ಮಡಿಕೇರಿ, ಮಾ. ೭: ಕರ್ನಾಟಕ ಸರ್ಕಾರದ ಪ್ರಸ್ತುತ ಸಾಲಿನ ಬಜೆಟ್‌ನಲ್ಲಿ ದಶಕಗಳ ಬೇಡಿಕೆಯಾದ ಕೊಡವ ಅಭಿವೃದ್ಧಿ ನಿಗಮ ಘೋಷಣೆಯಾದ ಹಿನ್ನೆಲೆಯಲ್ಲಿ ಯುಕೊ ಸಂಘಟನೆಯು ನಿನ್ನೆ ತಡರಾತ್ರಿಯಲ್ಲಿ ಗೋಣಿಕೊಪ್ಪದಲ್ಲಿ ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿತು. ಈ ಸಂದರ್ಭ ಬಜೆಟ್ ಅದಿವೇಶನ ಮುಗಿಸಿ ಗೋಣಿಕೊಪ್ಪಕ್ಕೆ ಆಗಮಿಸಿದ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ, ಕಾಂಚನ್ ಪೊನ್ನಣ್ಣ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡರು.

ಬೆAಗಳೂರಿನಿAದ ನೇರವಾಗಿ ಬಂದಿಳಿದ ಪೊನ್ನಣ್ಣ ಅವರನ್ನು ಒಡ್ಡೋಲಗದೊಂದಿಗೆ ಉಮಾಮಹೇಶ್ವರಿ ಪೆಟ್ರೋಲ್ ಬಂಕ್‌ನಲ್ಲಿ ಸಿದ್ದಪಡಿಸಿದ್ದ ವೇದಿಕೆಗೆ ಕರೆತರಲಾಯಿತು. ನಂತರ ಶಾಸಕ ಪೊನ್ನಣ್ಣ ಹಾಗೂ ಯುಕೊ ಸಂಚಾಲಕ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ ಅವರನ್ನು ಸನ್ಮಾನಿಸಲಾಯಿತು.

ಸಭೆಯಲ್ಲಿ ಮಾತನಾಡಿದ ಮಂಜು ಚಿಣ್ಣಪ್ಪ, ಶಾಸಕ ಪೊನ್ನಣ್ಣ ಅವರ ಇಚ್ಛಾಶಕ್ತಿ ಹಾಗೂ ಕಾಳಜಿಯಿಂದಾಗಿ ಪ್ರಸಕ್ತ ೨೦೨೬-೨೭ನೇ ಸಾಲಿನ ಬಜೆಟ್‌ನಲ್ಲಿ ಕೊಡವ ಅಭಿವೃದ್ಧಿ ನಿಗಮ ಘೋಷಣೆಯಾಗುವುದರೊಂದಿಗೆ ಯುನೈಟೆಡ್ ಕೊಡವ ಆರ್ಗನೈಜೇಷನ್ ಸಂಘಟನೆಯ ದಶಕಗಳ ಹೋರಾಟಕ್ಕೆ ಯಶಸ್ಸು ಲಭಿಸಿದೆ. ಪ್ರಸ್ತುತ ಕಡಿಮೆ ಜನಸಂಖ್ಯೆ ಹೊಂದಿರುವ ಕೊಡವ ಸಮುದಾಯದಂತಹ ಜನಾಂಗವು ಒಂದು ಬೇಡಿಕೆಯನ್ನು ಸರ್ಕಾರದಿಂದ ಈಡೇರಿಸಿಕೊಳ್ಳುವುದು ಸುಲಭದ ಮಾತಲ್ಲ. ಸರ್ಕಾರದಲ್ಲಿ ಪೊನ್ನಣ್ಣ ಅವರ ವೈಯಕ್ತಿಕ ವರ್ಚಸು, ಹಾಗೂ ಕ್ಷೇತ್ರದ ಎಲ್ಲಾ ಸಮುದಾಯಗಳ ಅಭಿವೃದ್ಧಿಯ ಬಗ್ಗೆ ಅವರಿಗಿರುವ ಕಾಳಜಿಯಿಂದಾಗಿ ಮುಖ್ಯಮಂತ್ರಿಯನ್ನು ಮನವೊಲಿಸಿ ನಿಗಮ ಘೋಷಣೆ ಮಾಡಿಸಿಕೊಳ್ಳಲು ಸಾಧ್ಯವಾಗಿದೆ. ಅಭಿವೃದ್ಧಿ ನಿಗಮವು ಕೊಡಗು ಕರ್ನಾಟಕದೊಂದಿಗೆ ವಿಲೀನದ ನಂತರದಲ್ಲಿ ಕರ್ನಾಟಕ ಸರ್ಕಾರದಿಂದ ಕೊಡವರಿಗೆ ದೊರೆತ ಬಹುದೊಡ್ಡ ಕೊಡುಗೆಯಾಗಿದೆ. ಆದ್ದರಿಂದ ಕೊಡವರ ಸಮಗ್ರ ಶ್ರೇಯೋಭಿವೃದ್ಧಿಗೆ ನಿಗಮವನ್ನು ಬಳಸಿಕೊಳ್ಳಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಹಿಂದಿನ ಸರ್ಕಾರವಿದ್ದಾಗ ೨೦೨೧ರಲ್ಲಿ, ಯುಕೊ ನಿಯೋಗವು ಅಂದಿನ ಶಾಸಕರಾದ ಕೆ.ಜಿ. ಬೋಪಯ್ಯ, ಅಪ್ಪಚ್ಚು ರಂಜನ್ ಹಾಗೂ ವೀಣಾ ಅಚ್ಚಯ್ಯ ಅವರ ಮುಂದಾಳತ್ವದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಿ ಕೊಡವ ಅಭಿವೃದ್ಧಿ ನಿಗಮಕ್ಕೆ ಬೇಡಿಕೆ ಸಲ್ಲಿಸಿತ್ತು. ಮುಖ್ಯಮಂತ್ರಿಗಳು ಮುಂದಿನ ಬಜೆಟಿನಲ್ಲಿ ನಿಗಮವನ್ನು ಘೋಷಿಸುವ ಭರವಸೆಯನ್ನು ನೀಡಿದ್ದರಾದರೂ, ಕೊನೆಗೆ ಬಜೆಟ್‌ನಲ್ಲಿ ಕೊಡವ ಜನಾಂಗದ ಅಭಿವೃದ್ಧಿಗಾಗಿ ೧೦ ಕೋಟಿಯನ್ನು ಘೋಷಿಸಿ ನಿರಾಸೆ ಮೂಡಿಸಿದ್ದರು. ಆದರೂ ಯುಕೊ ಸಂಘಟನೆ ಪಟ್ಟು ಬಿಡದೆ ಪ್ರಯತ್ನಿಸುವುದರ ಮೂಲಕ ನಂತರ ೨೦೨೩ ರ ಏಪ್ರಿಲ್‌ನಲ್ಲಿ ಚುನಾವಣೆಯ ಹೊಸ್ತಿಲಲ್ಲಿ ಕೊಡವ ಅಭಿವೃದ್ಧಿ ನಿಗಮವನ್ನು ಘೋಷಿಸಿ, ಯಾವುದೇ ಅನುದಾನವಿಲ್ಲದೆ ಒಂದು ಸರ್ಕಾರಿ ಆದೇಶವನ್ನು ಹೊರಡಿಸಲಾಯಿತು. ಆದರೆ ಸರ್ಕಾರದ ಅವಧಿ ಮುಗಿದಿದ್ದರಿಂದ ಮುಂದಿನ ಪ್ರಕ್ರಿಯೆ ಯಾವುದೂ ನಡೆಯದೆ ಕೊಡವ ಅಭಿವೃದ್ಧಿ ನಿಗಮವು ನೆನೆಗುದಿಗೆ ಬಿದ್ದಿತ್ತು.

