ಚೆಯ್ಯಂಡಾಣೆ, ಮಾ. ೫: ಪಾರಾಣೆ ಹಿಂದೂ ಸಂಗಮ ಆಯೋಜನ ಸಮಿತಿಯ ವತಿಯಿಂದ ಹಿಂದೂ ಸಂಗಮದ ಅದ್ದೂರಿ ಶೋಭಾಯಾತ್ರೆ ನಡೆಯಿತು.
ಪಾರಾಣೆ ಮೂಲೆ ಅಂಗಡಿಯಿAದ ಆರಂಭವಾದ ಶೋಭಾಯಾತ್ರೆಯ ಮೆರವಣಿಗೆಗೆ ನಿವೃತ್ತ ಯೋಧರಾದ ಕಿರುಂದಾಡು ಗ್ರಾಮದ ಬಿಟ್ಟೀರ ಮನುಕುಮಾರ್ ಚಾಲನೆ ನೀಡಿದರು. ನಂತರ ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ಶೋಭಾಯಾತ್ರೆ ಪಾರಾಣೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮೂಲಕ ತೆರಳಿ ಪ್ರಾಥಮಿಕ ಶಾಲೆಯ ಮೈದಾನದಲ್ಲಿ ಸಮಾಪ್ತಿಗೊಂಡಿತು.
ವಿವಿಧ ವೇಷಾಧಾರಿ ಮಕ್ಕಳು, ಭಾರತಾಂಭೆ ಭಾವಚಿತ್ರ ಒಳಗೊಂಡ ವಾಹನದೊಂದಿಗೆ ಕಲಶ ಹೊತ್ತ ಮಹಿಳೆಯರು, ಕೊಡಗಿನ ವಾಲಗ, ಡೊಳ್ಳು ಕುಣಿತ, ಚಂಡೆವಾದ್ಯದೊAದಿಗೆ ದೇಶ ಭಕ್ತಿಯನ್ನು ಸಾರುವ ಪೋಸ್ಟರ್‌ಗಳು ಹಾಗೂ ವಿವಿಧ ಕಲಾತಂಡಗಳು ಮೆರವಣಿಗೆಯಲ್ಲಿ ಭಾಗಿಯಾಗಿ ಶೋಭಾಯಾತ್ರೆಯ ಮೆರುಗನ್ನು ಹೆಚ್ಚಿಸಿದವು. ಅಧಿಕ ಸಂಖ್ಯೆಯಲ್ಲಿ ಹಿಂದೂ ಸಮುದಾಯದ ಪುರುಷರು, ಮಹಿಳೆಯರಾದಿಯಾಗಿ ಕೇಸರಿ ಶಲ್ಯ ಧರಿಸಿ, ಬಾವುಟ ಹಿಡಿದು ಮೆರವಣಿಗೆಯಲ್ಲಿ ಸಾಗಿಬಂದರು. ಮೆರವಣಿಗೆ ಉದ್ದಕ್ಕೂ ನಾಟ್ಯಾಂಜಲಿ ಮಕ್ಕಳಿಂದ ಸಾಂಪ್ರದಾಯಿಕ ಭಜನೆ ನೃತ್ಯ ಪ್ರದರ್ಶನ ನೋಡುಗರ ಗಮನ ಸೆಳೆಯಿತು.
ಪಾರಾಣೆ ಪ್ರಾಥಮಿಕ ಶಾಲೆಯ ಮೈದಾನದಲ್ಲಿ ನಡೆದ ಸಭಾ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಹಿಂದೂ ಸಮಾಜದ ಗಣ್ಯರು ಉದ್ಘಾಟಿದರು. ಪಾರಾಣೆ ಹಿಂದೂ ಸಂಗಮ ಮಂಡಲ ಅಧ್ಯಕ್ಷ ಎಳ್ತಂಡ ಬೋಪಣ್ಣ ಮಾತನಾಡಿ, ಮುಂದಿನ ಯುವ ಪೀಳಿಗೆಗೆ ಧರ್ಮ ಮತ್ತು ಸಂಸ್ಕೃತಿಯ ಮಹತ್ವದ ಅರಿವು ಮೂಡಿಸಿ ಎಲ್ಲರನ್ನು ಒಗ್ಗೂಡಿಸುವಂತಾಗಬೇಕು ಎಂದರು.
