ಮಡಿಕೇರಿ, ಮಾ. ೧೩: ಮಡಿಕೇರಿಯ ಮಹದೇವಪೇಟೆ ಮಹಿಳಾ ಸಹಕಾರ ಸಂಘದಲ್ಲಿ ಮಹಿಳಾ ದಿನಾಚರಣೆಯನ್ನು ಸಂಘದ ಅಧ್ಯಕ್ಷೆ ಸವಿತಾ ಭಟ್ ಅವರ ಅಧ್ಯಕ್ಷತೆಯಲ್ಲಿ ಆಚರಿಸಲಾಯಿತು.

ಸಂಘದ ಅಧ್ಯಕ್ಷೆ ಸವಿತಾ ಭಟ್ ಮಹಿಳಾ ದಿನದ ಬಗ್ಗೆ ಮಾತನಾಡಿದರು. ಮಹಿಳೆ ಈಗ ಎಲ್ಲಾ ಕ್ಷೇತ್ರಗಳಲ್ಲೂ ಮುಂದಿದ್ದಾಳೆ. ನೆಮ್ಮದಿಯ ಜೀವನ ಮತ್ತು ಮನೆಯವರಿಂದ ತಾವು ಮಾಡುವ ಕೆಲಸಕ್ಕೆ ಪ್ರೋತ್ಸಾಹ. ಇಷ್ಟಿದ್ದರೆ ಮಹಿಳೆ ಏನು ಬೇಕಾದರೂ ಸಾಧಿಸಬಲ್ಲಳು ಎಂದು ಅವರು ಹೇಳಿದರು.

ಈ ಸಂದರ್ಭ ಬಾಳೆಯಡ ದಿವ್ಯಾ ಮಂದಪ್ಪ ಅವರನ್ನು ಅವರು ಮಾಡಿದ ಸಮಾಜ ಸೇವೆಗಾಗಿ ಸನ್ಮಾನಿಸಲಾಯಿತು. ದಿವ್ಯಾ ಅವರು ತಮ್ಮ ಸಾಧನೆಯ ಅನುಭವಗಳನ್ನು ಹಂಚಿಕೊAಡರು. ಸಂಘದ ಸದಸ್ಯೆಯರಿಗಾಗಿ ಅಡುಗೆ ಸ್ಪರ್ಧೆ, ಹೂ ಜೋಡಣೆ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ತೀರ್ಪುಗಾರರಾಗಿ ರಿಶಿಕಾ ಶ್ಯಾಮ್ ಮತ್ತು ಗಾಯತ್ರಿ ಸೋಮಯ್ಯ ಆಗಮಿಸಿದ್ದರು. ಹಾಡಿನ ಸ್ಪರ್ಧೆಯೂ ಏರ್ಪಾಡಾಗಿತ್ತು. ತೀರ್ಪುಗಾರರಾಗಿ ಲಕ್ಷೀ ಈಶ್ವರ ಭಟ್ ಮತ್ತು ರಕ್ಷಾ ಅವರು ಆಗಮಿಸಿದ್ದರು. ಮಧ್ಯಾಹ್ನದ ನಂತರ ಸಂಘದ ಸದಸ್ಯೆಯರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಕಾಯಕ್ರಮಗಳನ್ನು ವಿದ್ಯಾ ದೇವರಾಜ್, ಮೇಘಾ ಸುಜಯ್, ಶೈಲಾ ಮಂಜುನಾಥ್ ಮತ್ತು ಭಾರತಿ ರಮೇಶ್ ನಿರೂಪಿಸಿದರು. ದೀಪಾಂಜಲಿ ತಂಡದವರು ಪ್ರಾರ್ಥಿಸಿದರು. ಸಂಘದ ಉಪಾಧ್ಯಕ್ಷೆ ಶ್ಯಾಮಲಾ ದಿನೇಶ್ ವಂದಿಸಿದರು. ಆಡಳಿತ ಮಂಡಳಿಯ ಸದಸ್ಯೆಯರಾದ ವಸುಂಧರಾ ಪ್ರಸನ್ನ, ಆಯಿಷಾ ಹಮೀದ್, ಉಮಾ ಈಶ್ವರ್, ಪ್ರೇಮಾ ರಾಘವಯ್ಯ, ಜಯಶೀಲಾ ಪ್ರಕಾಶ್, ವಸಂತಿ ಪೂಣಚ್ಚ ಉಪಸ್ಥಿತರಿದ್ದರು.