ನಾಪೋಕ್ಲು, ಮಾ. ೧೫: ನೆಟ್ಟುಮಾಡು ಶ್ರೀ ಭಗವತಿ ಮಹಿಷ ಮರ್ದಿನಿ ದೇವಾಲಯದ ಸಾರ್ವಜನಿಕ ಅನ್ನ ಛತ್ರ ಹಾಗೂ ಸಮುದಾಯ ಭವನದ ಪುನರ್ ನಿರ್ಮಾಣಕ್ಕೆ, ಮುಜರಾಯಿ ಸಚಿವರಾದ ರಾಮಲಿಂಗ ರೆಡ್ಡಿ ರವರಿಗೆ ಮನವಿ ಸಲ್ಲಿಸಲಾಯಿತು.

ಕಕ್ಕಬೆ-ಕುಂಜಿಲ ಗ್ರಾಮದ ಯವಕಪಾಡಿಯಲ್ಲಿರುವ ಐತಿಹಾಸಿಕ ನೆಟ್ಟುಮಾಡು ಶ್ರೀ ಭಗವತಿ ಮಹಿಷ ಮರ್ದಿನಿ ದೇವಾಲಯದ ಸಾರ್ವಜನಿಕ ಅನ್ನ ಛತ್ರ ಹಾಗೂ ಸಮುದಾಯ ಭವನದ ಪುನರ್ ನಿರ್ಮಾಣಕ್ಕೆ, ಸಾರಿಗೆ ಹಾಗೂ ಮುಜರಾಯಿ ಸಚಿವರಾದ ರಾಮಲಿಂಗ ರೆಡ್ಡಿ ರವರಿಗೆ ಬೆಂಗಳೂರಿನ ಅವರ ಕಚೇರಿಯಲ್ಲಿ ಮನವಿ ಸಲ್ಲಿಸಲಾಯಿತು.

ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ ಎಸ್ ಪೊನ್ನಣ್ಣರವರ ನೇತೃತ್ವದಲ್ಲಿ, ಕೇಟೋಳಿರ ಸನ್ನಿ ಸೋಮಣ್ಣ, ಅಪ್ಪಾರಂಡ ವೇಣು, ಸಂಪನ್ ಅಯ್ಯಪ್ಪ ಉಪಸ್ಥಿತರಿದ್ದರು.