ಸುಂಟಿಕೊಪ್ಪ, ಮಾ. ೧೫: ಗದ್ದೆಹಳ್ಳದಲ್ಲಿ ನೆಲೆಗೊಂಡಿರುವ ಕೊಂಡಗAಲ್ಲೂರ್ ಶ್ರೀ ಕುರುಂಭ (ಭಗವತಿ) ಭದ್ರಕಾಳಿ ದೇವಸ್ಥಾನದ ವಾರ್ಷಿಕ ಮಹಾಪೂಜೆಯನ್ನು ತಾ. ೧೮ ಮತ್ತು ೧೯ ರಂದು ವಿವಿಧ ಧಾರ್ಮಿಕ ವಿಧಿವಿಧಾನಗಳೊಂದಿಗೆ ಆಚರಿಸಲಾಗುವುದೆಂದು ದೇವಾಲಯದ ಮುಖ್ಯಸ್ಥರಾದ ಪಿ.ಆರ್. ಶಾಂತ ರಾಮಕೃಷ್ಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ತಾ. ೧೮ ರಂದು ಪೂರ್ವಾಹ್ನ ೬ ಗಂಟೆಗೆ ಗಣಪತಿ ಹೋಮ ನಡೆಯಲಿದ್ದು, ಸಂಜೆ ೪ ಗಂಟೆಗೆ ಶ್ರೀ ಮುತ್ತಪ್ಪ ದೇವರ ಮಲೆ ಇಳಿಸುವುದು, ಶ್ರೀ ಗಣಪತಿ ಮತ್ತು ಸುಬ್ರಹ್ಮಣ್ಯ ಸ್ವಾಮಿ ದೇವರ ಪೂಜೆ, ಮುತ್ತಪ್ಪ ದೇವರ ವೆಳ್ಳಾಟ ಮತ್ತು ಪೈಂಗುತ್ತಿ, ೭.೩೦ ಗಂಟೆಗೆ ಶ್ರೀ ಚಾಮುಂಡೇಶ್ವರಿ ದೇವಿ ಪೂಜೆ, ಗುಳಿಗನ ಪೂಜೆ, ೮.೧೫ ಗಂಟೆಗೆ ಶ್ರೀ ಭದ್ರಕಾಳಿ ದೇವಿಗೆ ಆರ್ಚನೆ, ನೈವೇದÀ್ಯ ಪೂಜೆ, ೮.೪೫ ಗಂಟೆಗೆ ಶ್ರೀ ದೇವಿ ದರ್ಶನ, ೯ ಗಂಟೆಗೆ ತಲಪುರಿ ಮೆರವಣಿಗೆ, ೯.೩೦ ಗಂಟೆಗೆ ವಸೂರಿ ಮಾಲೆ ದೇವರ ವೆಳ್ಳಾಟಂ, ೯.೪೫ ಗಂಟೆಗೆ ದೇವಿ ದರ್ಶನ ನಂತರ ಮಂಗಳಾರತಿ, ಪ್ರಸಾದ ವಿನಿಯೋಗ ನಡೆಯಲಿದೆ. ತಾ. ೧೯ ರಂದು ಬೆಳಿಗ್ಗೆ ೯ ಗಂಟೆಗೆ ದೇವಿಗೆ ಹರಕೆ ೧೦ ರಿಂದ ೧೦.೪೫ ರವರೆಗೆ ದೇವಿಗೆ ಆರ್ಪಣೆ ನಡೆಯಲಿದೆ ಎಂದು ಪಿ.ಆರ್. ಶಾಂತ ತಿಳಿಸಿದ್ದಾರೆ.