ವೀರಾಜಪೇಟೆ, ಮಾ. ೭: ನ್ಯಾಷನಲ್ ಮೆಡಿಕೋಸ್ ಅರ್ಗನೈಸೇಷÀನ್, ಸೇವಾ ಭಾರತಿ ಕೊಡಗು ಆಶ್ರಯದಲ್ಲಿ ತಾ. ೮ ರಂದು ಬಿಟ್ಟಂಗಾಲದ ವಿಜಯಾ ಬ್ಯಾಂಕ್ ಕಟ್ಟಡದಲ್ಲಿ ಉಚಿತ ಆರೋಗ್ಯ ಶಿಬಿರ ನಡೆಯಲಿದೆ. ಶಿಬಿರವು ಬೆಳಿಗ್ಗೆ ೧೦ ಗಂಟೆಯಿAದ ಮಧ್ಯಾಹ್ನ ೨ ಗಂಟೆಯವರೆಗೆ ನಡೆಯಲಿದೆ. ಶಿಬಿರದಲ್ಲಿ ರಕ್ತದೊತ್ತಡ ತಪಾಸಣೆ, ಮಧುಮೇಹ ತಪಾಸಣೆ, ಬಿಎಂಐ ಮೌಲ್ಯಮಾಪನ, ಉಚಿತ ಔಷಧಿಗಳ ವಿತರಣೆ, ಸೇರಿದಂತೆ ಆಯುಷ್ಮಾನ್ ಕಾರ್ಡ್ ಮಾಡಿ ಕೊಡಲಾಗುತ್ತದೆ. ಶಿಬಿರಕ್ಕೆ ಆಗಮಿಸುವವರು ಆಧಾರ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಲಿಂಕ್ ಆಗಿರುವ ಮೊಬೈಲ್ ತರುವಂತೆ ಸಮಿತಿ ಮನವಿ ಮಾಡಿದೆ.