ಮಹಿಳಾ ಭಾಷಣಗಾರರಾಗಿ ಪಾಲ್ಗೊಂಡ ಕದ್ದಣಿಯಂಡ ವಂದನಾ ಚಿಣ್ಣಪ್ಪ ಮಾತನಾಡಿ, ಇಂದಿನ ಕಾಲಘಟ್ಟದಲ್ಲಿ ನಮ್ಮ ಹೆಣ್ಣು ಮಕ್ಕಳ ರಕ್ಷಣೆಯಾಗಬೇಕು. ನಮ್ಮ ಹೆಣ್ಣು ಮಕ್ಕಳು ಮತಾಂತರಕ್ಕೆ ಒಳಗಾಗಬಾರದು, ಅದಕ್ಕೆ ಬೇಕಾದ ಅರಿವು ಮೂಡಿಸಬೇಕೆಂದರು.
ಮುಖ್ಯ ಅತಿಥಿಗಳಾಗಿ ರಾಷ್ಟಿçÃಯ ಸ್ವಯಂ ಸೇವಕ ಸಂಘದ ಸಹ ಸಂಪರ್ಕ ಸಂಚಾಲಕ ಕುಟ್ಟಂಡ ಪ್ರಿನ್ಸ್ ಬೋಪಣ್ಣ ದಿಕ್ಸೂಚಿ ಭಾಷಣ ಮಾಡಿ ಎಲ್ಲಾ ಗ್ರಾಮಗಳ ಮಂಡಲಗಳಲ್ಲಿ ಈ ರೀತಿಯ ಹಿಂದೂ ಸಂಗಮದ ಮುಖಾಂತರ ಆ ಭಾಗದ ಹಿಂದೂಗಳನ್ನು ಸೇರಿಸಿಕೊಂಡು ಹಿಂದೂ ಧರ್ಮ, ನಮ್ಮ ಸಂಸ್ಕೃತಿ, ಸಂಪ್ರದಾಯ, ನಮ್ಮ ನಾಗರಿಕತೆ ಪರಂಪರೆಯನ್ನು ಸ್ಮರಣೆ ಮಾಡಿ, ನೆನಪು ಮಾಡಿ ಇವತ್ತಿನ ಯುವ ಪೀಳಿಗೆಗೆ ನಮ್ಮ ಚಿಂತನೆಯ ಬಗ್ಗೆ ಅರಿವು ಮೂಡಿಸಲಾಗುವುದು ಎಂದರು. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೊಣಂಜಗೇರಿ ಗ್ರಾಮದ ಪೊಂಜAಡ ಮಂದಣ್ಣ ವಹಿಸಿ ಮಾತನಾಡಿದರು. ಚೆಯ್ಯಂಡಾಣೆಯಲ್ಲಿ ಕಾರ್ಯಕ್ರಮ ನಿಮಿತ್ತ ತೆರಳುತ್ತಿದ್ದ ರಾಷ್ಟಿçÃಯ ಸ್ವಯಂ ಸೇವಕ ಸಂಘದ ಪ್ರಾಂತ ಸಹ ಕಾರ್ಯದರ್ಶಿ ಶರಣ್ ಪಂಪ್‌ವೆಲ್ ಕಾರ್ಯಕ್ರಮ ಆಯೋಜನಾ ಸ್ಥಳಕ್ಕೆ ಭೇಟಿ ನೀಡಿ ಶುಭ ಹಾರೈಸಿದರು.
ಈ ಸಂದರ್ಭ ಹಿಂದೂ ಸಂಗಮದ ಉಪಾಧ್ಯಕ್ಷೆ ಬೊಳ್ಳಚೆಟ್ಟಿರ ಜಯಂತಿ, ಕಾರ್ಯದರ್ಶಿ ಪಳಂಗAಡ ಬೆಳ್ಯಪ್ಪ, ವಿಶ್ವ ಹಿಂದೂ ಪರಿಷತ್ ಜಿಲ್ಲಾ ಪ್ರಚಾರ ಪಮುಖ್ ಬೊಳ್ಕಾರಂಡ ಶ್ಯಾನ್, ಸೇರಿದಂತೆ ಜನಪ್ರತಿನಿಧಿಗಳು, ಸಂಘ-ಸAಸ್ಥೆ ಪ್ರಮುಖರು, ಹಿಂದೂ ಸಂಗಮ ಮಂಡಲದ ಪದಾಧಿಕಾರಿಗಳು, ಕಾರ್ಯಕರ್ತರು, ಮತ್ತಿತರರು ಇದ್ದರು. ಸೂರಜ್ ವಾಟೆಕಾಡು ಪ್ರಾರ್ಥಿಸಿ, ಅಪ್ಪನೆರವಂಡ ರಾಜೇಶ್ ಸ್ವಾಗತಿಸಿ, ಆಂಗೀರ ಕುಸುಮ ನಿರೂಪಿಸಿ, ವಂದಿಸಿದರು.