ಸಿದ್ದಾಪುರ, ಮಾ. ೧೩: ಇತಿಹಾಸ ಪ್ರಸಿದ್ಧ ಪ್ರಾಚೀನ ಕಾಲದ ಜಿಲ್ಲೆಯ ಏಕೈಕ ದೇವಾಲಯವಾಗಿರುವ ನೆಲ್ಯಹುದಿಕೇರಿ ಗ್ರಾಮದ ಶ್ರೀ ಸತ್ಯ ನಾರಾಯಣ ದೇವಾಲಯದ ವಾರ್ಷಿಕೋತ್ಸವ ವಿವಿಧ ಪೂಜಾ ಕಾರ್ಯಕ್ರಮಗಳೊಂದಿಗೆ ತಾ೧೯ರಿಂದ ೨೧ರವರೆಗೆ ನಡೆಯಲಿದೆ ಎಂದು ದೇವಾಲಯದ ಆಡಳಿತ ಮಂಡಳಿಯವರು ತಿಳಿಸಿದ್ದಾರೆ.

ತಾ ೧೯ರಂದು ಬೆಳಿಗ್ಗೆ ೬:೩೦ಕ್ಕೆ ಗಣಪತಿ ಹೋಮ ಉತ್ಸವ ಪ್ರಾರಂಭ, ೮: ೦೦ಕ್ಕೆ ರಂಗ ಪೂಜೆ, ದೇವರ ತೀರ್ಥ ಪ್ರಸಾದ, ಅನ್ನ ಸಂತರ್ಪಣೆ ನಡೆಯಲಿದೆ. ತಾ. ೨೦ ರಂದು ಬೆಳಿಗ್ಗೆ ೧೦.೩೦ ಕ್ಕೆ ಸಾಮೂಹಿಕ ಆಶ್ಲೇಷ ಬಲಿ ಪೂಜೆ, ಸಂಜೆ ೫ ಗಂಟೆಗೆ ಪೋದಮ್ಮ ದೇವಾಲಯದಲ್ಲಿ ಅಕ್ಕಿ ಹೇರುವುದು, ಹಾಗೂ ಮಹಾಪೂಜೆ, ಶ್ರೀ ಸತ್ಯನಾರಾಯಣ ದೇವಾಲಯದಲ್ಲಿ ನೆರಪು ಬಲಿ, ಮಹಾಪೂಜೆ ತೀರ್ಥ ಪ್ರಸಾದ ಅನ್ನಸಂತರ್ಪಣೆ ನಡೆಯಲಿದೆ. ತಾ೨೧ರಂದು ಬೆಳಿಗ್ಗೆ ೯.೩೦ಕ್ಕೆ ಸಾಮೂಹಿಕ ಸತ್ಯನಾರಾಯಣ ಪೂಜೆ, ತೀರ್ಥ ಪ್ರಸಾದ ಅನ್ನಸಂತರ್ಪಣೆ, ಸಂಜೆ ೪.೩೦ ಕ್ಕೆ, ಶ್ರೀ ಪೋದಮ್ಮ ದೇವಾಲಯದಲ್ಲಿ ವಸಂತ ಪೂಜೆ ಅವ ಅವಭೃತ ಸ್ನಾನ ಕ್ಕೆ ಹೊರಡುವುದು. ರಾತ್ರಿ ೭.೩೦ಕ್ಕೆ ಶ್ರೀ ಸತ್ಯನಾರಾಯಣ ದೇವಾಲಯದಲ್ಲಿ ಶ್ರೀ ದೇವರ ಆರಾಟ್ ಬಲಿ, ಬಟ್ಟಲು ಕಾಣಿಕೆ, ಮಹಾಪೂಜೆ ತೀರ್ಥ ಪ್ರಸಾದ, ಅನ್ನಸಂತರ್ಪಣೆ ನಡೆಯಲಿದೆ ಎಂದು ಆಡಳಿತ ಮಂಡಳಿಯವರು ತಿಳಿಸಿದ್ದಾರೆ.