ಕೂಡಿಗೆ, ಮಾ. ೧೩: ಜಿಲ್ಲೆಯ ಕುಶಾಲನಗರ ತಾಲ್ಲೂಕು, ಮತ್ತು ಸೋಮವಾರಪೇಟೆ ತಾಲೂಕಿನಲ್ಲಿ ಹೆಚ್ಚಾಗಿ ಮಳೆ ಮತ್ತು ಕೊಳವೆ ಬಾವಿಯ ನೀರನ್ನು ಅವಲಂಬಿಸಿ ಬೆಳೆಯಲಾದ ಸಿಹಿ ಗೆಣಸಿನ ಬೆಲೆ ಇದೀಗ ಬಾರಿ ಕುಸಿತಗೊಂಡು ರೈತರಿಗೆ ಕಹಿಯಾಗಿ ಪರಿಣಮಿಸುತ್ತಿದೆ.

ತಾಲೂಕು ರೈತರು ಕಡಿಮೆ ಖರ್ಚಿನಲ್ಲಿ ಮತ್ತು ಹೆಚ್ಚು ಕಾರ್ಮಿಕರ ಬಳಕೆ ಇಲ್ಲದೆ, ಕಡಿಮೆ ನೀರಿನ ಬಳಕೆಯನ್ನು ಮಾಡಿಕೊಂಡು ಬೇಸಾಯ ಮಾಡುವುದರಿಂದ ಸ್ವಲ್ಪ ಪ್ರಮಾಣದ ರೈತರಿಗೆ ಆದಾಯ ಬರುತ್ತಿತ್ತು, ಜೊತೆಯಲ್ಲಿ ಗೆಣಸು ಬೆಳೆಯ ಬಳ್ಳಿಯನ್ನು ಹಸುಗಳಿಗೆ ಮೇವಿಗಾಗಿ ಬಳಸಲಾಗುತ್ತಿದೆ, ಇದೀಗ ಈ ಸಾಲಿನಲ್ಲಿ ಸಿಹಿ ಗೆಣಸಿನ ಬೆಳೆಯಲ್ಲಿ ಬಾರಿ ಕುಸಿತ ಕಂಡು ರೈತರು ಆತಂಕಕ್ಕೆ ಒಳಗಾಗಿದ್ದಾರೆ.

ಕಳೆದ ೫. ತಿಂಗಳಿAದಲೂ ಸಿಹಿ ಗೆಣಸಿನ ಬೆಲೆಯು ಒಂದು ಕೆ.ಜಿ.ಗೆ ೧೪. ರಿಂದ ೧೫. ರೂ ರಂತೆ ಜಿಲ್ಲೆಯಿಂದ ಪಕ್ಕದ ರಾಜ್ಯಗಳಾದ ಕೇರಳ, ಮತ್ತು ಮಹಾರಾಷ್ಟ್ರಕ್ಕೆ ಸಾಗಾಟವಾಗುತ್ತಿತು. ಅದರೆ ಇದೀಗ ದಿಢೀರ್ ಆಗಿ ಕಳೆದ ಒಂದು ತಿಂಗಳುಗಳಿAದ ಬೆಲೆಯಲ್ಲಿ ಏರಿಳಿತಗಳು ಅಗುತ್ತಾ೧೦. ರೂ ಬಂದಿದ್ದ ಬೆಲೆ ಇದೀಗ ಕೇವಲ ರೂ. ೬ ಗಳಿಗೆ ಇಳಿದಿದೆ. ಇದರಿಂದಾಗಿ ಸಿಹಿ ಗೆಣಸು ಬೆಳೆದ ರೈತರು ಕಂಗಾಲಾಗಿದ್ದಾರೆ.

ಈಗಾಗಲೇ ಸಿಹಿ ಗೆಣಸು ಬಳ್ಳಿಯನ್ನು ನೆಟ್ಟು ಬೇಸಾಯ ಮಾಡಿ ೫. ತಿಂಗಳುಗಳು ಕಳೆದಿದೆ, ಬೆಳೆಯು ಉತ್ತಮವಾಗಿ ಬಂದಿದ್ದರೂ ಸಹ ಸಮರ್ಪಕವಾದ ಬೆಲೆ ಇಲ್ಲದೆ ಕಟಾವು ಮಾಡಲೇಬೇಕಾಗಿರುವುದರಿಂದಾಗಿ ವ್ಯಾಪ್ತಿಯ ರೈತರು ಕಡಿಮೆ ಬೆಲೆಯಾದರೂ ಸಹ ಕಟಾವು ಮಾಡಲು ಆರಂಭಿಸಿದ್ದಾರೆ.

ಸಿಹಿ ಗೆಣಸು ಬೆಳೆಯು ಸುಮಾರು ಐದೂವರೆ ತಿಂಗಳಿನ ಬೆಳೆಯಾಗಿದ್ದು, ೫. ತಿಂಗಳುಗಳು ಕಳೆದರೆ ಭೂಮಿಯಲ್ಲಿ ಗೆಣಸು ಗೆಡ್ಡೆಗೆ ಹುಳು ಹಿಡಿಯಲು ಆರಂಭವಾಗುವುದು, ರೈತರು ಈಗಾಗಲೇ ಕಡಿಮೆ ಬೆಲೆ ಆದರೂ ಸಹ ಕಟಾವು ಮಾಡುವಲ್ಲಿ ತೊಡಗಿದ್ದಾರೆ. ಸಿಹಿ ಗೆಣಸು ಬೆಳೆಗೆ ರಾಸಾಯನಿಕ ಔಷಧಿಗಳನ್ನು ಸಿಂಪಡಣೆ ಮಾಡಿದರೂ ಸಹ ಮೇಲ್ಭಾಗದಲ್ಲಿ ಹುಳಗಳ ಕಾಟ ಇಲ್ಲದ ಆಗೆ ಕಂಡು ಬಂದರೂ, ಮಣ್ಣಿನ ಒಳಗೆ ಇರುವ ಸಿಹಿ ಗೆಣಸು ಗೆಡ್ಡೆಗೆ ಹುಳಗಳ ಕಾಟ ಇರುವುದು ಕಂಡುಬರುವುದರಿAದಾಗಿ ಖರೀದಿದಾರರು ಹಿಂದೇಟು ಹಾಕುತ್ತಿದ್ದಾರೆ. ಇದರಿಂದಾಗಿ ಸಿಹಿ ಗೆಣಸು ಬೇಸಾಯ ಮಾಡಿದ ರೈತರಿಗೆ ಬಾರಿ ನಷ್ಟ ಉಂಟಾಗುತ್ತಿದೆ ಎಂದು ಈ ವ್ಯಾಪ್ತಿಯ ಪ್ರಗತಿ ಪರ ರೈತರಾದ ಸ್ವಾಮಿ, ರವಿ, ಅನಿಲ್, ಶಶಿಧರ್, ಜಯಮ್ಮ, ಶಿವಣ್ಣ. ರೈತ ಸಂಘದ ಅಧ್ಯಕ್ಷ ರಾಮು ಚಾಮೇಗೌಡ, ಸೇರಿದಂತೆ ಅನೇಕ ರೈತರು ತಮ್ಮ ಅಳಲನ್ನು ತೊಡಿಕೊಂಡಿದ್ದಾರೆ. - ಕೆ.ಕೆ. ನಾಗರಾಜಶೆಟ್ಟಿ