ಮಡಿಕೇರಿ, ಮಾ. ೧೨; ಕೊಡಗು ಜಿಲ್ಲೆಯಲ್ಲಿ ಮಾನವ- ಮತ್ತು ಪ್ರಾಣಿ ಸಂಘರ್ಷದಿAದ ಕೊಡಗು ಜಿಲ್ಲೆ ತತ್ತರಿಸುತ್ತಿದ್ದು ಶಾಶ್ವತ ಪರಿಹಾರ ಕಲ್ಪಿಸದಿದ್ದಲ್ಲಿ ಜಿಲ್ಲೆಯ ಜನತೆ ಕಾನೂನು ಕೈಗೆತ್ತಿಕೊಂಡರೂ ಅಚ್ಚರಿಯಿಲ್ಲವೆಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ, ವೀರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಸದನದಲ್ಲಿ ಗುಡುಗಿದ ಪ್ರಸಂಗ ನಡೆದಿದೆ.

ಕಲಾಪದ ವೇಳೆಯಲ್ಲಿ ಮಾತನಾಡಿದ ಶಾಸಕರು;, ಕೊಡಗು ಜಿಲ್ಲೆಯಲ್ಲಿ ಮಾನವ-ಪ್ರಾಣಿ ಸಂಘರ್ಷದಿAದಾಗಿ ತತ್ತರಿಸುವಂತಾಗಿದೆ. ಇಂದು ಬೆಳಿಗ್ಗೆ ಸಿದ್ದಾಪುರ ಬಳಿಯ ಗ್ರಾಮದಲ್ಲಿ ಬೆಳೆಗಾರ ಕಾಡಾನೆ ದಾಳಿಗೆ ಸಿಲುಕಿ ಸಾವನ್ನಪ್ಪಿದ್ದಾರೆ. ಎರಡು ವಾರದ ಹಿಂದೆ ಕುಶಾಲನಗರ ಬಳಿ ಮಹಿಳೆ ಸಾವನ್ನಪ್ಪಿದ್ದಾರೆ. ಮಡಿಕೇರಿ ಬಳಿಯ ಬೆಟ್ಟತ್ತೂರು ಗ್ರಾಮದಲ್ಲಿ ೧೯ ವರ್ಷದ ಬಾಲಕಿ ಆನೆ ದಾಳಿಗೆ ಬಲಿಯಾಗಿದ್ದಾಳೆ. ಹತ್ತು ದಿವಸದ ಅವಧಿಯೊಳಗಡೆ ಮೂವರು ಮಂದಿ ಸಾವನ್ನಪ್ಪಿದ್ದಾರೆ. ಇದೀಗ ಬಹಳ ಆತಂಕಕಾರಿ ಪರಿಸ್ಥಿತಿ ಕೊಡಗು ಜಿಲ್ಲೆಯಲ್ಲಿ ಎದುರಾಗಿದೆ. ಆನೆ, ಚಿರತೆ, ಹುಲಿಗಳ ಕಾಟದಿಂದ ಬದುಕು ಮಾಡಲಾಗದಂತಹ ಪರಿಸ್ಥಿತಿ ಎದುರಾಗಿದೆ. ಇದಕ್ಕೆ ಏನಾದರೂ ಶಾಶ್ವತ ಪರಿಹಾರ ತರಲು ಸಾಧ್ಯವಾಗದಿದ್ದರೆ ಮುಂದಿನ ದಿನಗಳಲ್ಲಿ ಜನವಸತಿಗೂ ಸಾಧ್ಯವಾಗುವುÀದಿಲ್ಲ. ಜಿಲ್ಲೆಯಲ್ಲಿ ಭತ್ತ ಅಕ್ಕಿಯನ್ನು ಬೆಳೆಯುವದನ್ನೇ ರೈತರು ನಿಲ್ಲಿಸಿಬಿಟ್ಟಿದ್ದಾರೆ ಎಂದು ಗಮನ ಸೆಳೆದರು.

ಈ ಸಮಸ್ಯೆ ಬಗೆಹರಿಸಲು ರಾಜ್ಯದ ಮುಖ್ಯಮಂತ್ರಿಗಳು, ಅರಣ್ಯ ಸಚಿವರು, ಸಂಪುಟ ಸಭೆ ನಿರ್ಣಯ ಕೈಗೊಂಡು ನಮ್ಮ ರಕ್ಷಣೆಗೆ ಬರಲೇಬೇಕಾಗುತ್ತದೆ. ಇಲ್ಲವಾದರೆ ಜನರು ಕಾನೂನನ್ನು ಕೈಗೆ ತೆಗೆದುಕೊಂಡರೂ ಕೂಡ ತಪ್ಪು ಅಂತ ಹೇಳೋಕ್ಕಾಗಲ್ಲ. ಆ ಒಂದು ಪರಿಸ್ಥಿತಿ ಅಲ್ಲಿ ನಿರ್ಮಾಣವಾಗಿದೆ. ದಯವಿಟ್ಟು ಸರಕಾರ ಗಮನಹರಿಸಬೇಕು, ಮುಖ್ಯಮಂತ್ರಿಗಳೂ ಇಲ್ಲಿದ್ದಾರೆ, ಅವರಲ್ಲಿ ಕೈಮುಗಿದು ಪ್ರಾರ್ಥನೆ ೪ಆರನೇ ಪುಟಕ್ಕೆ

(ಮೊದಲ ಪುಟದಿಂದ) ಮಾಡಿಕೊಳ್ಳುತ್ತೇನೆ. ಜನರ ಬದುಕು ಸಂಕಷ್ಟದಲ್ಲಿದೆ. ಮಾನವ ಮತ್ತು ಪ್ರಾಣಿಯ ಸಂಘರ್ಷದಿAದ ಇದನ್ನು ಬಗೆಹರಿಸಲು ವೈಜ್ಞಾನಿಕವಾದ ಕ್ರಮವನ್ನು ಸರಕಾರ ಜಾರಿಗೆ ತಂದು ಮುಂದಾಗಬೇಕೆAದು ಕೇಳಿಕೊಳ್ಳುತ್ತೇನೆ. ಬಜೆಟ್‌ನಲ್ಲಿ ಮಾನವ-ಪ್ರಾಣಿ ಸಂಘರ್ಷ ತಡೆಗೆ ೧೫೦೦ ಕೋಟಿ ಮೀಸಲಿರಿಸಿದ್ದು, ಇದರಲ್ಲಿ ಕೊಡಗು ಜಿಲ್ಲೆಗೆ ದೊಡ್ಡ ಪಾಲು ನೀಡಿ ನಮ್ಮ ರಕ್ಷಣೆಗೆ ಮುಂದಾಗಬೇಕೆAದು ಮುಖ್ಯಮಂತ್ರಿಗಳಲ್ಲಿ ಕೋರಿಕೊಳ್ಳುತ್ತಿದ್ದೇನೆ. ಪ್ರಸಕ್ತ ವರ್ಷ ೨೭೦ ಕೋಟಿ ನೀಡಿದ್ದು, ಇದಕ್ಕಿಂತ ಹೆಚ್ಚು ಅನುದಾನ ನೀಡಬೇಕೆಂದು ಕೋರಿಕೊಳ್ಳುತ್ತಿದ್ದೇನೆ ಎಂದು ಬೇಡಿಕೆ ಮುಂದಿಟ್ಟರು.