ಕಣಿವೆ, ಮಾ. ೬: ಮಧ್ಯಾಹ್ನದ ಸಮಯದಲ್ಲಿ ಒಂಟಿ ಸಲಗ ರಸ್ತೆಯ ಮಧ್ಯೆ ಕಾಣಿಸಿಕೊಂಡ ಪರಿಣಾಮ ಬೈಕ್ ಸವಾರರಿಬ್ಬರು ಹೈರಾಣಾಗಿ ಜೀವ ಉಳಿಸಿಕೊಂಡ ಪ್ರಸಂಗ ಅಬ್ಬೂರು ಕಟ್ಟೆ ಅರಣ್ಯದ ಹೆದ್ದಾರಿಯಲ್ಲಿ ನಡೆದಿದೆ.
ತೊರೆನೂರು ಗ್ರಾಮದ ಕೃಷಿಕರಾದ ಧ್ರುವ ಹಾಗೂ ತೀರ್ಥ ಎಂಬವರು ದ್ವಿಚಕ್ರ ವಾಹನದಲ್ಲಿ ಮಧ್ಯಾಹ್ನ ಸೋಮವಾರಪೇಟೆಯತ್ತ ತೆರಳುತ್ತಿದ್ದಾಗ ಅಬ್ಬೂರುಕಟ್ಟೆಯ ತಿರುವಿನಲ್ಲಿ ದಿಢೀರನೇ ರಸ್ತೆ ದಾಟಿದ ಸಲಗದಿಂದ ಬೈಕ್ ಸವಾರರು ಪಾರಾಗಿದ್ದಾರೆ.
ಸಲಗ ನಮ್ಮನ್ನು ಕಂಡೊಡನೆ ಒಮ್ಮೆಲೆ ದಾಳಿ ಮಾಡಲು ಓಡಿ ಬಂದಿದೆ. ಇದನ್ನು ಕಂಡು ಹೆದರಿ ಕಿರುಚಿ ಬೈಕ್ ಬಿಟ್ಟು ಓಡಿ ಹೋಗಿ ಜೀವ ಉಳಿಸಿಕೊಂಡಿರುವುದಾಗಿ ಕೃಷಿಕ ಧ್ರುವ ತಿಳಿಸಿದ್ದಾರೆ.