರಿ ದಾಳಿ ನಡೆಯಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ. ಅಲ್ಲದೆ ಹಾರ್ಮುಜ್ ಜಲಸಂಧಿಯಲ್ಲಿ ನೇವಲ್ ಮೈನ್ಸ್ ಹಾಕುತ್ತಿದ್ದ ಇರಾನಿನ ೧೬ ಹಡಗುಗಳನ್ನು ತಾನು ನಾಶ ಮಾಡಿರುವುದಾಗಿ ಅಮೆರಿಕÀ ತಿಳಿಸಿದೆ.

ಪಶ್ಚಿಮ ಏಷ್ಯಾದಲ್ಲಿ ಅಮೆರಿಕದ ಮಿಲಿಟರಿ ಕಾರ್ಯಾಚರಣೆಗಳನ್ನು ನೋಡಿಕೊಳ್ಳುವ ಯುಎಸ್ ಸೆಂಟ್ರಲ್ ಕಮಾಂಡ್, ಜಲಸಂಧಿಯ ಬಳಿ ೧೬ ಜಲ ಸ್ಫೋಟಕ ಸೇರಿದಂತೆ ಹಲವಾರು ಇರಾನಿನ ನೌಕಾ ಹಡಗುಗಳನ್ನು ನಾಶಪಡಿಸಿದೆ ಎಂದು ಹೇಳಿದೆ. ಆದಾಗ್ಯೂ, ಇರಾನ್ ಹಾಕಬಹುದಾದ ಗಣಿಗಳ ಬಗ್ಗೆ ಅದು ಯಾವುದೇ ಮಾಹಿತಿಯನ್ನು ನೀಡಿಲ್ಲ. ಆದಾಗ್ಯೂ, ಯುಎಸ್ ಗುಪ್ತಚರ ಇಲಾಖೆ ಹೇಳುವಂತೆ, ಇರಾನ್ ಕಾಲುವೆಯ ಉದ್ದಕ್ಕೂ ಅಮೆರಿಕದ ಮತ್ತಷ್ಟು ಚಟುವಟಿಕೆಯನ್ನು ತಡೆಯುವ ಪ್ರಯತ್ನದಲ್ಲಿ ತನ್ನ ಜಲ ಸ್ಪೋಟಕ ಹಾಕುವ ಕಾರ್ಯಾಚರಣೆಯನ್ನು ಹಡಗುಗಳ ಬದಲಿಗೆ ಸಣ್ಣ ದೋಣಿಗಳನ್ನು ಬಳಸಿಕೊಂಡು ಮಾಡುತ್ತಿದೆ ಎಂದು ದಿ ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.

ಏನಿದು ನೇವಲ್ ಮೈನ್ಸ್?

ನಕ್ಸಲೈಟ್‌ಗಳು, ಉಗ್ರಗಾಮಿಗಳು ಭೂಮಿ ಒಳಗಡೆ ಬಾಂಬ್ ಇಡುವುದನ್ನು ನೀವು ಕೇಳಿರಬಹುದು. ಈ ನೆಲಬಾಂಬ್ ಹುದುಗಿಸಿದ ಜಾಗದ ಮೇಲೆ ಕಾಲು ಇಟ್ಟಾಗ ಅಥವಾ ವಾಹನಗಳು ಸಂಚರಿಸಿದಾಗ ಒತ್ತಡದಿಂದ ಅದು ಸ್ಫೋಟಗೊಳ್ಳುತ್ತದೆ. ಅದೇ ರೀತಿಯಾಗಿ ನೀರಿನ ಒಳಗಡೆಯೂ ಸ್ಫೋಟಕಗಳನ್ನು ಇರಿಸಿ ಹಡಗುಗಳು, ಜಲಾಂತರ್ಗಾಮಿಗಳನ್ನು ನಾಶ ಮಾಡಲು ನೇವಲ್ ಮೈನ್ಸ್ ಬಳಕೆ ಮಾಡಲಾಗುತ್ತದೆ. ಹಡಗುಗಳು ಅವುಗಳ ಸಂಪರ್ಕಕ್ಕೆ ಬಂದಾಗ ಅಥವಾ ಅವುಗಳ ಹತ್ತಿರ ಸುಳಿದಾಗ ಸ್ಫೋಟಗೊಳ್ಳುವಂತೆ ವಿನ್ಯಾಸ ಮಾಡಲಾಗಿರುತ್ತದೆ. ಈ ಮೈನ್‌ಗಳನ್ನು ಆಕ್ರಮಣಕಾರಿಯಾಗಿ (ಶತ್ರುಗಳ ಹಡಗುಗಳ ಸಂಚಾರವನ್ನು ತಡೆಯಲು) ಬಳಸಲಾಗುತ್ತದೆ. ಇವು ಜಲಾಂತರ್ಗಾಮಿ ನೌಕೆಗಳು ಮತ್ತು ಹಡಗುಗಳನ್ನು ನಾಶಮಾಡಲು ನೀರಿನಲ್ಲಿ ಇರಿಸಲಾದ ಸ್ವಯಂ ಸ್ಫೋಟಕ ಸಾಧನಗಳಾಗಿವೆ. ನಿರ್ಬಂಧಿತ ಪ್ರದೇಶಗಳಿಗೆ ಶತ್ರುಗಳ ಪ್ರವೇಶವನ್ನು ತಡೆಯಲು ಅಥವಾ ನಿರ್ದಿಷ್ಟ ಸ್ಥಳದಲ್ಲಿ ಶತ್ರುಗಳನ್ನು ಕ್ವಾರಂಟೈನ್ ಮಾಡಲು ಸಹ ಅವುಗಳನ್ನು ಬಳಸಲಾಗುತ್ತದೆ.

