ಮಡಿಕೇರಿ, ಮಾ.೧೩: ದಕ್ಷಿಣ ಕನ್ನಡದ ಬಂಟ್ವಾಳ ತಾಲೂಕಿನ ಮಾಣಿ ಗ್ರಾಮದಿಂದ ಕೊಡಗು - ದಕ್ಷಿಣ ಕನ್ನಡ ಗಡಿಯ ಸಂಪಾಜೆವರೆಗಿನ ರಸ್ತೆಯನ್ನು ಚತುಷ್ಪಥ ಮಾಡುವ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯುತ್ತಿದ್ದು, ಎನ್.ಎಚ್-೨೭೫ನ ಭಾಗವಾಗಿರುವ ಈ ಮಾರ್ಗದ ನಿರ್ವಹಣೆಯನ್ನು ರಾಷ್ಟಿçÃಯ ಹೆದ್ದಾರಿ ಪ್ರಾಧಿಕಾರ ಈಗಾಗಲೇ ವಹಿಸಿಕೊಂಡಿದೆ. ರಸ್ತೆ ಶೀಘ್ರವಾಗಿ ಅಭಿವೃದ್ಧಿಪಡಿಸುವಂತೆ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರಲ್ಲಿ ಮನವಿ ಮಾಡಿದ್ದಾರೆ. ಇದಕ್ಕೆ ಸಚಿವರಿಂದ ಸಕಾರಾತ್ಮಕ ಸ್ಪಂದನ ದೊರಕಿರುವುದಾಗಿ ಸಂಸದರು ‘ಶಕ್ತಿ‘ಗೆ ಮಾಹಿತಿ ನೀಡಿದ್ದಾರೆ.

ರಾಜ್ಯ ಲೋಕೋಪಯೋಗಿ ಇಲಾಖೆಯು ಈ ಹಿಂದೆಯೇ ಮಾಣಿಯಿಂದ ಸಂಪಾಜೆವರೆಗಿನ ರಸ್ತೆಯ ಅಭಿವೃದ್ಧಿ ಸಂಬAಧ ರೋಡ್ ರೀ-ಅಲೈನ್‌ಮೆಂಟ್ ಡಿ.ಪಿ.ಆರ್(ಡೀಟೇಲ್ಡ್ ಪ್ರಾಜೆಕ್ಟ್ ರಿಪೋರ್ಟ್) ಸರ್ವೆ ನಡೆಸಿದ್ದು, ಇದೀಗ ಈ ರಸ್ತೆಯ ನಿರ್ವಹಣಾ ಜವಾಬ್ದಾರಿಯನ್ನು ರಾಷ್ಟಿçÃಯ ಹೆದ್ದಾರಿ ಪ್ರಾಧಿಕಾರ ವಹಿಸಿಕೊಂಡಿದೆ. ರಸ್ತೆಯನ್ನು ಚತುಷ್ಪಥ ಮಾಡಲು ಇದೇ ಸರ್ವೆ ಬಳಸುವ ಅಥವಾ ಹೊಸದಾಗಿ ಪ್ರಾಧಿಕಾರದಿಂದಲೂ ಸರ್ವೆ ಮಾಡುವ ಸಾಧ್ಯತೆಗಳಿವೆ. ಬಳಿಕ ಟೆಂಡರ್ ಪ್ರಕ್ರಿಯೆ ನಡೆದು ಒಟ್ಟು ೭೧.೬ ಕಿ.ಮೀ ಮಾರ್ಗವನ್ನು ಚತುಷ್ಪಥ ಮಾಡುವ ಯೋಜನೆ ಪ್ರಾರಂಭವಾಗುವ ನಿರೀಕ್ಷೆಯಿದೆ.

೨೦೨೫ರ ಡಿಸೆಂಬರ್ ತಿಂಗಳಿನಲ್ಲಿ ಕರ್ನಾಟಕ, ಕೇರಳ ಹಾಗೂ ತಮಿಳುನಾಡಿನಲ್ಲಿರುವ ಹಲವು ರಾಷ್ಟಿçÃಯ ಹೆದ್ದಾರಿಗಳನ್ನು ಸಂಪೂರ್ಣವಾಗಿ ರಾಷ್ಟಿçÃಯ ಹೆದ್ದಾರಿ ಪ್ರಾಧಿಕಾರದ ಸುರ್ಪದಿಗೆ ಬಿಟ್ಟುಕೊಟ್ಟು ಅಭಿವೃದ್ಧಿ, ನಿರ್ವಹಣೆ ಜವಾಬ್ದಾರಿಗೆ ವಹಿಸಿಕೊಡುವಂತೆ ಕೇಂದ್ರ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯವು ಪತ್ರದ ಮೂಲಕ ೩ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಸೂಚಿಸಿತ್ತು. ಇದರನ್ವಯ ೩ ರಾಜ್ಯಗಳ ಒಟ್ಟು ೨೦ ರಾಷ್ಟಿçÃಯ ಹೆದ್ದಾರಿ ಮಾರ್ಗಗಳನ್ನು ರಾಷ್ಟಿçÃಯ ಹೆದ್ದಾರಿ ಪ್ರಾಧಿಕಾರವು ತನ್ನ ಸುರ್ಪದಿಗೆ ಈ ವರ್ಷದಾರಂಭದಲ್ಲಿಯೇ ಪಡೆದುಕೊಂಡಿದೆ. ಎನ್.ಎಚ್-೨೭೫ನ ಭಾಗವಾಗಿರುವ ಮಾಣಿ-ಸಂಪಾಜೆ ರಸ್ತೆಯೂ ಇದರ ಭಾಗವಾಗಿದೆ.

