ಮಡಿಕೇರಿ, ಮಾ. ೧: ನಗರದ ಪತ್ರಿಕಾಭವನ ಬಳಿಯಿಂದ ಜಿಲ್ಲಾ ಕೈಗಾರಿಕಾ ಕೇಂದ್ರದವರೆಗಿನ ರಸ್ತೆಗೆ ‘ಶಕ್ತಿ’ ಸ್ಥಾಪಕ ಸಂಪಾದಕರಾದ ಗೋಪಾಲಕೃಷ್ಣ ಅವರ ಹೆಸರನ್ನಿಡಲು ನಗರಸಭೆ ಅನುಮೋದನೆ ನೀಡಿದ್ದು, ಈ ಹೆಸರಿನ ರಸ್ತೆಯನ್ನು ತಾ. ೪ ರಂದು ಉದ್ಘಾಟಿಸಲಾಗುತ್ತಿದೆ.

ಕೊಡಗು ಪತ್ರಕರ್ತರ ಸಂಘದಿAದ ತಾ. ೪ ರಂದು ಆಯೋಜಿತ ಕಾರ್ಯಕ್ರಮದಲ್ಲಿ ಬೆಳಿಗ್ಗೆ ೧೦.೩೦ಕ್ಕೆ ಪತ್ರಿಕಾಭವನ ಮುಂಭಾಗದಲ್ಲಿ ರಸ್ತೆಯ ನಾಮಫಲಕವನ್ನು ಮಡಿಕೇರಿ ಕ್ಷೇತ್ರ ಶಾಸಕ ಡಾ. ಮಂತÀರ್ ಗೌಡ ಅನಾವರಣಗೊಳಿಸಲಿದ್ದಾರೆ. ಬೆ,. ೧೦.೪೫ ಗಂಟೆಗೆ ರೆಡ್ ಬ್ರಿಕ್ಸ್ ಇನ್ ಸತ್ಕಾರ್ ಸಭಾಂಗಣದಲ್ಲಿ ನಗರಸಭೆ ಅಧ್ಯಕ್ಷೆ ಕಲಾವತಿ ಅಧ್ಯಕ್ಷತೆಯಲ್ಲಿ ಆಯೋಜಿತ ಕಾರ್ಯಕ್ರಮದಲ್ಲಿ ಶಾಸಕ ಡಾ. ಮಂತÀರ್ ಗೌಡ, ನಗರಸಭೆಯ ಉಪಾಧ್ಯಕ್ಷ ಮಹೇಶ್ ಜೈನಿ, ನಗರಸಭಾ ಸದಸ್ಯ, ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಬಿ.ವೈ.ರಾಜೇಶ್, ನಗರಸಭೆಯ ಪೌರಾಯುಕ್ತ ಹೆಚ್. ಆರ್.ರಮೇಶ್, ಶಕ್ತಿ ಪತ್ರಿಕೆಯ ಪ್ರಧಾನ ಸಂಪಾದಕ ಜಿ. ರಾಜೇಂದ್ರ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದು ಕೊಡಗು ಪತ್ರಕರ್ತರ ಸಂಘದ ಅಧ್ಯಕ್ಷ ಅನಿಲ್ ಎಚ್.ಟಿ. ಮಾಹಿತಿ ನೀಡಿದ್ದಾರೆ.