ಮಡಿಕೇರಿ, ಮಾ. ೬: ಜಗತ್ತಿನ ಎಲ್ಲಾ ನಂಬಿಕೆಗಳನ್ನು, ಪರಂಪರೆಗಳನ್ನು, ಮನಸ್ಸಿನ ಭಾವನೆಗಳನ್ನು ಅರ್ಥಮಾಡಿಕೊಂಡಿರುವ ನೆಲವೇ ಹಿಂದೂ ಧರ್ಮದ ಭವ್ಯ ಭಾರತದ ದೇಶ. ದೇಶ ಉಳಿಯಬೇಕಾದರೆ ಹಿಂದೂ ಧರ್ಮ ಉಳಿಯಬೇಕು - ಬೆಳೆಯಬೇಕು. ಆ ನಿಟ್ಟಿನಲ್ಲಿ ಹಿಂದೂಗಳು ಸಂಘಟಿತರಾಗಬೇಕೆAದು ಸ್ವಯಂಸೇವಕರು ಹಾಗೂ ಪೂರ್ಣಾವಧಿ ಕಾರ್ಯಕರ್ತರಾದ ನವೀನ್ ಸುಬ್ರಮಣ್ಯ ಕರೆ ನೀಡಿದರು.
ಹೊದ್ದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಿಂದೂ ಸಂಗಮ ಆಯೋಜನಾ ಸಮಿತಿಯ ವತಿಯಿಂದ ನಡೆದ ಹಿಂದೂ ಸಂಗಮ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿದ ಸುಬ್ರಮಣ್ಯ ಅವರು, ಹಿಂದೂಗಳು ಸೌಹಾರ್ದತೆಯ ಪಾಠ ಕಲಿಯಬೇಕಾಗಿದೆ. ಹಿಂದೂ ಎಂಬುದು ಸನಾತನ ಧರ್ಮವಾಗಿದೆ. ಇದು ಕೇವಲ ಆಚರಣೆಯಲ್ಲ. ಬದುಕಿನಲ್ಲಿ ಜೀವನದ ಪದ್ಧತಿಯಾಗಿದೆ. ಇದರ ನಾಶಕ್ಕಾಗಿ ಹಲವು ಪ್ರಯತ್ನಗಳು ನಡೆದಿದ್ದರೂ ಭದ್ರ ಬುನಾದಿ ಹೊಂದಿರುವ ಹಿಂದೂ ಧರ್ಮವನ್ನು ಅಲುಗಾಡಿಸಲು ಯಾರಿಂದಲೂ ಸಾಧ್ಯವಾಗಿಲ್ಲ ಎಂದು ನುಡಿದರು.
ಮುಖ್ಯ ಅತಿಥಿಗಳಾಗಿದ್ದ ಮೂರ್ನಾಡು ಪದವಿಪೂರ್ವ ಕಾಲೇಜಿನ ಉಪನ್ಯಾಸಕಿ ಶಿವಚಾಳಿಯಂಡ ನಿತ್ಯಾ ಅಂಬಿ ಕಾರ್ಯಪ್ಪ ಅವರು ಭರತಮಾತೆಯ ನೆಲ ಹೆತ್ತ ತಾಯಿಯ ಸಮಾನ. ಮನೆಯಲ್ಲಿ ಮೊದಲು ಮಹಿಳೆಯರು ಆಚಾರವಂತರಾಗಬೇಕು. ಮಕ್ಕಳನ್ನು ಸುಸಂಸ್ಕೃತರನ್ನಾಗಿ ಬೆಳೆಸುವಂತಾಗಬೇಕು. ಹಿರಿಯರನ್ನು ಗೌರವಿಸುವ ಬಗ್ಗೆ ಜಾಗೃತಿ ಮೂಡಿಸಬೇಕು. ಜೀವನದ ಮಾರ್ಗ, ಜೀವನದ ಶೈಲಿ, ಸಂಸ್ಕೃತಿ, ಆಚಾರ-ವಿಚಾರದ ಬಗ್ಗೆ ಸಣ್ಣತನದಲ್ಲಿಯೇ ತಿಳಿಹೇಳುವಂತಾಗಬೇಕೆAದರು.
