ಮಡಿಕೇರಿ, ಮಾ. ೬: ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಕೊಡಗು ಜಿಲ್ಲಾ ಘಟಕದಿಂದ ತಾ. ೯ ರಂದು ಮಹಿಳೆಯರಿಗಾಗಿ ಕ್ಯಾನ್ಸರ್ ತಪಾಸಣಾ ಶಿಬಿರ ಸೇರಿದಂತೆ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಮಹಿಳಾ ದಿನಾಚರಣೆ ಜರುಗಲಿದೆ ಎಂದು ರೆಡ್ ಕ್ರಾಸ್ ಜಿಲ್ಲಾ ಸಭಾಪತಿ ಬಿ.ಕೆ. ರವೀಂದ್ರ ರೈ ಮಾಹಿತಿ ನೀಡಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ರವೀಂದ್ರ ರೈ, ತಾ. ೯ ರಂದು ಬೆಳಿಗ್ಗೆ ೧೦ ಗಂಟೆಗೆ ಮಡಿಕೇರಿಯ ರೆಡ್ ಬ್ರಿಕ್ಸ್ ಇನ್ ಸತ್ಕಾರ್ ಸಭಾಂಗಣದಲ್ಲಿ ಕ್ಯಾನ್ಸರ್ ತಪಾಸಣಾ ಶಿಬಿರ ಮತ್ತು ಮಹಿಳಾ ದಿನಾಚರಣೆಯನ್ನು ರೆಡ್ ಕ್ರಾಸ್ ಜಿಲ್ಲಾಧ್ಯಕ್ಷರಾಗಿರುವ ಜಿಲ್ಲಾಧಿಕಾರಿ ಎಸ್.ಜೆ. ಸೋಮಶೇಖರ್ ಅಧ್ಯಕ್ಷತೆಯಲ್ಲಿ ಮಡಿಕೇರಿ ನಗರಸಭಾ ಅಧ್ಯಕ್ಷೆ ಕಲಾವತಿ ಉದ್ಘಾಟಿಸಲಿದ್ದಾರೆ. ಹೆಚ್ಚುವರಿ ಜಿಲ್ಲಾಧಿಕಾರಿ ಆರ್. ಐಶ್ವರ್ಯ ಆಶಯ ಭಾಷಣ ಮಾಡಲಿದ್ದಾರೆ. ಕೊಡಗು ಪೊಲೀಸ್ ವರಿಷ್ಠಾಧಿಕಾರಿ ಬಿಂದುಮಣಿ, ವಿಧಾನಪರಿಷತ್ ಮಾಜಿ ಸದಸ್ಯೆ ಶಾಂತೆಯAಡ ವೀಣಾ ಅಚ್ಚಯ್ಯ, ರಾಷ್ಟçಪ್ರಶಸ್ತಿ ಪಡೆದ ಚಿತ್ರ ನಿರ್ದೇಶಕಿ, ನಿರ್ಮಾಪಕಿ ಕೊಟ್ಟುಕೊತ್ತೀರ ಯಶೋಧ ಪ್ರಕಾಶ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಪ್ರಸನ್ನ ಕುಮಾರ್ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಮಡಿಕೇರಿ ತಾಲೂಕಿನ ಅಂಗನವಾಡಿಗಳ ೧೫ ಕಾರ್ಯಕರ್ತೆಯರು, ಸಹಾಯಕಿಯರಿಗೆ ಈ ಸಂದರ್ಭ ಸನ್ಮಾನದ ಮೂಲಕ ಗೌರವಿಸಲಾಗುತ್ತದೆ ಎಂದರು.
