ಮಡಿಕೇರಿ, ಮಾ. ೧: ಮಂಜಿನ ನಗರಿ ಮಡಿಕೇರಿಯಲ್ಲಿ ಭಾನುವಾರ ಬೆಳಿಗ್ಗೆ ವಿಶೇಷವಾದ ಅರ್ಥಪೂರ್ಣವಾದ ಕಾರ್ಯಕ್ರಮವೊಂದು ಪೊಲೀಸ್ ಇಲಾಖೆಯ ಮುಂದಾಳತ್ವದಲ್ಲಿ ಜರುಗಿತು. ನೂರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು, ಸಾರ್ವಜನಿಕರು, ಸಂಘ ಸಂಸ್ಥೆಗಳ ಪ್ರಮುಖರು, ಅಧಿಕಾರಿ ವರ್ಗದವರು ಸೇರಿ ನಗರ ಮುಖ್ಯ ರಸ್ತೆಯಲ್ಲಿ ಮಾದಕ ವಸ್ತುವಿನ ದುಷ್ಪರಿಣಾಮ, ಸೈಬರ್ ಅಪರಾಧ, ಆರೋಗ್ಯ ಕಾಳಜಿಯ ಸಂದೇಶದ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಮೆರಥಾನ್‌ನಲ್ಲಿ ಪಾಲ್ಗೊಂಡು ಸಮಾಜಕ್ಕೆ ಸಂದೇಶ ನೀಡುವ ನಿಟ್ಟಿನಲ್ಲಿ ಕೈಜೋಡಿಸಿದರು.
ಕರ್ನಾಟಕ ಪೊಲೀಸ್ ವತಿಯಿಂದ ಪೊಲೀಸ್ ರನ್ ಕಾರ್ಯಕ್ರಮವನ್ನು ರಾಜ್ಯಾದ್ಯಂತ ಹಮ್ಮಿಕೊಳ್ಳಲಾಗಿದ್ದು, ಕೊಡಗು ಪೊಲೀಸ್ ವತಿಯಿಂದಲೂ ಈ ಜನಜಾಗೃತಿಗಾಗಿ ಮೆರಥಾನ್ ಹಮ್ಮಿಕೊಳ್ಳಲಾಗಿತ್ತು. ಮಡಿಕೇರಿಯ ಫೀ.ಮಾ. ಕಾರ್ಯಪ್ಪ ವೃತ್ತ (ಸುದರ್ಶನ)ದಲ್ಲಿ ಕಾರ್ಯಕ್ರಮ ಆರಂಭಗೊAಡಿತು. ಬಳಿಕ ಸಾಮೂಹಿಕ ಮೆರಥಾನ್ ಜಿ.ಟಿ. ವೃತ್ತ, ಪೊಲೀಸ್ ಠಾಣೆ, ಹಳೇ ಖಾಸಗಿ ಬಸ್ ನಿಲ್ದಾಣ, ಐಜಿ ವೃತ್ತ, ಕಾಲೇಜು ರಸ್ತೆಯ ಮೂಲಕ ಜಿಲ್ಲಾ ಪೊಲೀಸ್ ಮೈದಾನಕ್ಕೆ ಸಾಗಿತು.
ಸ್ವತಃ ಎಸ್‌ಪಿ ಬಿಂದುಮಣಿ ಸೇರಿದಂತೆ ಪೊಲೀಸ್ ಹಾಗೂ ಇನ್ನಿತರ ಅಧಿಕಾರಿಗಳು, ಸಂಘ - ಸಂಸ್ಥೆಗಳ ಪ್ರಮುಖರು, ನಗರ ವ್ಯಾಪ್ತಿಯ ಶಾಲಾ - ಕಾಲೇಜು ವಿದ್ಯಾರ್ಥಿಗಳು, ವಿವಿಧ ಹಾಸ್ಟೆಲ್‌ಗಳಲ್ಲಿನ ವಿದ್ಯಾರ್ಥಿಗಳು, ಅತ್ಯುತ್ಸಾಹದೊಂದಿಗೆ ಮೆರಥಾನ್ ಓಟದ ಮೂಲಕ ಜಾಗೃತಿಯ ಸಂದೇಶ ಸಾರಿದರು.
