ಕಣಿವೆ, ಮಾ.೩: ಸರ್ಕಾರದ ಆದೇಶದಂತೆ ವಾಣಿಜ್ಯ ಉದ್ದಿಮೆಗಳ ನಾಮಫಲಕಗಳಲ್ಲಿ ಶೇಕಡ ೬೦ ರಷ್ಟು ಕನ್ನಡ ಭಾಷೆಯನ್ನು ಬಳಕೆ ಮಾಡುವುದು ಕಡ್ಡಾಯವಾಗಿದ್ದು, ಈ ನಿಯಮವನ್ನು ಉಲ್ಲಂಘಿಸಿರುವ ಉದ್ದಿಮೆಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದಾಗಿ ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ಆಡಳಿತ ತಿಳಿಸಿದೆ.

ದಂಡ ವಸೂಲಿ ಮತ್ತು ಪರಿಶೀಲನೆ

ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಈಗಾಗಲೇ ಅನೇಕ ವಾಣಿಜ್ಯ ಸಂಸ್ಥೆಗಳು ಸರ್ಕಾರದ ಮಾರ್ಗಸೂಚಿಗಳನ್ನು ಗಾಳಿಗೆ ತೂರಿ ಮನಬಂದAತೆ ನಾಮಫಲಕಗಳನ್ನು ಅಳವಡಿಸಿರುವುದು ಕಂಡುಬAದಿದೆ. ಅಂತಹ ಉದ್ದಿಮೆಗಳನ್ನು ಗುರುತಿಸಿರುವ ಪಂಚಾಯತ್ ಆಡಳಿತ, ಈಗಾಗಲೇ ದಂಡ ವಿಧಿಸುವ ಪ್ರಕ್ರಿಯೆಯನ್ನು ಆರಂಭಿಸಿದೆ.

ಕನ್ನಡ ಭಾಷೆಯ ಪ್ರಾಮುಖ್ಯತೆಯನ್ನು ಕಡೆಗಣಿಸುವ ಸಂಸ್ಥೆಗಳ ವಿರುದ್ಧ ಶೂನ್ಯ ಸಹನೆ ನೀತಿಯನ್ನು ಅನುಸರಿಸಲಾಗುತ್ತಿದೆ ಎಂದು ಪಂಚಾಯಿತಿ ಪಿಡಿಓ ಸುಮೇಶ್ ತಿಳಿಸಿದ್ದಾರೆ.

ಏಪ್ರಿಲ್ ೧ ರಿಂದ ಪರವಾನಗಿ ರದ್ದತಿ ಎಚ್ಚರಿಕೆ

ಮುಂಬರುವ ೨೦೨೬-೨೭ನೇ ಸಾಲಿನ ನೂತನ ಆರ್ಥಿಕ ವರ್ಷಕ್ಕೆ ಸಂಬAಧಿಸಿದAತೆ ಪಂಚಾಯತ್ ಮಹತ್ವದ ನಿರ್ಧಾರ ಕೈಗೊಂಡಿದೆ. ಏಪ್ರಿಲ್ ೦೧, ೨೦೨೬ ರಿಂದ ವಾಣಿಜ್ಯ ಉದ್ದಿಮೆಗಳು ತಮ್ಮ ವ್ಯಾಪಾರ ಪರವಾನಗಿ ನವೀಕರಣಕ್ಕಾಗಿ ಅರ್ಜಿ ಸಲ್ಲಿಸುವಾಗ, ನಾಮಫಲಕದಲ್ಲಿ ಕನಿಷ್ಟ ೬೦% ಕನ್ನಡ ಭಾಷೆ ಇರುವುದನ್ನು ಕಡ್ಡಾಯವಾಗಿ ದೃಢೀಕರಿಸಬೇಕಿದೆ.

ಕಠಿಣ ಕ್ರಮದ ಎಚ್ಚರಿಕೆ

ಒಂದು ವೇಳೆ ನಿಗದಿತ ಪ್ರಮಾಣದಲ್ಲಿ ಕನ್ನಡ ಭಾಷೆಯನ್ನು ಬಳಸದಿದ್ದಲ್ಲಿ, ಅಂತಹ ಉದ್ದಿಮೆಗಳ ಪರವಾನಗಿಯನ್ನು ರದ್ದುಪಡಿಸಲಾಗುವುದು. ಅಲ್ಲದೆ, ಸರ್ಕಾರದ ನಿಯಮಾನುಸಾರ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಪಿಡಿಓ ಎಚ್ಚರಿಸಿದ್ದಾರೆ.