ಕೂಡಿಗೆ, ಮಾ ೧೫: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆಗ್ಗಡಳ್ಳಿ ಗ್ರಾಮದಲ್ಲಿರುವ ರಾಜರ ಅಳ್ವಿಕೆಯ ಕಾಲದ ೬. ಎಕರೆಗಳಷ್ಟು ಪ್ರದೇಶವು ಕಳೆದ ೮೦. ವರ್ಷಗಳಿಂದಲೂ ಕೂಡಿಗೆ ಗ್ರಾಮದ ದೇವಾಲಯ ಸಮಿತಿ ಸ್ವಾಧೀನದಲ್ಲಿದ್ದು ಅದರ ಒತ್ತುವರಿಯಾಗದಂತೆ ಶ್ರೀ ಬಸವೇಶ್ವರ ದೇವಾಲಯ ಸಮಿತಿ, ಕಂದಾಯ ಇಲಾಖೆ ಮುಖೇನ ಸರ್ವೆ ಕಾರ್ಯ ನಡೆಯಿತು.ಗ್ರಾಮದ ಸರ್ವೆ ನಂಬರ್ ೬೧/೨. ರಲ್ಲಿ ೬. ಎಕರೆಗಳಷ್ಟು ಪ್ರದೇಶವು ಇರುವುದರಿಂದ ಅದರ ಕ್ರಮಬದ್ಧವಾದ ಸರ್ವೆ ನಡೆಸಿ ಭೂಮಿ ಹದ್ದುಬಸ್ತುಯನ್ನು ದೇವಾಲಯ ಸಮಿತಿಗೆ ವಹಿಸಿಕೊಂಡು ಆ ಪ್ರದೇಶವನ್ನು ಅಭಿವೃದ್ಧಿ ಪಡಿಸಲು ಆಡಳಿತ ಮಂಡಳಿಯು ಮುಂದಾಗಿದೆ. ಈ ಸಂದರ್ಭದಲ್ಲಿ ಶ್ರೀ ಬಸವೇಶ್ವರ ದೇವಾಲಯ ಸಮಿತಿ ಅಧ್ಯಕ್ಷ ಕೆ.ಎಸ್. ಚಂದ್ರಶೇಖರ್, ( ಶ್ರೀನಿವಾಸ್) ಉಪಾಧ್ಯಕ್ಷ ಪ್ರಕಾಶ್, ಕಾರ್ಯದರ್ಶಿ ಕೆ.ಟಿ. ವೆಂಕಟೇಶ್, ಮಾಜಿ ಅಧ್ಯಕ್ಷ ಕೆ.ಪಿ. ಸೋಮಣ್ಣ, ಸಮಿತಿ ನಿರ್ದೇಶಕರುಗಳಾದ ಸೋಮಶೇಖರ್, ರಂಗ(ಮಲೇಶ್) ಪ್ರಸನ್ನ ಸೇರಿದಂತೆ ಗ್ರಾಮಸ್ಥರು ಸರ್ವೆ ಇಲಾಖೆಯ ಅಧಿಕಾರಿ ವರ್ಗದವರು ಇದ್ದರು.