ಕೂಡಿಗೆ, ಮಾ. ೬: ಕುಶಾಲನಗರದ ಕನ್ನಡ ಸಿರಿ ಸ್ನೇಹ ಬಳಗದ ವತಿಯಿಂದ ರಾಷ್ಟçಕವಿ ಜಿ.ಎಸ್. ಶಿವರುದ್ರಪ್ಪ ಅವರ ಜನ್ಮಶತಮಾನೋತ್ಸವ ವರ್ಷಾಚರಣೆ ಅಂಗವಾಗಿ ಕರ್ನಾಟಕ ವಿಕಾಸರಂಗ ವಾಸವಿ ಕಲಾ ಮಂಡಳಿ ಸಹಕಾರದೊಂದಿಗೆ ಮಾಸದ ನೆನಪು, ಕವಿ ಸಾಹಿತಿಗಳ ಸ್ಮರಣೆ ಕಾರ್ಯಕ್ರಮ ಕುಶಾಲನಗರ ಮಹಾಲಕ್ಷ್ಮಿ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಕಣಿವೆಯ ಸಾಹಿತಿ ಭಾರದ್ವಾಜ್ ನೆರವೇರಿಸಿದರು. ಕವಿತೆಯ ರಚನೆಯ ಲೋಕದಲ್ಲಿ ಪರಿಶ್ರಮ ಬಹುಮುಖ್ಯ. ಹಿರಿಯ ಕವಿಗಳ ಸಾಧನೆ ಮುಂದಿನ ಯುವಕರಿಗೆ ದಾರಿ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

ಕೂಡಿಗೆ ಪದವಿಪೂರ್ವ ಕಾಲೇಜು ಪ್ರಾಂಶುಪಾಲ ಹಂಡ್ರAಗಿ ನಾಗರಾಜ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕನ್ನಡ ಸಿರಿ ಸ್ನೇಹ ಬಳಗದ ಅಧ್ಯಕ್ಷ ಬಿ.ಎಸ್. ಲೋಕೇಶ್ ಸಾಗರ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ನಿವೃತ್ತ ಜಿಲ್ಲಾ ಕೈಗಾರಿಕಾ ತರಬೇತಿ ಕೇಂದ್ರದ ವಿಸ್ತಾರಣಾಧಿಕಾರಿ ಶಬ್ಬೀರ್ ಪಾಷಾ, ನಿವೃತ್ತ ಕಲಾ ಶಿಕ್ಷಕ ಉ.ರಾ. ನಾಗೇಶ್, ಕುಶಾಲನಗರ ಕರ್ನಾಟಕ ವಿಕಾಸರಂಗ ಉಪಾಧ್ಯಕ್ಷೆ ವಿನಯ ರಾಜಶೇಖರ್, ವಾಸವಿ ಕಲಾ ಮಂಡಳಿ ಅಧ್ಯಕ್ಷೆ ಲತಾ ರಮೇಶ್, ಬಳಗದ ಪ್ರಮುಖರಾದ ಟಿ.ಕೆ. ಪಾಂಡುರAಗ, ಕೆ.ಕೆ. ನಾಗರಾಜ ಶೆಟ್ಟಿ ಉಪಸ್ಥಿತರಿದ್ದರು.

ಮಾಸದ ನೆನಪು ಕವಿ ಸಾಹಿತಿಗಳ ಸ್ಮರಣೆ ಕಾರ್ಯಕ್ರಮದಲ್ಲಿ ರಾಷ್ಟçಕವಿ ಜಿ.ಎಸ್. ಶಿವರುದ್ರಪ್ಪ, ಪ್ರೊ. ನಿಸಾರ್ ಅಹಮದ್, ಸಾಹಿತ್ಯ ರತ್ನ ಚಿ. ಉದಯಶಂಕರ್, ಡಾ. ಸಿದ್ದಲಿಂಗಯ್ಯ ಅವರುಗಳ ಸ್ಮರಣೆಯ ಹಾಡುಗಳನ್ನು ಹಾಡಲಾಯಿತು. ಲತಾ ತಂಡವು ಪ್ರಾರ್ಥಿಸಿ, ಉ.ರಾ. ನಾಗೇಶ್ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕಿ ಮಾಲದೇವಿ ಸ್ವಾಗತಿಸಿ, ಕನ್ನಡ ಸಿರಿ ಬಳಗದ ಪ್ರಮುಖರಾದ ಕೆ.ಕೆ. ನಾಗರಾಜಶೆಟ್ಟಿ ವಂದಿಸಿದರು.