ಮಡಿಕೇರಿ, ಮಾ. ೬: ಜಿಲ್ಲಾ ಪೊಲೀಸ್ ಶ್ವಾನದಳಕ್ಕೆ ಬೆಲ್ಜಿಯನ್ ಮೆಲನಾಯ್ಸ್ ತಳಿಯ ಶ್ವಾನವನ್ನು ಕೊಡುಗೆ ನೀಡಲಾಗಿದೆ.
ಜಿಲ್ಲಾ ಪೊಲೀಸ್ ಘಟಕದಲ್ಲಿ ಅಪರಾಧ ಪತ್ತೆ, ಸ್ಫೋಟಕ, ಮಾದಕ ದ್ರವ್ಯ ಪತ್ತೆಯ ಸಮಯದಲ್ಲಿ ತರಬೇತು ಹೊಂದಿದ ಶ್ವಾನಗಳನ್ನು ಬಳಸಲಾಗುತ್ತಿದ್ದು, ಈ ನಿಟ್ಟಿನಲ್ಲಿ ಜಿಲ್ಲಾ ಶ್ವಾನದಳಕ್ಕೆ ಪಾಲೂರು ನಿವಾಸಿ ಎ.ಯು ಪೂವಯ್ಯ ಅವರು ಶ್ವಾನವನ್ನು ಕೊಡುಗೆಯಾಗಿ ನೀಡಿದ್ದಾರೆ.