ಬೆಳಿಗ್ಗೆ ೭ ಗಂಟೆಯ ವೇಳೆಗೆ ಸುದರ್ಶನ ವೃತ್ತದಲ್ಲಿ ಮಾಜಿ ಒಲಂಪಿಯನ್ ಅಶ್ವಿನಿ ನಾಚಪ್ಪ ಅವರು ಕಾರ್ಯಕ್ರಮ ಉದ್ಘಾಟಿಸಿದರು. ಎಸ್‌ಪಿ ಬಿಂದುಮಣಿ ಅವರು ಆಗಸಕ್ಕೆ ಗುಂಡು ಹಾರಿಸುವ ಮೂಲಕ ಓಟ ಆರಂಭಗೊAಡಿತು.
ಕಾಳಜಿ ವಹಿಸಲು ಕರೆ
ಆರಂಭದಲ್ಲಿ ಮಾತನಾಡಿದ ಬಿಂದುಮಣಿ ಅವರು ಮಾದಕ ವಸ್ತು ಬಳಕೆಯ ದುಷ್ಪರಿಣಾಮ, ಸೈಬರ್ ಅಪರಾಧ ತಡೆ ಹಾಗೂ ಆರೋಗ್ಯ ಕಾಳಜಿಗಾಗಿ ಜನಜಾಗೃತಿ ಮೂಡಿಸಲು ಪೊಲೀಸ್ ೪ಐದನೇ ಪುಟಕ್ಕೆ
(ಮೊದಲ ಪುಟದಿಂದ) ಇಲಾಖೆ ಮೂಲಕ ಪೊಲೀಸ್ ರನ್ ಆಯೋಜಿಸಲಾಗಿದೆ. ಇದಕ್ಕೆ ಉತ್ತಮ ಸ್ಪಂದನ ದೊರೆತಿರುವುದು ಸಂತಸ ಮೂಡಿದೆ. ಎಲ್ಲರೂ ಈ ಬಗ್ಗೆ ಜಾಗ್ರತೆ ವಹಿಸಬೇಕು. ಮುಖ್ಯವಾಗಿ ವಿದ್ಯಾರ್ಥಿಗಳು ಹಾಗೂ ಯುವ ಸಮೂಹಕ್ಕೆ ಅರಿವು ಮೂಡಿಸುವುದು ಅಗತ್ಯವಿದೆ ಎಂದರು.
ಅಶ್ವಿನಿ ನಾಚಪ್ಪ ಅವರು ಮಾತನಾಡಿ, ದೈಹಿಕ ಕ್ಷಮತೆಯೊಂದಿಗೆ, ಆರೋಗ್ಯ ಕಾಪಾಡಿಕೊಳ್ಳಬೇಕು. ಆರೋಗ್ಯಕರವಾಗಿದ್ದಲ್ಲಿ ಮಾದಕ ವ್ಯಸನಗಳಿಂದ ದೂರಾಗಬಹುದು. ಈ ನಿಟ್ಟಿನಲ್ಲಿ ಪೊಲೀಸ್ ಇಲಾಖೆಯ ಈ ಕಾರ್ಯಕ್ರಮ ಶ್ಪಾಘನೀಯ ಎಂದರು.
ಅತಿಥಿಗಳಾಗಿ ಪಾಲ್ಗೊಂಡಿದ್ದ ಡಾ. ಅಮೃತ್‌ನಾಣಯ್ಯ, ಲೋಕಾಯುಕ್ತ ಎಸ್‌ಪಿ ಬಾರಿಕೆ ದಿನೇಶ್‌ಕುಮಾರ್, ಡಿಸಿಎಫ್ ಅಭಿಷೇಕ್ ಅವರುಗಳು ಮಾತನಾಡಿ, ಸಾಮಾಜಿಕ ಪಿಡುಗಾದ ಮಾದಕ ವ್ಯಸನ, ಸೈಬರ್ ಅಪರಾಧದ ಬಗ್ಗೆ ಮುಂಜಾಗ್ರತೆ ವಹಿಸಲು ಸಲಹೆಯಿತ್ತರು.
