ವೀರಾಜಪೇಟೆ, ಮಾ. ೧೫: ಕ್ರೀಡೆಯು ನಮ್ಮ ನಡುವೆ ಸಾಮರಸ್ಯವನ್ನು ಬೆಳೆಸಲು ಸಹಕಾರಿಯಾಗಿದೆ. ಕ್ರೀಡೆ ಕೇವಲ ಆರೋಗ್ಯದ ದೃಷ್ಟಿಯಿಂದ ಮಾತ್ರವಲ್ಲ ನಮ್ಮ ನಡುವೆ ಪರಸ್ಪರ ಉತ್ತಮ ಸಂಬAಧ ಬೆಳೆಸುವುದರೊಂದಿಗೆ ನಮ್ಮಲ್ಲಿ ಸಾಮರಸ್ಯ ಮೂಡಿಸುತ್ತದೆ ಎಂದು ವೀರಾಜಪೇಟೆ ಕಾವೇರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ಪದ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ವೀರಾಜಪೇಟೆ ಕಾವೇರಿ ಕಾಲೇಜಿನ ವತಿಯಿಂದ ಕಾಲೇಜಿನ ಮೈದಾನದಲ್ಲಿ ಕಾವೇರಿ ಎಜುಕೇಶನ್ ಸೊಸೈಟಿ ಅಧೀನ ಸಂಸ್ಥೆಗಳ ಸಿಬ್ಬಂದಿ ವರ್ಗದ ನಡುವೆ ಆಯೋಜಿಸಲಾಗಿದ್ದ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಉತ್ತಮಪಡಿಸಿಕೊಳ್ಳಲು ಕ್ರೀಡೆಯು ಸಹಕಾರಿಯಾಗಿದೆ. ಕ್ರೀಡೆ ನಮ್ಮನ್ನೆಲ್ಲಾ ಒಂದೆಡೆ ಸೇರಿಸುವುದರಿಂದ ನಮ್ಮ ನಡುವೆ ಪರಸ್ಪರ ಪರಿಚಯ, ಸಹಕಾರ, ಸಾಮರಸ್ಯದಂತಹ ವಿಷಯಗಳು ಬೆಳೆಸಲು ಬಹಳ ಸಹಕಾರಿಯಾಗುತ್ತದೆ ಎಂದರು.

ಪುರುಷರ ಕ್ರಿಕೆಟ್ ಪಂದ್ಯಾಟದಲ್ಲಿ ಕಾವೇರಿಯನ್ ವಾರಿಯರ್ಸ್ ತಂಡ ಪ್ರಥಮ ಸ್ಥಾನಗಳಿಸಿತ್ತು. ಕಾವೇರಿಯನ್ ವಿದ್ಯಾ ಸ್ಟೆçöÊಕರ್ಸ್ ತಂಡ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿತ್ತು. ಪಂದ್ಯಾಟದ ಬೆಸ್ಟ್ ಕೀಪರ್ ಸೋಮನಾಥ್, ಬೆಸ್ಟ್ ಬ್ಯಾಟ್ಸ್ ಮ್ಯಾನ್ ನವನೀಶ್, ಬೆಸ್ಟ್ ಬೌಲರ್ ಸುಬ್ರಮಣಿ, ಬೆಸ್ಟ್ ಫೀಲ್ಡರ್ ಮಾರಣ್ಣ, ಮ್ಯಾನ್ ಆಫ್ ದಿ ಸೀರಿಸ್ ಪ್ರಶಸ್ತಿಯನ್ನು ಪೆಮ್ಮಯ್ಯ ಪಡೆದುಕೊಂಡರು. ಪುರುಷರ ಹಗ್ಗಜಗ್ಗಾಟದಲ್ಲಿ ಕಾವೇರಿಯನ್ ಟೈಗರ್ ತಂಡ ಪ್ರಥಮ ಸ್ಥಾನವನ್ನು ಪಡೆಯಿತು. ಕಾವೇರಿಯನ್ ವಾರಿಯರ್ಸ್ ತಂಡ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿತು. ಮಹಿಳೆಯರ ಥ್ರೋಬಾಲ್ ಪಂದ್ಯಾಟದಲ್ಲಿ ಗೋಣಿಕೊಪ್ಪ ಕಾವೇರಿ ಕಾಲೇಜಿನ ರೆಡ್ ತಂಡ ಪ್ರಥಮ ಸ್ಥಾನ ಪಡೆಯಿತು. ವೀರಾಜಪೇಟೆ ಕಾವೇರಿ ಕಾಲೇಜಿನ ವೈಟ್ ತಂಡ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿತು. ಬೆಸ್ಟ್ ಕ್ಯಾಚರ್ ಲತಾ, ಬೆಸ್ಟ್ ಸರ್ವರ್ ಸೀಮಾ, ಪ್ಲೇಯರ್ ಆಫ್ ದ ಟೂರ್ನಮೆಂಟ್ ಪ್ರಶಸ್ತಿಯನ್ನು ಲೇಪಾಕ್ಷಿ ಪಡೆದುಕೊಂಡರು.

ಮಹಿಳೆಯರ ಹಗ್ಗಜಗ್ಗಾಟ ವಿಭಾಗದಲ್ಲಿ ಗೋಣಿಕೊಪ್ಪ ಕಾವೇರಿ ಕಾಲೇಜಿನ ವೈಟ್ ತಂಡ ಪ್ರಥಮ ಸ್ಥಾನವನ್ನು ಪಡೆಯಿತು. ವೀರಾಜಪೇಟೆ ಕಾವೇರಿ ಕಾಲೇಜಿನ ಬ್ಲಾಕ್ ತಂಡ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿತು.

ಬಹುಮಾನ ವಿತರಣಾ ಸಮಾರಂಭದಲ್ಲಿ ಪ್ರಾಂಶುಪಾಲರಾದ ಬೆನೆಡಿಕ್ಟ್ ಆರ್ ಸಲ್ಡಾನ, ಕಾಲೇಜಿನ ಅಧೀಕ್ಷಕ ಜಗದೀಶ್ ಉಪಸ್ಥಿತರಿದ್ದರು.