ನೇವಲ್ ಮೈನ್ಸ್ ನಿಂದ ನಾಶ ಹೇಗೆ ?

ನೆಲ ಬಾಂಬ್ ಹುದುಗಿಸುವಾಗ ಬಳಸುವ ತಂತ್ರಜ್ಞಾನದAತೆಯೇ ನೌಕಾ ಸ್ಫೋಟಕಗಳನ್ನು ಬಳಸಲಾಗುತ್ತದೆ. ಆದರೆ ಇವುಗಳನ್ನು ಸಮುದ್ರದ ಅಡಿಯ ಭೂಮಿಯಲ್ಲಿ ಹುದುಗಿಸುವುದಿಲ್ಲ ಬದಲಿಗೆ ಸ್ಫೋಟಕಗಳನ್ನು ನೀರಿನ ಮೇಲಿನಿಂದ ೧೫ ರಿಂದ ೫೦ ಮೀಟರ್ ಆಳದಲ್ಲಿ ತೇಲಿ ಬಿಡಲಾಗಿರುತ್ತದೆ. ಕೆಲವೊಮ್ಮೆ ಸ್ಟೀಲ್ ತಂತಿ ಬಳಸಿಯೂ ಅಳವಡಿಸಲಾಗಿರುತ್ತದೆ. ಇವುಗಳಿಗೆ ಸೆನ್ಸಾರ್ ಅಳವಡಿಸಲಾಗಿರುತ್ತದೆ. ಹಡಗಿನ ತಳಭಾಗಕ್ಕೆ ಉಕ್ಕನ್ನು ಬಳಸಲಾಗಿದ್ದು ತುಕ್ಕು ಹಿಡಿಯುವುದನ್ನು ತಡೆಯಲು ಜಿಂಕ್ ಅಥವಾ ಮೆಗ್ನೀಷಿಯಂ ಬಳಸಿ ತಯಾರಿಸಲಾದ ವಿಶೇಷ ಪೇಂಟ್ ಬಳಿಯಲಾಗಿರುತ್ತದೆ. ಹೀಗಿದ್ದರೂ ಸ್ಫೋಟಕಗಳ ಸೆನ್ಸಾರ್ ಗಳು ಸುಲಭವಾಗಿಯೇ ಉಕ್ಕಿನೆಡೆ ಆಕರ್ಷಿತವಾಗುತ್ತವೆ. ಇದು ಹಡಗಿನ ಮೇಲ್ಮೆöÊಗೆ ತಾಗಿದ ಕೂಡಲೇ ಸ್ಫೋಟಕಗಳು ಸ್ಪೋಟಗೊಂಡು ಹಡಗಿಗೆ ಅಪಾರ ಹಾನಿ ಸಂಭವಿಸಿ ಅದು ಮುಳುಗುವ ಸಾಧ್ಯತೆಯೂ ಇದೆ.