ಎನ್.ಎಚ್-೨೭೫, ಬೆಂಗಳೂರಿನಿAದ ಮಂಗಳೂರಿಗೆ, ರಾಮನಗರ-ಬಿಡದಿ-ಮದ್ದೂರು-ಮಂಡ್ಯ ೪ನಾಲ್ಕನೇ ಪುಟಕ್ಕೆ

(ಮೊದಲ ಪುಟದಿಂದ) -ಮೈಸೂರು-ಹುಣಸೂರು-ಕುಶಾಲನಗರ-ಮಡಿಕೇರಿ-ಸಂಪಾಜೆ-ಸುಳ್ಯ-ಪುತ್ತೂರು-ಮಾಣಿ-ಬಿ.ಸಿರೋಡ್ ಮೂಲಕ ೩೬೭ ಕಿ.ಮೀ ನಷ್ಟು ವಿಸ್ತಾರವಾಗಿದೆ. ಈಗಾಗಲೇ ಮೈಸೂರು-ಬೆಂಗಳೂರು ಎಕ್ಸ್ಪ್ರೆಸ್‌ವೇ ಚಾಲ್ತಿಯಲ್ಲಿದ್ದು, ೧೧೯ಕಿ.ಮೀ ದಾರಿ ದಶಪಥವಾಗಿದೆ. ಮೈಸೂರಿನಿಂದ ಕುಶಾಲನಗರವರೆಗಿನ ೯೨ಕಿ.ಮೀ ಮಾರ್ಗವನ್ನು ಚತುಷ್ಪಥ ಮಾಡುವ ಕಾಮಗಾರಿ ಭರದಿಂದ ಸಾಗುತ್ತಿದ್ದು, ೨೦೨೭ರವರೆÀಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಇದೀಗ ಮಾಣಿ-ಸಂಪಾಜೆ ರಸ್ತೆ ಅಭಿವೃದ್ಧಿ ಆದಲ್ಲಿ ಎನ್.ಎಚ್-೨೭೫ ಮೂಲಕ ಚಾಲನಾ ಸಮಯ ಬಹಳಷ್ಟು ಕಡಿತವಾಗಲಿದ್ದು, ಕೈಗಾರಿಕೆ, ಪ್ರವಾಸೋದ್ಯಮ ಹಾಗೂ ಇತರ ಉದ್ಯಮಗಳಿಗೂ ಸಹಕಾರಿಯಾಗಲಿದೆ ಎಂದು ತಜ್ಞರು ‘ಶಕ್ತಿ‘ಯೊಂದಿಗೆ ತಮ್ಮ ಅಭಿಪ್ರಾಯ ಹಂಚಿಕೊAಡಿದ್ದಾರೆ. ಮಾಣಿ-ಸಂಪಾಜೆ ರಸ್ತೆ ಚತುಷ್ಪಥವಾದಲ್ಲಿ ಮಾಣಿಯಿಂದ ಸಂಪಾಜೆವರೆಗಿನ ಪ್ರಯಾಣ ಸಮಯ ೪೦ ನಿಮಿಷಗಳಷ್ಟೆ ಆಗುವ ಸಾಧ್ಯತೆಗಳಿವೆ. ಸಂಪಾಜೆಯಿAದ ಮಡಿಕೇರಿಗೆ ೩೦ ನಿಮಿಷ ಪ್ರಯಾಣ ಸಮಯವಿದ್ದು, ಬಿ.ಸಿ ರೋಡ್‌ನಿಂದ ಕುಶಾಲನಗರವರೆಗಿನ ಪ್ರಯಾಣ ಸಮಯ ೨ ಗಂಟೆಗಳೊಳಗೆ ಆಗಬಹುದೆಂದು ತಜ್ಞರು ಅಭಿಪ್ರಾಯಿಸಿದ್ದಾರೆ.

ಕುಶಾಲನಗರದಿಂದ ಮಂಗಳೂರು ಬಂದರಿಗೆ ಶೇಕಡಾ ೯೦ರಷ್ಟು ಕಾಫಿ ರಸ್ತೆ ಮೂಲಕ ಬರುತ್ತಿದ್ದು, ರಸ್ತೆ ಅಗಲೀಕರಣದಿಂದ ಕಾಫಿ ಉದ್ಯಮಕ್ಕೂ ಲಾಭವಾಗಲಿದೆ ಎಂದು ಮಂಗಳೂರು ನವಬಂದರು ಸಂಸ್ಥೆಯ ನಿವೃತ್ತ ಅಧಿಕಾರಿ ನವನೀತ್ ಹರ್ಷ ವ್ಯಕ್ತಪಡಿಸಿದ್ದಾರೆ.