ಆದರೆ, ಇಂದಿನ ಶಾಸಕರಾದ ಪೊನ್ನಣ್ಣ ಅವರು ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ತಾನು ಗೆದ್ದರೆ ಕೊಡವ ಅಭಿವೃದ್ದಿ ನಿಗಮ ಘೋಷಿಸುವುದಾಗಿ ನೀಡಿದ್ದ ಭರವಸೆಯನ್ನು ಈಡೇರಿಸಿದ್ದಾರೆ. ಈ ನಿಟ್ಟಿನಲ್ಲಿ ಯುಕೊ ಸಂಘಟನೆಯು ಶಾಸಕ ಪೊನ್ನಣ್ಣ ಅವರನ್ನು ಹಲವು ಬಾರಿ ಭೆೆÃಟಿ ಮಾಡಿ ಚರ್ಚಿಸಿತ್ತು ಎಂದು ತಿಳಿಸಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಶಾಸಕ ಪೊನ್ನಣ್ಣ, ಯುಕೊ ಸಂಘಟನೆಯ ಮೂಲಕ ಮೊದಲಿಗೆ ಕೊಡವ ಅಭಿವೃದ್ಧಿ ನಿಗಮದ ಅರಿವಾಯಿತು. ಆ ನಂತರ ತÀನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿದ್ದೆ. ಅದರಂತೆ ಇದೀಗ ಕೊಡವ ಅಭಿವೃದ್ಧಿ ನಿಗಮ ಸ್ಥಾಪಿಸುವ ಕುರಿತು ನೀಡಿದ್ದ ಭರವಸೆಯನ್ನು ಈಡೇರಿಸಿದ್ದೇನೆ ಎಂದು ಹೇಳಿದರು. ಮುಖ್ಯಮಂತ್ರಿಗಳು ನನ್ನ ಮೇಲೆ ವಿಶ್ವಾಸವಿಟ್ಟು ಕೊಡವ ಅಭಿವೃದ್ಧಿ ನಿಗಮ ಸ್ಥಾಪಿಸಲು ಒಪ್ಪಿಗೆ ನೀಡಿದರು. ಇದೀಗ ಕೊಡವ ಅಭಿವೃದ್ಧಿ ನಿಗಮವು ಕಂಪೆನಿ ಕಾಯ್ದೆಯನುಸಾರ ನೋಂದಣಿಯಾಗಿದ್ದು, ಶೀಘ್ರದಲ್ಲೇ ಸೂಕ್ತ ಅನುದಾನ ಮೀಸಲಿಟ್ಟು ಆಡಳಿತ ಮಂಡಳಿ ರಚನಾ ಪ್ರಕ್ರಿಯೆಯೂ ಪೂರ್ಣಗೊಳ್ಳಲಿದೆ ಎಂದು ತಿಳಿಸಿದರು. ವೇದಿಕೆಯಲ್ಲಿ ಮೂರ್ನಾಡು ಕೊಡವ ಸಮಾಜದ ಅಧ್ಯಕ್ಷ ತೇಲಪಂಡ ಸುಬ್ಬಯ್ಯ, ಕೊಲ್ಲೀರ ಉಮೇಶ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಸದಸ್ಯ ಚೊಟ್ಟೆಯಂಡ ಸಂಜು ಕಾವೇರಪ್ಪ, ಅಪ್ಪಾರಂಡ ವೇಣು ಪೊನ್ನಪ್ಪ, ಕಳ್ಳಿಚಂಡ ರತನ್, ಅಳಮೇಂಗಡ ಮೋಟಯ್ಯ, ಪಳಂಗಿಯAಡ ದರ್ಶನ್, ಚಂಗುಲAಡ ಅಯ್ಯಪ್ಪ, ಜಮ್ಮಡ ಗಣೇಶ್, ತೀತಿರ ಕುಟ್ಟಪ್ಪ, ಮುಂಡAಡ ಅರುಣ್, ಮುಕ್ಕಾಟಿರ ರಾಬಿನ್, ಚಂಗAಡ ಸೂರಜ್, ನೆರ್ಪಂಡ ಪ್ರತೀಕ್ ಪೊನ್ನಣ್ಣ, ನೂರೆರ ಜೀವನ್, ಕೊಲ್ಲೀರ ಗಯಾ, ಕಾವಡಿಚಂಡ ದೀಪಕ್, ಕಾಟಿಮಾಡ ಗಿರಿ, ನೆಲ್ಲಮಕ್ಕಡ ಮಾದಯ್ಯ, ಮಚ್ಚಾಮಾಡ ರಮೇಶ್, ಅರುಣ್, ಬಾದುಮಂಡ ವಿಷ್ಣು, ಕಡೇಮಾಡ ತಿಮ್ಮಯ್ಯ, ಕೊಪ್ಪೀರ ದಿವಿನ್, ಕಾಯಪಂಡ ಬೋಪಣ್ಣ, ಮಾಣಿಪಂಡ ಅಯ್ಯಪ್ಪ, ಚೆಪ್ಪುಡಿರ ಪ್ರತಿಮ, ಕಳ್ಳಿಚಂಡ ದೀನ, ಬೊಳ್ಳಚೆಟ್ಟಿರ ಮೈನ, ಕುಂಜಿಲAಡ ಗ್ರೇಸಿ, ಪಾಂಡAಡ ಸ್ವಾತಿ, ಕಾವಡಿಚಂಡ ಪವಿತ್ರ ಹಾಗು ಇತರರು ಉಪಸ್ಥಿತರಿದ್ದರು. ಕಳ್ಳಿಚಂಡ ರಾಬಿನ್ ಸುಬ್ಬಯ್ಯ ಸ್ವಾಗತಿಸಿ, ಚೆಪ್ಪುಡಿರ ಸುಜು ಕರುಂಬಯ್ಯ ವಂದಿಸಿದರು.