ಸೋಮವಾರಪೇಟೆ, ಮಾ. ೬: ಇಲ್ಲಿನ ಚೌಡ್ಲು ಮಂಡಲ ಹಿಂದೂ ಸಂಗಮ ಆಯೋಜನಾ ಸಮಿತಿ ವತಿಯಿಂದ ಆಯೋಜಿಸಿದ್ದ ಹಿಂದೂ ಸಂಗಮ ಶೋಭಾಯಾತ್ರೆ ಹಾಗೂ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು.
ಮೆರವಣಿಗೆಯ ಉದ್ದಕ್ಕೂ ಹಿಂದುತ್ವದ ಬಲವರ್ಧನೆಯನ್ನು ಸಾಕ್ಷೀಕರಿಸಿತು. ಹಿಂದೂ ಧರ್ಮದ ವೀರತ್ವ, ಸಂಸ್ಕೃತಿಯನ್ನು ಬಿಂಬಿಸುವ ವಿವಿಧ ಸ್ತಬ್ಧಚಿತ್ರಗಳು ಶೋಭಾಯಾತ್ರೆಗೆ ವಿಶೇಷ ಮೆರುಗು ನೀಡಿದ್ದರೆ, ಕೇಸರಿ ಶಲ್ಯ ಧರಿಸಿದ್ದ ಹಿಂದೂ ಸಮುದಾಯ ಬಾಂಧವರು ಕೈಯಲ್ಲಿ ಕೇಸರಿ ಧ್ವಜ ಹಿಡಿದು ಮೆರವಣಿಗೆ ಸಾಗಿದರು.
ಗ್ರಾಮದ ಮುಖ್ಯ ಬೀದಿಗಳಲ್ಲಿ ಸಂಚರಿಸಿ ಆಲೆಕಟ್ಟೆ ರಸ್ತೆಯ ಮೂಲಕ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಪ್ರಾಂಗಣದ ಆವರಣದಲ್ಲಿ ಮೆರವಣಿಗೆ ಸಮಾವೇಶಗೊಂಡಿತು. ಮೆರವಣಿಗೆಯಲ್ಲಿ ಭಜನಾ ನೃತ್ಯ, ಚಂಡೆ ಮದ್ದಳೆ, ಛದ್ಮವೇಷಗಳು, ಶ್ರೀ ರಾಮನ ಘೋಷಣೆಗಳು, ಬಾಬಾ ಸಾಹೇಬ್ ಅಂಬೇಡ್ಕರ್ ರಥಯಾತ್ರೆ, ದೇಶಪ್ರೇಮವನ್ನು ಪ್ರತಿಬಿಂಬಿಸುವ ವಿವಿಧ ಕಲಾ ಕೃತಿಗಳು ಗಮನ ಸೆಳೆದವು.
ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಬೆಂಗಳೂರು ಉತ್ತರ ಜಿಲ್ಲೆಯ ಸಂಘ ಪ್ರಚಾರಕ್ ಸುಧಾಕರ್ ಮಾತನಾಡಿ, ಹಿಂದೂ ಸಂಗಮ ಇತರ ಧರ್ಮಗಳ ವಿರುದ್ಧದ ಹೋರಾಟವಲ್ಲ; ಹಿಂದೂಗಳ ಐಕ್ಯತೆಯ, ಒಗ್ಗಟ್ಟಿನ, ಸಂಘಟನೆಯ ಬಲವನ್ನು ಹೆಚ್ಚಿಸುವ ಮಂತ್ರವಾಗಿದೆ. ಭಾರತ ದೇಶ ತನ್ನದೇ ಆದ ವಿಶಿಷ್ಟ ಪರಂಪರೆಯನ್ನು ಹೊಂದಿದೆ. ಈ ಕಾರಣದಿಂದಲೇ ಪ್ರಪಂಚಕ್ಕೆ ಭಾರತ ಧಾರ್ಮಿಕತೆಯ ಮಾದರಿ ರಾಷ್ಟçವಾಗಿ ಹೊರಹೊಮ್ಮಿದೆ. ಇಂದಿನ ಮಕ್ಕಳಿಗೆ ದೇಶಪ್ರೇಮದ ಪಾಠವನ್ನು ಪ್ರಾರಂಭಿಕ ಹಂತದಲ್ಲಿಯೇ ಕಲಿಸಿಕೊಡುವ ಮಹತ್ಕಾರ್ಯ ಪೋಷಕರಿಂದ ಆಗಬೇಕಿದೆ ಎಂದರು.
ಯಸಳೂರು ತೆಂಕಲಗೋಡು ಬೃಹನ್ಮಠದÀ ಪೀಠಾಧ್ಯಕ್ಷರಾದ ಚೆನ್ನಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಹಿಂದೂ ರಾಷ್ಟçದ ಏಕತೆಯ ಮನೋಭಾವನೆಯನ್ನು ಮಕ್ಕಳಲ್ಲಿ ಬಿತ್ತುವ ಕಾರ್ಯ ಆಗಬೇಕಿದೆ. ಭಾರತದ ಸ್ವಾತಂತ್ರö್ಯದ ಮತ್ತು ಸನಾತನ ಧರ್ಮದ ವಿಚಾರಗಳನ್ನು ಮಕ್ಕಳಿಗೆ ತಿಳಿಸುವ ಕಾರ್ಯ ನಿರಂತರವಾಗಿ ನಡೆಯಬೇಕು. ಬದುಕಿನ ಮೌಲ್ಯಗಳನ್ನು ಕೇಂದ್ರೀಕರಿಸುವ ಉದ್ದೇಶವೇ ಧರ್ಮದ ಮೂಲವಾಗಿದೆ ಎಂದರು.
ಮAಡಲ ಅಧ್ಯಕ್ಷ ಚಿಂತು, ನಿವೃತ್ತ ಮುಖ್ಯ ಶಿಕ್ಷಕಿ ಲಕ್ಷಿö್ಮÃ, ಹಿಂದೂ ಸಂಗಮ ಸಮಿತಿಯ ಪ್ರಮುಖರಾದ ಸನತ್, ಉದ್ಯಮಿ ಎಸ್.ಎಲ್. ಸೀತಾರಾಮ್, ಹಿರಿಯ ಸ್ವಯಂ ಸೇವಕರಾದ ಕಿಬ್ಬೆಟ್ಟ ಶೇಷಪ್ಪ ಮತ್ತಿತರರು ವೇದಿಕೆಯಲ್ಲಿದ್ದರು.