ರೆಡ್‌ಕ್ರಾಸ್ ಜಿಲ್ಲಾ ಉಪಾಧ್ಯಕ್ಷ ಅನಿಲ್ ಹೆಚ್.ಟಿ ಮಾತನಾಡಿ, ಉದ್ಘಾಟನಾ ಸಮಾರಂಭದ ಬಳಿಕ ಆಯೋಜಿತ ವಿಚಾರಗೋಷ್ಠಿಯಲ್ಲಿ ಜಿಲ್ಲಾ ಮೀನುಗಾರಿಕೆ ಇಲಾಖೆಯ ಉಪನಿರ್ದೇಶಕಿ ಮಿಲನಾ ಭರತ್ ಅವಳ ಕನಸುಗಳಿಗೊಂದು ರೆಕ್ಕೆ ಕೊಡಿ ವಿಚಾರದ ಬಗ್ಗೆ, ಜಿಲ್ಲಾಸ್ಪತ್ರೆಯ ವೈದ್ಯಾಧಿಕಾರಿ ಡಾ. ಸುಮುಖ್ ಅವರು ಆರೋಗ್ಯದ ಕಡೆ ಗಮನವಿರಲಿ ಎಂಬವಿಚಾರದ ಬಗ್ಗೆ, ವೀರಾಜಪೇಟೆಯ ಯುವ ವಕೀಲರಾದ ಸಿಂಧೂರ ಎನ್ ಸ್ವಾಮಿ ಅವರು ಕಾನೂನು ನಿಮಗೂ ಗೊತ್ತಿರಲಿ ವಿಷಯದ ಬಗ್ಗೆ, ಮಡಿಕೇರಿಯ ಶಿಲ್ಪಾ ರೈ ಯೋಗ ಧ್ಯಾನ ಮತ್ತು ಶಾಂತತೆ ಸಂಬAಧಿತ ವಿಚಾರದ ಬಗ್ಗೆ ಹಾಗೂ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಪ್ರಸೂತಿ ತಜ್ಞೆ ಡಾ.ಬಿ.ಕೆ. ರಾಜೇಶ್ವರಿ ನವೀನ್ ಅವರು ಗರ್ಭಕಂಠ ಕ್ಯಾನ್ಸರ್ ಜಾಗ್ರತಿ ಸಂಬAಧಿತ ಮಾತನಾಡಲಿದ್ದಾರೆ. ವಿಚಾರಗೋಷ್ಟಿಯ ನಡುವೇ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಆಯೋಜಿತವಾಗಿವೆೆ ಎಂದು ತಿಳಿಸಿದರು.
ಜಿಲ್ಲಾ ಖಜಾಂಜಿ ಪ್ರಸಾದ್ ಗೌಡ ಮಾತನಾಡಿ, ತಜ್ಞ ವೈದ್ಯರು ತಪಾಸಣೆಯನ್ನು ನಡೆಸಲಿದ್ದಾರೆ. ೧೪ ವರ್ಷ ಮೇಲ್ಪಟ್ಟವರಲ್ಲಿ ಗರ್ಭಕಂಠ ಕ್ಯಾನ್ಸರ್ ಸಂಖ್ಯೆ ಹೆಚ್ಚಾಗುತ್ತಿದ್ದು ಕೇಂದ್ರ ಸರ್ಕಾರವೂ ಈ ನಿಟ್ಟಿನಲ್ಲಿ ಉಚಿತ ಲಸಿಕೆ ಆಂದೋಲನ ಜಾರಿಗೊಳಿಸಿದೆ. ಆಂದೋಲನದ ಮೂಲಕ ಗರ್ಭಕಂಠ ಕ್ಯಾನ್ಸರ್ ಪ್ರಮಾಣವನ್ನು ಶೇ. ೯೫ ರಷ್ಟು ಇಳಿಸುವ ಗುರಿಯಿದೆ. ಈ ನಿಟ್ಟಿನಲ್ಲಿ ರೆಡ್ ಕ್ರಾಸ್ ಸಂಸ್ಥೆಯೂ ಗರ್ಭಕಂಠ ಕ್ಯಾನ್ಸರ್ ಮಾಹಿತಿ ಮತ್ತು ಜಾಗ್ರತಿಗೆ ಮಹಿಳಾ ದಿನಾಚರಣೆಯಂದು ಆದ್ಯತೆ ನೀಡಿದೆ ಎಂದು ವಿವರಿಸಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಧನAಜಯ್ ಮಾತನಾಡಿ, ರೆಡ್ ಕ್ರಾಸ್ ಜಿಲ್ಲೆಯಾದ್ಯಂತಲಿನ ೨೨ ಕಾಲೇಜುಗಳಲ್ಲಿ ಯೂತ್ ರೆಡ್ ಕ್ರಾಸ್ ಹೊಂದಿದ್ದು, ವಿದ್ಯಾರ್ಥಿಗಳಿಗೆ ಪ್ರಥಮ ಚಿಕಿತ್ಸೆ ಮಾಹಿತಿ, ರಕ್ತದಾನ ಶಿಬಿರ, ತುರ್ತು ಪರಿಸ್ಥಿತಿ ನಿªðಹಣೆ ಸೇರಿದಂತೆ ಹಲವಾರು ಮಹತ್ವದ ವಿಚಾರಗಳ ಬಗ್ಗೆ ತರಬೇತಿ ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಯೂತ್ ರೆಡ್ ಕ್ರಾಸ್ ಸಂಖ್ಯೆಯನ್ನು ಹೆಚ್ಚಿಸಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ರೆಡ್ ಕ್ರಾಸ್ ನಿರ್ದೇಶಕ ಕೆ.ಟಿ. ಉತ್ತಯ್ಯ ಉಪಸ್ಥಿತರಿದ್ದರು.