ಹೊದ್ದೂರು ಗ್ರಾಮ ಪಂಚಾಯಿತಿ ಸದಸ್ಯ ವಾಂಚೀರ ರನ್ನ ಅಜಯ್ ಕುಮಾರ್ ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನಾಡಿ, ರಾಷ್ಟಿçÃಯ ಸ್ವಯಂಸೇವಕ ಸಂಘ ೧೦೦ ವರ್ಷಗಳನ್ನು ಪೂರೈಸಿರುವ ಸಂದರ್ಭದಲ್ಲಿ ಸಮಾಜದ ಜಾಗೃತಿಗೆ ಹೊಸ ದಿಕ್ಕನ್ನು ತೋರಿಸುವ ಹಿನ್ನೆಲೆ ಹಿಂದೂ ಸಂಗಮ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದರು.
ಅಧ್ಯಕ್ಷತೆಯನ್ನು ಗ್ರಾಮದ ಹಿರಿಯರು, ಸಹಕಾರಿ ಧುರೀಣರೂ ಆದ ಮಂಡೇಪAಡ ಕರುಂಬಯ್ಯ ಅವರು ವಹಿಸಿದ್ದರು. ಆರಂಭದಲ್ಲಿ ಭಾರತಮಾತೆಯ ಭಾವಚಿತ್ರಕ್ಕೆ ಗಣ್ಯರು ಪುಷ್ಪನಮನವನ್ನು ಸಲ್ಲಿಸಿದರು. ವಿಜು ಚೆಟ್ಟಳ್ಳಿ ಪ್ರಾರ್ಥನೆಯೊಂದಿಗೆ ವಂದೆ ಮಾತರಂ ಗೀತೆಯನ್ನು ಹಾಡಿದರು.
ಕಾರ್ಯಕ್ರಮದಲ್ಲಿ ಭಜರಂಗ ದಳದ ಜಿಲ್ಲಾ ಸಂಯೋಜಕ ವಿನಯ್, ವಿಶ್ವ ಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಪುದಿಯೊಕ್ಕಡ ರಮೇಶ್, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ನೆರವಂಡ ಸಂಜಯ್ ಪೂಣಚ್ಚ ಮೊದಲಾದವರು ಉಪಸ್ಥಿತರಿದ್ದರು. ಕಲ್ಲುಮುಟ್ಲು ಜಶ್ಮಿ ನಿರೂಪಿಸಿದರು. ಸಭಾ ಕಾರ್ಯಕ್ರಮದ ನಂತರ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ನೆರೆದಿದ್ದ ಹಿಂದೂ ಬಾಂಧವರಿಗೆ ಲಘು ಉಪಹಾರದ ವ್ಯವಸ್ಥೆ ಮಾಡಲಾಗಿತ್ತು.
ಬೃಹತ್ ಶೋಭಾಯಾತ್ರೆ
ಹೊದ್ದೂರು ಗ್ರಾಮದಲ್ಲಿ ಹಿಂದೂ ಸಂಗಮ ಆಯೋಜನಾ ಸಮಿತಿ ವತಿಯಿಂದ ನಡೆಸಲಾದ ಶೋಭಾಯಾತ್ರೆಯು ಗ್ರಾಮದ ಪ್ರಮುಖ ರಸ್ತೆಯ ಸುಮಾರು ೨ ಕಿ.ಮೀ.ನಷ್ಟು ಸಾಗಿ ಬರುವುದರ ಮೂಲಕ ಕಬಡಕೇರಿ ಆಟದ ಮೈದಾನದಲ್ಲಿ ಸಮಾಪ್ತಿಗೊಂಡಿತು. ಭಗವತಿ ದೇವಸ್ಥಾನದ ಮುಂಭಾಗದಲ್ಲಿ ಗೋಪೂಜೆ ಯೊಂದಿಗೆ ಆರಂಭಗೊAಡ ಶೋಭಾಯಾತ್ರೆಯಲ್ಲಿ ಸಹಸ್ರ ಸಂಖ್ಯೆಯಲ್ಲಿ ಆಗಮಿಸಿದ ಹಿಂದೂ ಬಾಂಧವರು ಕೇಸರಿ ಶಲ್ಯ ಧರಿಸಿ, ಬಾವುಟ ಹಿಡಿದು ಮೆರವಣಿಗೆಯಲ್ಲಿ ಸಾಗಿದರು.
