ನಾಪೋಕ್ಲು, ಮಾ. ೬: ಹುಣ್ಣಿಮೆಯ ಅಂಗವಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಂಘ ಹಾಗೂ ವಿಪತ್ತು ನಿರ್ವಹಣಾ ಶೌರ್ಯ ತಂಡದ ವತಿಯಿಂದ ಜೀವನದಿ ಕಾವೇರಿಗೆ ಮಹಾಆರತಿಯನ್ನು ಅರ್ಪಿಸುವ ಕಾರ್ಯಕ್ರಮ ನಡೆಯಿತು.
ಸಮೀಪದ ಕೊಟ್ಟಮುಡಿ ಸೇತುವೆ ಬಳಿಯ ಕಾವೇರಿ ನದಿ ತಟದಲ್ಲಿ ಆರತಿ ಬೆಳಗಿ ಪ್ರಾರ್ಥನೆ ಸಲ್ಲಿಸಲಾಯಿತು. ಕಾರ್ಯಕ್ರಮದಲ್ಲಿ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಂಘದ ಸುಭಾಷ್ ನಗರ ಒಕ್ಕೂಟದ ಸೇವಾ ಪ್ರತಿನಿಧಿ ಉಮಾಲಕ್ಷ್ಮಿ, ಸಂಜೀವಿನಿ ಒಕ್ಕೂಟದ ಎಂ.ಬಿ.ಕೆ ಯಮುನಾ, ಶೌರ್ಯ ತಂಡದ ಸದಸ್ಯರಾದ ಶರವಣ, ದಿಲೀಶ್ ನಾರಾಯಣ, ನವಜೀವನ ಸಮಿತಿ ಸದಸ್ಯ ಬಾಲಸುಬ್ರಮಣಿ ಹಾಗೂ ರಾಜೇಶ್ವರಿ, ರೋಜಾ ಪಾಲ್ಗೊಂಡಿದ್ದರು.