ಮಡಿಕೇರಿ, ಮಾ. ೧೩: ಕುಂಜಿಲಗೇರಿ ಗ್ರಾಮದ ಕೋಣೇರಿಮಾಡ್ ಅಯ್ಯಪ್ಪ ದೇವಸ್ಥಾನದ ವಾರ್ಷಿಕ ಹಬ್ಬ ತಾ.೧೬ ಹಾಗೂ ೧೭ ರಂದು ನಡೆಯಲಿದೆ.

ತಾ.೧೬ ರಂದು ಎತ್ತು ಪೋರಾಟ, ದೇವರ ದರ್ಶನ ನಡೆಯಲಿದೆ. ತಾ.೧೭ ರಂದು ಕುರುಂದ ಕಳಿ, ತೆಂಗಿನಕಾಯಿಗೆ ಗುಂಡು ಹೊಡೆಯುವುದು ಹಾಗೂ ದೇವರಿಗೆ ಹರಕೆ ಒಪ್ಪಿಸುವುದು ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

ದೇವಸ್ಥಾನದ ಜೀರ್ಣೋದ್ಧಾರ ಮತ್ತು ಪುನಃ ಪ್ರತಿಷ್ಠಾ ಪೂಜಾ ಕಾರ್ಯಗಳು ತಂತ್ರಿಗಳಾದ ಪುಂಡರೀಕ ಅರಳಿತ್ತಾಯ ಅವರ ನೇತೃತ್ವದಲ್ಲಿ ಫೆ.೧೯ ಹಾಗೂ ೨೦ ರಂದು ನಡೆಯಿತು.