ಅಹಮೆದಾಬಾದ್, ಮಾ. ೭: ಪುರುಷರ ಟಿ-೨೦ ಕ್ರಿಕೆಟ್ ವಿಶ್ವಕಪ್ ನ ೧೦ನೇ ಆವೃತ್ತಿಯ ಅಂತಿಮ ಪಂದ್ಯ ತಾ.೮ ರಂದು (ಇಂದು) ಅಹಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಭಾರತವು ತನ್ನ ೩ನೇ ವಿಶ್ವಕಪ್‌ಗಾಗಿ ನ್ಯೂಜಿಲ್ಯಾಂಡ್ ವಿರುದ್ಧ ಸೆಣಸಾಡಲಿದೆ. ಸೆಮಿಫೈನಲ್‌ನಲ್ಲಿ ನ್ಯೂಜಿಲ್ಯಾಂಡ್ ತಂಡ ಸುಲಭವಾಗಿ ದಕ್ಷಿಣ ಆಫ್ರಿಕಾ ತಂಡವನ್ನು ಮಣಿಸಿದ್ದರೆ, ಭಾರತವು ರೋಚಕ ಪಂದ್ಯದಲ್ಲಿ ಇಂಗ್ಲೆAಡ್ ಅನ್ನು ೭ ರನ್ ಗಳ ಅಂತರದಲ್ಲಿ ಮಣಿಸಿ ಫೈನಲ್ ಪ್ರವೇಶಿಸಿದೆ. ಅಂತಿಮ ಪಂದ್ಯವು ತಾ.೮ರ (ಇಂದು) ಸಂಜೆ ೭ ಗಂಟೆಗೆ ಪ್ರಾರಂಭವಾಗಲಿದ್ದು, ಸ್ಟಾರ್ ಸ್ಪೋರ್ಟ್ಸ್ ಹಾಗೂ ಜಿಯೋ ಹಾಟ್‌ಸ್ಟಾರ್‌ನಲ್ಲಿ ವೀಕ್ಷಿಸಬಹುದಾಗಿದೆ. ಕಳೆದ ಬಾರಿಯೂ(೨೦೨೪ರಲ್ಲಿ) ಚಾಂಪಿಯನ್ ಆಗಿದ್ದ ಭಾರತ ಈ ಬಾರಿ ಮತ್ತೇ ಗೆದ್ದರೆ ೩ ಬಾರಿ ಟಿ-೨೦ ಕಿರೀಟ ಪಡೆಯುವ ಹಾಗೂ ಸತತವಾಗಿ ಚಾಂಪಿಯನ್ ಪಟ್ಟ ಅಲಂಕರಿಸುವ ಮೊದಲ ತಂಡ ಆಗಲಿದೆ.