ಜಗತ್ತಿನಲ್ಲಿ ಮೊದಲ ಬಳಕೆ

ಈ ಸ್ಫೋಟಕಗಳನ್ನು ಮೊದಲ ಅಮೇರಿಕನ್ ಕ್ರಾಂತಿಯ ಸಮಯದಲ್ಲಿ (೧೭೬೫-೮೩) ಬಳಸಲಾಯಿತು, ಯೇಲ್ ವಿದ್ಯಾರ್ಥಿ ಡೇವಿಡ್ ಬುಷ್ನೆಲ್ ನೀರಿನ ಅಡಿಯಲ್ಲಿ ಗನ್‌ಪೌಡರ್ ಅನ್ನು ಸ್ಫೋಟಿಸಬಹುದು ಎಂದು ಕಂಡುಹಿಡಿದನು. ನಂತರ ಫಿಲಡೆಲ್ಫಿಯಾದ ಡೆಲವೇರ್ ನದಿಯಲ್ಲಿ ಬೀಡುಬಿಟ್ಟಿದ್ದ ಬ್ರಿಟಿಷ್ ನೌಕಾಪಡೆಯ ಒಂದು ಭಾಗವನ್ನು ನಾಶಮಾಡಲು ಜಾರ್ಜ್ ವಾಷಿಂಗ್ಟನ್ (ಯುಎಸ್‌ನ ಮೊದಲ ಅಧ್ಯಕ್ಷ) ನೇತೃತ್ವದ ಒಂದು ತಂಡವು ಹೊಸದಾಗಿ ಕಂಡುಹಿಡಿದ ಸಮುದ್ರ ಸ್ಫೋಟಕ ಬಳಸಿದ್ದನ್ನು ಯುಎಸ್ ನೇವಲ್ ಹಿಸ್ಟರಿ ಮತ್ತು ಮಿಲಿಟರಿ ಕಮಾಂಡ್ ದಾಖಲಿಸಿದೆ. ಈ ಮೊದಲ ಸ್ಫೋಟಕದಲ್ಲಿ ಗನ್ ಪೌಡರ್ ಬಳಸಲಾಗಿತ್ತು . ಇದು ಯಾವುದೇ ಬ್ರಿಟಿಷ್ ಹಡಗನ್ನು ಹಾನಿಗೊಳಿಸುವಲ್ಲಿ ಸಾಧನವು ವಿಫಲವಾದರೂ, ಆವಿಷ್ಕಾರವು ಭರವಸೆಯನ್ನು ಸಾಬೀತುಪಡಿಸಿತು.

ಜಲ ಸ್ಫೋಟಕಗಳ ನಿಶಸ್ತಿçÃಕರಣ ಸಾದ್ಯವೇ ?

ಈ ರೀತಿಯ ಜಲಮಾರ್ಗದಲ್ಲಿ ಸಾಗುವ ನೌಕೆಗಳಿಗೆ ಹೊರ ಭಾಗದಲ್ಲಿ ಮರ ಅಥವಾ ಫೈಬರ್ ಶೀಟ್ ಅಳವಡಿಸಿದ್ದರೆ ಸ್ಫೋಟಕಗಳು ಸಿಡಿಯುವುದಿಲ್ಲ. ಜಲ ಸ್ಫೋಟಕಗಳನ್ನು ನಾಶ ಮಾಡಲು ಮೈನ್ ಸ್ವೀಪರ್‌ಗಳು , ಮಾನವರಹಿತ ನೌಕೆಗಳು ಮತ್ತು ಡ್ರೋನ್‌ಗಳನ್ನು ಬಳಸಲಾಗುತ್ತದೆ. ಮೈನ್ ಸ್ವೀಪರ್ ಗಳ ಹೊರ ಭಾಗ ಫೈಬರ್ ಶೀಟ್ ಅಳವಡಿಸಿರುವುದರಿಂದ ಸ್ಫೋಟ ಸಂಭವಿಸುವುದಿಲ್ಲ.

ಇರಾನ್‌ನ ಬಳಿ ಎಷ್ಟು ಸ್ಫೋಟಕಗಳಿವೆ?

ಮಾರ್ಚ್ ೨೦೨೬ ರ ಕಾಂಗ್ರೆಷನಲ್ ರಿಸರ್ಚ್ ಸರ್ವಿಸ್ (ಅಖS) ವರದಿಯ ಪ್ರಕಾರ, ಇರಾನ್ ಸುಮಾರು ೫,೦೦೦ ರಿಂದ ೪ಐದನೇ ಪುಟಕ್ಕೆ

(ಮೊದಲ ಪುಟದಿಂದ) ೬,೦೦೦ ಜಲ ಸ್ಫೋಟಕಗಳನ್ನು ಹೊಂದಿದೆ. ರಾಯಿಟರ್ಸ್ ವರದಿ ಪ್ರಕಾರ ಇರಾನ್ ಮಾರ್ಚ್ ಆರಂಭದ ನಂತರ ಸುಮಾರು ಒಂದು ಡಜನ್ ಜಲ ಸ್ಫೋಟಕಗಳನ್ನು ಹಾಕಿದೆ. ಸಿಆರ್‌ಎಸ್ ವರದಿಯು ಇದನ್ನು ಒಪ್ಪಿಕೊಂಡಿದ್ದು, ಇತ್ತೀಚಿನ ಅಮೆರಿಕ ಮತ್ತು ಇಸ್ರೇಲಿ ಮಿಲಿಟರಿ ಕಾರ್ಯಾಚರಣೆಗಳ ನಂತರ ಜಲಸಂಧಿಯಲ್ಲಿ ಸ್ಫೋಟಕ ಅಳವಡಿಸುವ ಅಥವಾ "ಮುಚ್ಚುವ" ಇರಾನ್‌ನ ಸಾಮರ್ಥ್ಯ ಸೀಮಿತವಾಗಿರಬಹುದು ಎಂದು ಹೇಳಿದೆ.

