ಕಣಿವೆ, ಮಾ. ೬: ಬಾಹ್ಯ ದೇವಾಲಯಗಳನ್ನು ಧಿಕ್ಕರಿಸಿ ಅಂತರAಗದ ಅರಿವಿಗೆ ಹೆಚ್ಚು ಒತ್ತು ನೀಡಿದ ಶರಣರು ವಚನಗಳ ಮೂಲಕ ಹಚ್ಚಿರುವ ಮಾನವತೆಯ ದೀಪ ಎಂದಿಗೂ ಆರದ ದೀಪ ಎಂದು ಹೆಬ್ಬಾಲೆ ಪ್ರೌಢಶಾಲೆಯ ಕನ್ನಡ ಉಪನ್ಯಾಸಕ ಮೆ.ನಾ. ವೆಂಕಟನಾಯಕ್ ಬಣ್ಣಿಸಿದರು.

ಕೊಡಗು ಜಿಲ್ಲಾ ವೀರಶೈವ ಮಹಾಸಭಾ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಹಾಗೂ ತೊರೆನೂರು ವಿರಕ್ತ ಮಠದ ಸಂಯುಕ್ತ ಆಶ್ರಯದಲ್ಲಿ ಶ್ರೀಮಠದ ಮಹಾಂತ ಸ್ವಾಮೀಜಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಮಾಸಿಕ ಹುಣ್ಣಿಮೆಯ ಚಿಂತನಾಗೋಷ್ಠಿಯಲ್ಲಿ ವಚನಕಾರರ ಕುರಿತು ಉಪನ್ಯಾಸ ನೀಡಿದರು.

ಇತರರಿಗೆ ಯಾವುದೇ ಕೆಡುಕು ಬಯಸದೆ ಸರ್ವ ಹಿತ ಬಯಸುವ ಶರಣರ ಚಿಂತನೆಗಳು ಸರ್ವಕಾಲಕ್ಕೂ ಮಾನವೀಯ ಬದುಕಿಗೆ ದಿವ್ಯ ಔಷಧಿ ಎಂದರು.

ತೊರೆನೂರು ವಿರಕ್ತ ಮಠದ ಶ್ರೀ ಮಲ್ಲೇಶ ಸ್ವಾಮೀಜಿ ಸಾನಿಧ್ಯ ವಹಿಸಿ ಮಾತನಾಡಿ, ಇಂದಿನ ಯುವ ಜನಾಂಗ ಸಂಸ್ಕಾರ ಹೀನರಾಗುತ್ತಿರುವುದು ಬೇಸರದ ಸಂಗತಿ. ಶರಣರ ಚಿಂತನೆಗಳ ಬೀಜಗಳನ್ನು ವಿದ್ಯಾರ್ಥಿ ದಿಸೆಯಿಂದಲೇ ಶಾಲಾ-ಕಾಲೇಜುಗಳಲ್ಲಿ ಬಿತ್ತಿದರೆ ಮಾತ್ರ ಉತ್ತಮ ಸಂಸ್ಕಾರಗಳೆAಬ ಫಸಲು ಬರುತ್ತದೆ.

ಮನೆಗಳಲ್ಲಿ ತಾಯಂದಿರು ತೊಟ್ಟಿಲ ಮಕ್ಕಳಿಂದಲೇ ವಚನಗಳನ್ನು ಹೇಳಿ ಬೆಳೆಸಿದರೆ ಅಂತಹ ಮಕ್ಕಳು ಸನ್ಮಾರ್ಗದಲ್ಲಿ ಸಾಗುತ್ತಾರೆ ಎಂದು ಶ್ರೀಗಳು ವ್ಯಾಖ್ಯಾನಿಸಿದರು.

ಕೊಡಗು ಜಿಲ್ಲಾ ವೀರಶೈವ ಮಹಾಸಭಾ ಅಧ್ಯಕ್ಷ ಹೆಚ್.ವಿ. ಶಿವಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿ ಮಠ - ಮಂದಿರಗಳು, ದೇವಾಲಯಗಳಿಗೆ ಹೆಚ್ಚಾಗಿ ಧಾವಿಸುವ ಮೂಲಕ ಸತ್ ಚಿಂತನೆ, ಸದಾಚಾರಗಳಿಂದ ಉತ್ತಮ ಜೀವನ ರೂಪಿಸಿಕೊಳ್ಳಬಹುದು ಎಂದರು.

ಪ್ರಧಾನ ಕಾರ್ಯದರ್ಶಿ ಶಾಂಬಶಿವಯ್ಯ, ವೀರಶೈವ ಸರ್ಕಾರಿ ನೌಕರರ ಸಂಘದ ಹಿತರಕ್ಷಣಾ ಸಮಿತಿ ಜಿಲ್ಲಾಧ್ಯಕ್ಷ ಎಸ್. ನಂದೀಶ್, ಕಾರ್ಯದರ್ಶಿ ಶಿವಲಿಂಗು, ನಿವೃತ್ತ ನೌಕರರ ಸಂಘದ ಅಧ್ಯಕ್ಷ ಎಂ.ಎಸ್.ಗಣೇಶ, ತೊರೆನೂರು ವೀರಶೈವ ಸಮಾಜದ ಅಧ್ಯಕ್ಷ ಟಿ.ಬಿ. ಜಗದೀಶ್, ಮರೂರು ಪ್ರಗತಿ ಪರ ಕೃಷಿಕ ಹೆಚ್.ಎಸ್. ನಾಗರಾಜು, ಕೊಡಗು ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ಎಸ್. ಮೂರ್ತಿ, ಕಾರ್ಯದರ್ಶಿ ಬಿ. ನಟರಾಜು, ವೀರಶೈವ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಎಂ.ಎಸ್.ಗಣೇಶ್, ಕೃಷಿಕರಾದ ಮಣಜೂರು ಗುರುಲಿಂಗಪ್ಪ, ತೊರೆನೂರು ಸಹಕಾರ ಸಂಘದ ನಿವೃತ್ತ ಸಿಇಓ ಚಂದ್ರಶೇಖರ್ ಇದ್ದರು.