ಕೂಡಿಗೆ, ಮಾ. ೧೩: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕತ್ತೂರಿನ ಶ್ರೀ ವಿನಾಯಕ ಯುವಕ ಸಂಘದ ವತಿಯಿಂದ ಮುಖ್ಯ ರಸ್ತೆ ಬದಿ ಅಳವಡಿಸಿರುವ ಮೂರು ಸಿಸಿ ಕ್ಯಾಮರಾಗಳನ್ನು ಕೂಡುಮಂಗಳೂರು ಗ್ರಾಮ ಪಂಚಾಯಿತಿಗೆ ಹಸ್ತಾಂತರ ಮಾಡಲಾಯಿತು.
ಯುವಕ ಸಂಘದ ಅಧ್ಯಕ್ಷ ಸಿ.ಸಿ ಸ್ವಾಮಿ ನೇತೃತ್ವದಲ್ಲಿ ಸಂಘದ ಪದಾಧಿಕಾರಿಗಳು ಕೂಡುಮಂಗಳೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸಂತೋಷ್ ಅವರಿಗೆ ಸಿಸಿ ಕ್ಯಾಮರಾ ಹಸ್ತಾಂತರಿಸಿದರು. ಕುಶಾಲನಗರದಿಂದ ಹಾರಂಗಿಗೆ ತೆರಳುವ ಮಾರ್ಗದಲ್ಲಿ ಪ್ರವಾಸಿಗರಿಂದ ಹಾಗೂ ಸ್ಥಳೀಯರಿಂದ ಅನೈರ್ಮಲ್ಯ ಉಂಟಾಗಬಾರದು. ಅದರಂತೆ ಅಕ್ರಮ ಚಟುವಟಿಕೆಗಳ ಬಗ್ಗೆ ಕಣ್ಗಾವಲು ಮಾಡುವ ಉದ್ದೇಶದಿಂದ ಸಿಸಿ ಕ್ಯಾಮೆರಗಳನ್ನು ಅಳವಡಿಸಲಾಗಿದೆ ಎಂದು ಸ್ವಾಮಿ ತಿಳಿಸಿದರು.
ಕೂಡುಮಂಗಳೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸಂತೋಷ್ ಮಾತನಾಡಿ, ವಿನಾಯಕ ಯುವಕ ಸಂಘದಿAದ ಹಲವು ರೀತಿಯ ಸಮಾಜಮುಖಿ ಚಟುವಟಿಕೆಗಳನ್ನು ಕೈಗೊಳ್ಳುತ್ತಿರುವುದು ಶ್ಲಾಘನೀಯ ವಿಚಾರ. ಈ ಸೇವಾ ಕಾರ್ಯ ಸದಾ ಮುಂದುವರೆಯಲಿ ಎಂದು ಆಶಿಸಿದರು. ಈ ಸಂದರ್ಭ ಗ್ರಾಮ ಪಂಚಾಯಿತಿ ಮಾಜಿ ಸದಸ್ಯೆ ಖತೀಜಾ, ವಿನಾಯಕ ಯುವಕ ಸಂಘದ ಉಪಾಧ್ಯಕ್ಷ ಕೃಷ್ಣ ಸದಸ್ಯರಾದ ಶ್ರೀನಿವಾಸ್, ಕೃಷ್ಣಕಾಂತ್, ಮೋನೇಶ್, ಕೃಷ್ಣೇಗೌಡ, ಮಧುಚಂದ್ರ, ಸುನಿಲ್ ಕುಮಾರ್, ಗಣೇಶ್, ಶಶಿಧರ್, ಶಿವಕುಮಾರ್, ಗ್ರಾಮಸ್ಥರಾದ ಮೂಡ್ಲಿ, ಸಣ್ಣಪ್ಪ, ರಾಮೇಗೌಡ, ಶಿವಣ್ಣ, ನಾಗೇಂದ್ರ, ಮತ್ತಿತರರು ಇದ್ದರು.