ಗೋಣಿಕೊಪ್ಪಲು, ಮಾ. ೭: ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ಅವರು ತಿತಿಮತಿಯಲ್ಲಿರುವ ತಾಲೂಕು ಗಿರಿಜನ ಕಲ್ಯಾಣ ಇಲಾಖೆಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕಾರ್ಯನಿಮಿತ್ತ ವಿವಿಧ ಕಡೆಗೆ ಭೇಟಿ ನೀಡಲು ತೆರಳಿದ್ದ ತಾಲೂಕು ಮಟ್ಟದ ಅಧಿಕಾರಿಯನ್ನು ದೂರವಾಣಿ ಮೂಲಕ ಸಂಪರ್ಕಿಸಿದ ಶಾಸಕ ಪೊನ್ನಣ್ಣ, ಆದಿವಾಸಿಗಳ ಮನೆ ನಿರ್ಮಾಣದ ಹಾಗೂ ನಿವೇಶನ ಹಂಚಿಕೆಯ ಬಗ್ಗೆ ಕೈಗೊಂಡ ಕ್ರಮಗಳ ಬಗ್ಗೆ ಮಾಹಿತಿ ಪಡೆದರು.ಕಚೇರಿಗೆ ಸಹ ಸಿಬ್ಬಂದಿಗಳು ನಿಗದಿತ ಸಮಯದಲ್ಲಿ ಹಾಜರಾಗದ ಬಗ್ಗೆ ಅಧಿಕಾರಿಗಳನ್ನು ದೂರವಾಣಿಗಳ ಮೂಲಕ ಪ್ರಶ್ನಿಸಿದರು. ಸರ್ಕಾರದ ನಿಯಮದಂತೆ ನಿಗದಿತ ಸಮಯದಲ್ಲಿ ಸಿಬ್ಬಂದಿ ಕಚೇರಿಯಲ್ಲಿರುವಂತೆ ನಿರ್ದೇಶನ ನೀಡಿದರು. ಭೇಟಿಯ ವೇಳೆ ಗ್ಯಾರಂಟಿ ಅನುಷ್ಠಾನ ಸಮಿತಿಯ ಜಿಲ್ಲಾಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ, ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಿದೇರಿರ ನವೀನ್, ಪ್ರಧಾನ ಕಾರ್ಯದರ್ಶಿ ಎ.ಜೆ. ಬಾಬು, ತಿತಿಮತಿ ವಲಯ ಕಾಂಗ್ರೆಸ್ ಅಧ್ಯಕ್ಷ ನವೀನ್ ಕುಮಾರ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಪಿ.ಆರ್. ಪಂಕಜ, ಕಾಂಗ್ರೆಸ್ ಜಿಲ್ಲಾ ವಕ್ತಾರ ಆಪಟ್ಟಿರ ಟಾಟೂ ಮೊಣ್ಣಪ್ಪ, ಪ್ರಮುಖರುಗಳಾದ ವಿಲ್ಸನ್, ಡಾ. ಮದ್ಯಸ್ಥ, ಫಿಲೋಮಿನ, ಅಪ್ರೋಸ್, ಮಾರ, ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.