ಹೆಬ್ಬಾಲೆ, ಮಾ. ೭: ಚಿಕ್ಕಬೆಟ್ಟಗೇರಿ ಗ್ರಾಮದಲ್ಲಿ ದೀರ್ಘಕಾಲದಿಂದ ಸ್ಮಶಾನ ಜಾಗ ಮತ್ತು ಅರಣ್ಯ ಇಲಾಖೆ ಜಾಗದ ನಡುವೆ ಉಂಟಾಗಿದ್ದ ಗಡಿ ಗೊಂದಲ ಇತ್ಯರ್ಥ ಕಂಡಿದೆ.

ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ, ಭೂಮಾಪನ ಇಲಾಖೆ, ಕಂದಾಯ ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳು ಜಂಟಿಯಾಗಿ ಸ್ಥಳ ಪರಿಶೀಲನೆ ನಡೆಸಿ, ವೈಜ್ಞಾನಿಕವಾಗಿ ಗಡಿ ಗುರುತಿಸುವ ಕಾರ್ಯವನ್ನು ಯಶಸ್ವಿಯಾಗಿ ನಡೆಸಿದ್ದಾರೆ.

ಚಿಕ್ಕಬೆಟ್ಟಗೇರಿ ಗ್ರಾಮದ ಸರ್ವೆ ನಂಬರ್ ೧/೧ ರಲ್ಲಿ ೧೩ ಸೆಂಟ್ ವಿಸ್ತೀರ್ಣದ ಜಾಗವನ್ನು ಸರ್ಕಾರವು ಸ್ಮಶಾನಕ್ಕಾಗಿ ಮಂಜೂರು ಮಾಡಿತ್ತು. ಆದರೆ ಈ ಜಾಗವು ಅರಣ್ಯ ಭೂಮಿಗೆ ಹೊಂದಿಕೊAಡಿರುವುದರಿAದ, ನಿಖರವಾದ ಗಡಿ ಗುರುತಿಸುವಲ್ಲಿ ತಾಂತ್ರಿಕ ಸಮಸ್ಯೆಗಳು ಎದುರಾಗಿದ್ದವು. ಇದರಿಂದಾಗಿ ಗ್ರಾಮಸ್ಥರು ಅಂತ್ಯಸAಸ್ಕಾರದ ಸಂದರ್ಭದಲ್ಲಿ ಅರಣ್ಯ ಇಲಾಖೆಯ ಆಕ್ಷೇಪಣೆಯಿಂದ ಮತ್ತು ಜಾಗದ ಕೊರತೆಯ ತೊಂದರೆ ಅನುಭವಿಸುತ್ತಿದ್ದರು. ಸಮಸ್ಯೆಯನ್ನು ಶಾಶ್ವತವಾಗಿ ಬಗೆಹರಿಸಲು ನಿರ್ಧರಿಸಿದ ಅಧಿಕಾರಿಗಳು, ಸ್ಥಳಕ್ಕೆ ಭೇಟಿ ನೀಡಿ ಜಂಟಿ ಸರ್ವೆ ನಡೆಸಿದರು. ಸರ್ಕಾರದ ಅಧಿಕೃತ ದಾಖಲೆಗಳನ್ವಯ ಸ್ಮಶಾನಕ್ಕೆ ಮೀಸಲಿಟ್ಟ ೧೩ ಸೆಂಟ್ ಜಾಗವನ್ನು ಅಳತೆ ಮಾಡಿ, ಅರಣ್ಯ ಭೂಮಿಯಿಂದ ಪ್ರತ್ಯೇಕಿಸಿ ಹದ್ದುಬಸ್ತು ಗುರುತಿಸುವ ಮೂಲಕ ಗ್ರಾಮಸ್ಥರ ಬಹುದಿನದ ಬೇಡಿಕೆ ಈಡೇರಿಸಲಾಗಿದೆ. ೪ಐದನೇ ಪುಟಕ್ಕೆ

(ಮೊದಲ ಪುಟದಿಂದ) ಅಧಿಕಾರಿಗಳ ಸಮ್ಮುಖದಲ್ಲಿ ನಡೆದ ಸರ್ವೆ ಪ್ರಕ್ರಿಯೆ ಸುಗಮವಾಗಿ ನಡೆದು ಸ್ಮಶಾನ ಭೂಮಿಯ ಗಡಿ ಗುರುತಿಸುವಿಕೆ ಕಾರ್ಯವು ಯಶಸ್ವಿಯಾಗಿ ಪೂರ್ಣಗೊಂಡಿತು. ಈ ಸಂದರ್ಭ ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎಂ.ಆರ್. ಸುಮೇಶ್, ಆಡಳಿತ ಅಧಿಕಾರಿ ಸಂತೋಷ್ ಮತ್ತು ಸೋನು, ಸರ್ವೆ ಇಲಾಖೆಯ ಅಧಿಕಾರಿ ರವಿ, ಅರಣ್ಯ ಇಲಾಖೆಯ ಅಧಿಕಾರಿ ದೇವಯ್ಯ ಹಾಗೂ ಸಮಾಜ ಕಲ್ಯಾಣ ಇಲಾಖೆಯ ರವಿ, ಗ್ರಾ.ಪಂ. ಕಾರ್ಯದರ್ಶಿ ಕುಮಾರಸ್ವಾಮಿ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.