ಓಟದ ಸಂದರ್ಭ ಜಿ.ಟಿ. ವೃತ್ತ ಪೊಲೀಸ್ ಠಾಣೆ, ಕಾಲೇಜು ರಸ್ತೆಯಲ್ಲಿ ಕುಡಿಯುವ ನೀರಿನ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು. ನಗರದ ಸಾಯಿ ವಿದ್ಯಾರ್ಥಿನಿಲಯ, ಬಿಸಿಎಂ ಇಲಾಖೆಯ ವಿದ್ಯಾರ್ಥಿನಿಲಯದ ವಿದ್ಯಾರ್ಥಿಗಳು ಕೂಡಿಗೆ ಸೈನಿಕ ಶಾಲೆ, ಗೋಣಿಕೊಪ್ಪ ಕಾಪ್ಸ್ನ ವಿದ್ಯಾರ್ಥಿಗಳು ಹೆಜ್ಜೆ ಹಾಕಿದರು.
ಎಸ್‌ಪಿ ಬಿಂದುಮಣಿ, ಡಾ. ಅಮೃತ್‌ನಾಣಯ್ಯ, ಡಿಸಿಎಫ್ ಅಭಿಷೇಕ್, ಎಸಿಎಫ್ ಸೆಂಧಿಲ್‌ಕುಮಾರ್ ಸೇರಿದಂತೆ ಹಲವಾರು ಪ್ರಮುಖರು ಹೆಜ್ಜೆ ಹಾಕುವ ಮೂಲಕ ಉತ್ತೇಜನ ನೀಡಿದರು. ಡಿಎಆರ್ ಮೈದಾನದಲ್ಲಿ ವಿಜೇತರಿಗೆ ಪದಕ ವಿತರಣೆ, ಉಪಹಾರ ವ್ಯವಸ್ಥೆಯೊಂದಿಗೆ ಕಾರ್ಯಕ್ರಮ ಯಶಸ್ಸು ಕಂಡಿತು.
ಕಾರ್ಯಕ್ರಮದಲ್ಲಿ ಉಪವಿಭಾಗಾಧಿಕಾರಿ ನಿತಿನ್ ಚಕ್ಕಿ ಸೇರಿದಂತೆ ಚೇಂಬರ್ ಆಫ್ ಕಾಮರ್ಸ್ನ ಸಂತೋಷ್ ಅಣ್ವೇಕರ್, ಜಿಲ್ಲಾ ಚೇಂಬರ್ ಉಪಾಧ್ಯಕ್ಷ ಅಂಬೆಕಲ್ ನವೀನ್, ಕಿಮ್ಸ್ನ ಡೀನ್ ಡಾ. ವಿಶಾಲ್ ಕುಮಾರ್, ಜಿಲ್ಲಾ ಸರ್ಜನ್ ಡಾ. ನಂಜುAಡಯ್ಯ, ನಗರಸಭಾ ಸದಸ್ಯರಾದ ಅರುಣ್ ಶೆಟ್ಟಿ, ಸತೀಶ್, ಸಬಿತಾ, ಜನಪದ ಪರಿಷತ್ ಅಧ್ಯಕ್ಷ ಬಿ.ಜಿ. ಅನಂತಶಯನ, ಡಿವೈಎಸ್‌ಪಿಗಳಾದ ಸೂರಜ್, ಚಂದ್ರಶೇಖರ್, “ಶಕಿ'' ಸಂಪಾದಕ ಜಿ. ಚಿದ್ವಿಲಾಸ್, ದಸರಾ ದಶಮಂಟಪ ಸಮಿತಿ ಅಧ್ಯಕ್ಷ ರಾಜೇಶ್ ಅಣ್ವೇಕರ್, ವಕೀಲರಾದ ಕವನ್ ಸೇರಿದಂತೆ ಲಯನ್ಸ್, ರೋಟರಿ ಮತ್ತಿತರ ಸಂಘ ಸಂಸ್ಥೆಗಳ ಪ್ರಮುಖರು ಭಾಗಿಗಳಾಗಿದ್ದರು.
ಓಟಕ್ಕೂ ಮುನ್ನ ವಿಕ್ರಂ ಜಾದೂಗಾರ್ ಅವರಿಂದ ಈ ಕುರಿತ ಜಾಗೃತಿಯ ಪ್ರದರ್ಶನ ಏರ್ಪಡಿಸಲಾಗಿತ್ತು. ನಗರ ವೃತ್ತ ನಿರೀಕ್ಷಕ ಪಿ.ಕೆ. ರಾಜು ಹಾಗೂ ಕುಮಾರಿ ಹರ್ಷಿತಾ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.