ಆದಾಗ್ಯೂ, ಸಿಎನ್‌ಎನ್ ವರದಿಯ ಪ್ರಕಾರ, ದೇಶವು ಇನ್ನೂ ತನ್ನ ೮೦-೯೦% ಸಣ್ಣ ದೋಣಿಗಳು ಮತ್ತು ಸ್ಫೋಟಕ ಅಳವಡಿರುವ ಸಾಮರ್ಥ್ಯವನ್ನು ಉಳಿಸಿಕೊಂಡಿದೆ. ಇದಲ್ಲದೆ, ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (ಐಆರ್‌ಜಿಸಿ) ಸ್ಫೋಟಕಗಳು ಮತ್ತು ಸಮುದ್ರ ತೀರ-ಆಧಾರಿತ ಬ್ಯಾಟರಿ ಚಾಲಿತ ಕ್ಷಿಪಣಿ ತುಂಬಿದ 'ಆತ್ಮಹತ್ಯಾ' ದೋಣಿಗಳ ಬಳಕೆಯ ಜೊತೆಗೆ ಸ್ಫೋಟಕಗಳನ್ನು ನಿಯೋಜಿಸುವ ಸಾಮರ್ಥ್ಯವನ್ನು ಹೊಂದಿದೆ. ೨೦೧೯ ರ ರಕ್ಷಣಾ ಗುಪ್ತಚರ ಸಂಸ್ಥೆಯ ವರದಿಯಲ್ಲಿ ಇದನ್ನು ಗಮನಿಸಲಾಗಿದೆ, ಐಆರ್‌ಜಿಸಿ ಸ್ಫೋಟಕ ಅಳವಡಿಕೆಗಾಗಿ ಸಣ್ಣ, ವೇಗವಾದ ಹಡಗುಗಳನ್ನು ಬಳಸುವ ಯೋಜನೆ ಮಾಡಿಕೊಂಡಿದ್ದು ಸಣ್ಣ ದೋಣಿಗಳನ್ನು ಸಜ್ಜುಗೊಳಿಸಿದೆ ಎಂದು ಮೂಲಗಳು ತಿಳಿಸಿವೆ.

೨೦೦೯ ರಲ್ಲಿ ವರ್ಗೀಕರಿಸಲಾದ ೧೯೮೪ ರ ಸಿಐಎ ದಾಖಲೆಯ ಪ್ರಕಾರ, ಹಾರ್ಮುಜ್ ಜಲಸಂಧಿಯ ಹೆಚ್ಚಿನ ಭಾಗವು ೪೫ ಮೀಟರ್‌ಗಳಿಗಿಂತ ಹೆಚ್ಚು ಆಳವನ್ನು ಹೊಂದಿದೆ, ಇದು ಲಂಗರು ಹಾಕಲಾದ ಮತ್ತು ಕೆಳಭಾಗದ ಗಣಿಗಳಿಗೆ ಸೂಕ್ತವಾಗಿದೆ. ಪರ್ಷಿಯನ್ ಕೊಲ್ಲಿ ಸುಮಾರು ೧,೦೦೦ ಕಿಮೀ ಉದ್ದ ಮತ್ತು ಅದರ ಅಗಲದಲ್ಲಿ ೩೩೦ ಕಿಮೀ ಇದೆ, ಆದರೆ ೧೦೦ ಮೀಟರ್‌ಗಿಂತ ಹೆಚ್ಚು ಆಳವನ್ನು ಹೊಂದಿಲ್ಲ. ಈ ದಾಖಲೆಯು ಗಲ್ಫ್ನ ಉತ್ತರಕ್ಕೆ, ಕುವೈತ್ ಮತ್ತು ಸೌದಿ ಅರೇಬಿಯನ್ ಬಂದರುಗಳ ಬಳಿ, ೨೦ ಮೀಟರ್‌ಗಿಂತ ಕಡಿಮೆ ಆಳವಿರುವ ಪ್ರದೇಶಗಳಲ್ಲಿ ನೇವಲ್ ಮೈನ್ಸ್ ಅಳವಡಿಸಬಹುದಾಗಿದೆ.