ಕೇರಳದ ಚಂಡೆವಾದ್ಯ, ಕೊಡಗಿನ ವಾಲಗ, ಹುಲಿವೇಷಧಾರಿ, ಗೊಂಬೆ ಕುಣಿತ, ವಿವಿಧ ಛದ್ಮವೇಷ ಹೊತ್ತ ಮಕ್ಕಳ ಸಮ್ಮುಖದಲ್ಲಿ ಕಲಶ ಹಾಗೂ ತಳಯತಕ್ಕಿ ಬೊಳಕ್ ಹಿಡಿದ ಮಹಿಳೆಯರು ಶಿಸ್ತುಬದ್ಧವಾಗಿ ಮೆರವಣಿಗೆಯಲ್ಲಿ ಭಾಗಿಯಾಗಿ ಶೋಭಾಯಾತ್ರೆಗೆ ಮೆರುಗನ್ನು ನೀಡಿದರೆ, ಮೂರ್ನಾಡು ನೃತ್ಯಕಲಾ ತಂಡದ ವಿದ್ಯಾರ್ಥಿಗಳ ಭಜನಾನೃತ್ಯ ಗಮನ ಸೆಳೆಯಿತು. ಭುವನೇಶ್ವರಿಯ ಭಾವಚಿತ್ರ, ಶ್ರೀ ರಾಮನ ಸ್ತಬ್ಧಚಿತ್ರಗಳು ಗಮನ ಸೆಳೆದವು. ಮೆರವಣಿಗೆಯ ಅಂಗವಾಗಿ ಹೊದ್ದೂರು ಕೇಸರಿ ಬಾವುಟಗಳು, ಬಂಟಿAಗ್ಸ್ಗಳಿAದ ರಾರಾಜಿಸುತ್ತಿದ್ದವು. ಪ್ರಮುಖ ರಸ್ತೆಯ ಬದಿಯಲ್ಲಿ ಸ್ವಾಗತ ಕಮಾನುಗಳನ್ನು ನಿರ್ಮಿಸಲಾಗಿದ್ದು, ಗ್ರಾಮದಲ್ಲಿ ಹಬ್ಬದ ವಾತಾವರಣ ಮನೆ ಮಾಡಿತ್ತು. ಮೆರವಣಿಗೆಯುದ್ದಕ್ಕೂ ಹಿಂದೂ ಸಂಗಮ ಆಯೋಜಕರು ಕುಡಿಯಲು ನೀರಿನ ವ್ಯವಸ್ಥೆಯನ್ನು ಮಾಡಿದ್ದರು.
ಮಡಿಕೇರಿ ಗ್ರಾಮಾಂತರ ಠಾಣೆ ಪೊಲೀಸ್ ಇನ್ಸ್ಪೆಕ್ಟರ್ ಉಮೇಶ್ ಕುಮಾರ್ ಹಾಗೂ ಚಂದ್ರಶೇಖರ್ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತನ್ನು ಏರ್ಪಡಿಸಲಾಗಿತ್ತು. ಮೂರ್ನಾಡು ಪೊಲೀಸ್ ಉಪಠಾಣಾಧಿಕಾರಿ ಮೊಣ್ಣಪ್ಪ ಅವರು ಉಪಸ್ಥಿತರಿದ್ದರು.
- ಸಾಬ ಸುಬ್ರಮಣಿ.