ಐಗೂರು, ಮಾ. ೧೩: ಕೊಡಗು ಜಿಲ್ಲೆಯಲ್ಲಿರುವ ತೀಯನ್ ಸಮುದಾಯ ಬಾಂಧವರನ್ನು ಒಂದೇ ವೇದಿಕೆಯಡಿ ಒಗ್ಗೂಡಿಸುವುದು ತೀಯನ್ ಮಹಾಸಭಾದ ಮುಖ್ಯ ಗುರಿಯಾಗಿದೆ ಎಂದು ತೀಯನ್ ಮಹಾಸಭಾದ ಜಿಲ್ಲಾ ಉಪಾಧ್ಯಕ್ಷ ಅಶೋಕ್ ಕುಮಾರ್ ಹೇಳಿದರು.

ಸೋಮವಾರಪೇಟೆ ಕ್ಲಬ್ ರಸ್ತೆಯ ಕೊಡವ ಸಮಾಜದ ಪಕ್ಕದ ಕಟ್ಟಡದಲ್ಲಿ, ತೀಯನ್ ಮಹಾಸಭಾದ ನೂತನ ಕಚೇರಿಯನ್ನು ಉದ್ಘಾಟಿಸಿದ ಅವರು ಮಾತನಾಡಿದರು. ಸಮುದಾಯ ಬಾಂಧವರು ಸಂಘದ ಸದಸ್ಯತ್ವವನ್ನು ಪಡೆಯುವ ಮುಖಾಂತರ ಅಭಿವೃದ್ಧಿಗಾಗಿ ಪರಸ್ಪರ ಕೈಜೋಡಿಸಿ ಮುಂದೆ ಬರಬೇಕಾಗಿದೆ ಎಂದ ಅವರು ಸಮುದಾಯದೊಳಗೆ ಸಂಕಷ್ಟದಲ್ಲಿರುವ ಕುಟುಂಬಗಳು ಹಾಗೂ ವಿದ್ಯಾರ್ಥಿಗಳಿಗೆ ಮಹಾಸಭಾ ಸದಾ ಬೆನ್ನೆಲುಬಾಗಿ ನಿಂತು ಸಹಕಾರ ನೀಡಲಿದೆ. ಪ್ರತಿ ತಿಂಗಳ ಕೊನೆಯ ಭಾನುವಾರದಂದು ಕಛೇರಿಯಲ್ಲಿ ಮಾಸಿಕ ಸಭೆ ನಡೆಯಲಿದೆ. ಪರಸಿನಿ ಕಡವು ಮುತ್ತಪ್ಪ ದೇವರ ಮತ್ತು ಶ್ರೀ ನಾರಾಯಣ ಗುರುಗಳ ಆಶೀರ್ವಾದವು ಸಂಘಟನೆಗೆ ಬಲ ತುಂಬಲಿದೆ ಎಂದರು.

ಪ್ರಾರAಭದಲ್ಲಿ ಮುತ್ತಪ್ಪ ದೇವರ ಪಯಂಗುತ್ತಿ ಪೂಜೆ, ನಾರಾಯಣ ಗುರುಗಳ ಭಾವಚಿತ್ರಕ್ಕೆ ಮಾಲಾರ್ಪಣೆ ನಡೆದು ಪ್ರಸಾದ ವಿನಿಯೋಗ ನಡೆಯಿತು. ಕಾರ್ಯಕ್ರಮದಲ್ಲಿ ಮಹಾಸಭಾದ ಗೌರವಾಧ್ಯಕ್ಷ ಟಿ.ಕೆ ಸುಧೀರ್, ಕಾರ್ಯದರ್ಶಿ ಜ್ಯೋತಿ ಅರುಣ್, ಸಂಘಟನಾ ಕಾರ್ಯದರ್ಶಿ ಎನ್.ಸಿ. ಸುದರ್ಶನ್, ಖಜಾಂಚಿ ಎಂ.ಕೆ. ಮೋಹನ್, ನಿರ್ದೇಶಕರಾದ ಎನ್.ಸಿ. ಸುನಿಲ್, ಸಜಿ ಭರತ್, ಪ್ರವೀಣ್ ಮತ್ತು ಐಗೂರು ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಕೆ.ಎಂ. ಗೋಪಾಲಕೃಷ್ಣ ಉಪಸ್ಥಿತರಿದ್ದರು.